ನ್ಯಾಷನಲ್ ಡೆಸ್ಕ್ ಕರ್ನಾಟಕ ಟಿವಿ : ಇಸ್ರೇಲ್, ಇರಾನ್ನ ಪ್ರಮುಖ ನಗರಗಳ ಮೇಲೆ ಅಟ್ಯಾಕ್ ಮಾಡೋ ಮೂಲಕ ನೂರಾರು ಜನರು ನಾಮಾವಶೇಷವಾಗುತ್ತಿದ್ದಾರೆ. ಇರಾನ್ ಕೂಡ ತನ್ನಲ್ಲಿಯ ಕ್ಷಿಪಣಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಡ್ರೋನ್ಗಳನ್ನು ಹಾರಿಸಿ ಇಸ್ರೇಲ್ ಮೇಲೆ ದಾಳಿ ನಡೆಸಿದೆ.
ಈ ಎರಡೂ ದೇಶಗಳ ನಡುವಿನ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧದ ಹಾದಿ ಹಿಡಿದಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕವು ಈ ಕಾಳಗಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ನೀಡಿದೆ. ಈಗಾಗಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಸರ್ವೊಚ್ಚ ನಾಯಕ ಅಯತ್ತೊಲ್ಲಾ ಅಲಿ ಖಮೇನಿಗೆ ಬೇಷರತ್ತಾಗಿ ಶರಣಾಗುವಂತೆ ಸೂಚಿಸಿದ್ದಾರೆ. ಅಲ್ಲದೆ ಸುಪ್ರೀಂ ಲೀಡರ್ ಎಲ್ಲಿ ಅಡಗಿ ಕುಳಿತ್ತಿದ್ದಾನೆ ಎನ್ನುವುದು ನಮಗೆ ಗೊತ್ತಿದೆ. ಆದರೆ ಅವನನ್ನು ನಾವು ಈಗ ಸದ್ಯ ಕೊಲ್ಲುವುದಿಲ್ಲ, ಅವನು ಶರಣಾಗಲಿ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಖಮೇನಿ, ಈ ಯುದ್ಧದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಿದರೆ ಅದು ಭರಿಸಲಾಗದ ನಷ್ಟಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
ಇಷ್ಟು ದಿನಗಳ ಕಾಲ ಮೌನವಾಗಿದ್ದ ಟ್ರಂಪ್ ಇದೀಗ ಇರಾನ್ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕಾಗಿಯೇ ರಹಸ್ಯವಾಗಿ ದಾಳಿಗೆ ಬೇಕಾದ ತಯಾರಿಯಲ್ಲಿ ತೊಡಗಿದ್ದಾರೆ. ಬರೀ ಟ್ರಂಪ್ ಗ್ರೀನ್ ಸಿಗ್ನಲ್ ಕೊಟ್ರೆ ಸಾಕು ಆ ಕ್ಷಣವೇ ಇರಾನ್ ಮೇಲೆ ಅಟ್ಯಾಕ್ ಮಾಡುವಷ್ಟರ ಮಟ್ಟಿಗೆ ಪ್ಲಾನ್ ರೂಪಿಸಲಾಗುತ್ತಿದೆ. ಈಗಾಗಲೇ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆಯೇ ಹೇಳಿರುವ ಅಮೆರಿಕ ಅಧ್ಯಕ್ಷ, ನಾವು ಇರಾನ್ ಮೇಲೆ ದಾಳಿ ಮಾಡಬಹುದು, ಇಲ್ಲದೆ ಇರಬಹುದು, ಅದನ್ನು ನಾನು ಹೇಳುವುದಿಲ್ಲ ಎಂದಿದ್ದಾರೆ. ಈ ಮೊದಲಿನಿಂದಲೂ ಟ್ರಂಪ್ ಬಗ್ಗೆ ನಾವು ಗಮನಿಸಿದಾಗ ಜಾಗತಿಕ ಮಟ್ಟದ ಆಘಾತಕಾರಿ, ವಿವಾದಾತ್ಮಕ ಹಾಗೂ ಆಕ್ಷೇಪಾರ್ಹ ನಿರ್ಣಯಗಳಿಂದಲೇ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಯಾವ ಕ್ಷಣದಲ್ಲಿ ಏನು ಮಾಡುತ್ತಾರೆ ಎನ್ನುವುದು ತಿಳಿಯುವುದು ಕೂಡ ಕಷ್ಟ.
ಆದರೆ ಇದೇ ಟ್ರಂಪ್ ಇರಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಲು ಮುಂದಾದರೆ ತಮ್ಮಲ್ಲಿಯ ಯಾವೆಲ್ಲ ಯುದ್ಧಸಾಮಗ್ರಿಗಳನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ಸದ್ಯಕ್ಕೆ ಎಲ್ಲರಲ್ಲಿ ಮೂಡಿರುವ ಕುತೂಹಲವಾಗಿದೆ. ಯಾಕೆಂದರೆ ಅಮೆರಿಕಾದ ಮಿಲಿಟರಿ ಹೆಸರು ಕೇಳಿದರೆ ಸಾಕು ಯುದ್ಧಕ್ಕೆ ಹೋಗುವ ಮನಸ್ಸು ಮಾಡುವುದಿರಲಿ, ಆ ಕುರಿತು ಯೋಚನೆ ಮಾಡುವುದಕ್ಕೂ ಹೋಗುವುದಿಲ್ಲ. ಅಷ್ಟೊಂದು ಪರಿಣಾಮಕಾರಿ ಇರುವ ಅತ್ಯಾಧುನಿಕ ಯುದ್ಧ ಸಾಮಗ್ರಿಗಳು ಎಂತಹದ್ದೆ ವೈರಿಯ ಎದೆಯನ್ನಾದರೂ ನಡುಗಿಸಿ ಬಿಡುತ್ತವೆ. ಆದರೆ, ತನ್ನ ಮೇಲೆ ಯುದ್ಧಕ್ಕೆ ಬರುವ ಧಮ್ಮು ತಾಕತ್ತಿನ ರಾಷ್ಟ್ರ ಯಾವುದು ಇಲ್ಲವೇನೋ. ಹಾಗಂತ ಯಾರೂ ಮಿಸೈಲ್ ಉಡಾಯಿಸುವುದಿಲ್ಲ ಎಂದು ದೊಡ್ಡಣ್ಣ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಸಾಧ್ಯವೂ ಇಲ್ಲ.
ಏಕೆಂದರೆ ಇವತ್ತು ದೊಡ್ಡಣ್ಣನ ತೋಳ್ಬಲ ಜಾಸ್ತಿ ಇರುವುದಕ್ಕಾಗಿಯೇ ಇತರ ರಾಷ್ಟ್ರಗಳು ಅಮೆರಿಕದೊಂದಿಗೆ ಜಗಳಕ್ಕಿಳಿಯುತ್ತಿಲ್ಲ. ತನ್ನ ಬತ್ತಳಿಕೆಯಲ್ಲಿ ಈಗಾಗಲೇ ಹಲವು ಯುದ್ಧ ಸಾಮಗ್ರಿಗಳನ್ನು ಹೊಂದಿರುವ ಅಮೆರಿಕ ಡೂಮ್ಸ್ ಡೇ ಎನ್ನುವ ವಿಶೇಷ ಯುದ್ಧ ವಿಮಾನವನ್ನು ಇಟ್ಟುಕೊಂಡಿದೆ. ಅತ್ಯಾಧುನಿಕ ಹಾಗೂ ಅಡ್ವಾನ್ಸಡ್ಡ್ ಟೆಕ್ನಾಲಜಿಯ ಈ ವಿಮಾನವು ತನ್ನ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದೆ. ಮುಖ್ಯವಾಗಿ ಶತ್ರು ರಾಷ್ಟ್ರಗಳು ತನ್ನ ಮೇಲೆ ಯಾವುದೇ ರೀತಿಯ ದಾಳಿಯನ್ನು ನಡೆಸಿದರೂ ಅದರಿಂದ ಬಚಾವ್ ಆಗೋ ಸಾಮರ್ಥ್ಯವನ್ನು ಈ ವಿಮಾನಕ್ಕಿದೆ. ತನ್ನಲ್ಲಿರುವ ನ್ಯೂಕ್ಲೀಯರ್ ಪವರ್ ಪ್ರೊಟೆಕ್ಟರ್ನಿಂದ ಪರಮಾಣು ಬಾಂಬ್ ಸ್ಫೋಟದಲ್ಲಿ ಬಿಡುಗಡೆಯಾಗುವ ಹೊರಗಿನ ಶಾಖವನ್ನು ತಡೆಯುತ್ತದೆ.
ಅಲ್ಲದೆ ಅದರ ರೇ ಗುಮ್ಮಟದಲ್ಲಿರುವ 67 ಉಪಗ್ರಹಗಳನ್ನು ನುಂಗುವ ಶಕ್ತಿಯ ಜೊತೆಗೆ ಪ್ರಪಂಚದ ಯಾವುದೇ ಮೂಲೆಯಿಂದಲಾದರೂ ಸಂವಹನ ಸಾಧಿಸಲು ಸಾಧ್ಯವಾಗುವಂತಹ ಆಂಟೆನಾಗಳನ್ನು ಹೊಂದಿದೆ. ಇದೊಂದು ಅಮೆರಿಕ ವಾಯುಪಡೆಯಿಂದ ನಿರ್ವಹಿಸಲ್ಪಡುವ ಹೆಚ್ಚು ವಿಶೇಷವಾದ ವಿಮಾನವಾಗಿದ್ದು, ರಾಷ್ಟ್ರೀಯ ವಾಯುಯಾನದ ಕಾರ್ಯಾಚರಣೆ ಕೇಂದ್ರ ಆಗಿ ಕಾರ್ಯನಿರ್ವಹಿಸುತ್ತದೆ. ಪರಮಾಣು ಯುದ್ಧ, ದೊಡ್ಡ ಪ್ರಮಾಣದ ಸಂಘರ್ಷ ಅಥವಾ ನಿಯಮಿತ ಕಮಾಂಡ್ ಮೂಲಸೌಕರ್ಯವನ್ನು ಅಡ್ಡಿಪಡಿಸುವ ಯಾವುದೇ ದುರಂತ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಮೆರಿಕ ಸರ್ಕಾರಕ್ಕೆ ಮೊಬೈಲ್ ಕಮಾಂಡ್ ಕೇಂದ್ರವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿರುವುದರಿಂದ ಇ-48 ನೈಟ್ವಾಚ್ ಅನ್ನು “ಡೂಮ್ಸ್ಡೇ ಪ್ಲೇನ್ ಎಂದು ಕರೆಯಲಾಗುತ್ತದೆ.
ಈ ವಿಮಾನವು ಜಲಾಂತರ್ಗಾಮಿ ನೌಕೆಗಳು, ಬಾಂಬರ್ಗಳು ಮತ್ತು ಕ್ಷಿಪಣಿಗಳು ಸೇರಿದಂತೆ ಅಮೆರಿಕ ಪರಮಾಣು ಪಡೆಗಳ ಪೂರ್ಣ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂದುವರಿದ ಸಂವಹನ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿದೆ. ಈ ಯುದ್ಧ ವಿಮಾನವು ದೀರ್ಘಕಾಲ ಅಂದರೆ ಒಂದು ವಾರದವರೆಗೂ ಗಾಳಿಯಲ್ಲಿ ಹಾರಬಲ್ಲದು. 35.4 ಗಂಟೆಗಳ ಕಾಲ ದಾಖಲಾದ ಅತಿ ಉದ್ದದ ಹಾರಾಟವನ್ನು ನಡೆಸಿದೆ. ಅಲ್ಲದೆ ಗಾಳಿಯಲ್ಲಿಯೂ ಇಂಧನ ತುಂಬಿಸುವ ಕಾರ್ಯಕ್ಷಮತೆ ಹೊಂದಿದೆ. ಪ್ರಮುಖವಾಗಿ ಪರಮಾಣು ಸ್ಫೋಟಗಳು, ಸೈಬರ್ ದಾಳಿಗಳು ಮತ್ತು ವಿದ್ಯುತ್ಕಾಂತೀಯ ಪಲ್ಸ್ಗಳನ್ನು ತಡೆದುಕೊಳ್ಳಲು ನಿರ್ಮಿಸಲ್ಪಟ್ಟಿವೆ. ಅಗತ್ಯವಿದ್ದರೆ ಇದು ಪ್ರತೀಕಾರದ ಕ್ಷಿಪಣಿ ದಾಳಿಗಳನ್ನು ನಡೆಸಲೂಬಹುದು. ಅಷ್ಟೊಂದು ಮುಂದುವರೆದ ಹಾಗೂ ತೀವ್ರ ಪರಿಣಾಮಕಾರಿ ಶಕ್ತಿ, ಸಾಮರ್ಥ್ಯವನ್ನು ಹೊಂದಿರುವ ವಿಮಾನವಾಗಿದೆ.
ಇನ್ನೂ ಜಾಗತಿಕವಾಗಿ ತನ್ನ ಬಲಿಷ್ಠ ಶಕ್ತಿಯಿಂದ ಗುರುತಿಸಿಕೊಂಡಿರುವ ಅಮೆರಿಕದ ಹತ್ತಿರ ಇಂತದ್ದೊಂದು ಯುದ್ಧ ವಿಮಾನವಿದೆ ಎಂಬುದು ನಿಜಕ್ಕೂ ರೋಚಕ ಸಂಗತಿ. ಇಷ್ಟೆಲ್ಲಾ ಅಡ್ವಾನ್ಸ್ಡ್ ಟೆಕ್ನಾಲಜಿಯ ಜೊತೆಗೆ ಯಾವುದೇ ರೀತಿಯ ದಾಳಿಗೆ ಬಗ್ಗದೆ ಎದೆಯುಬ್ಬಿಸಿಕೊಂಡು ಹಾರುವ ಈ ಡೂಮ್ಸ್ ಡೇ ವಿಮಾನವನ್ನು ಬಳಸಿ ಇರಾನ್ ಮೇಲೆ ಅಟ್ಯಾಕ್ ಮಾಡಲು ಟ್ರಂಪ್ ಪ್ಲಾನ್ ರೂಪಿಸಿದ್ದಾರೆನ್ನಲಾಗಿದೆ.
ಒಂದು ವೇಳೆ ಅಮೆರಿಕ ಈ ವಿಮಾನ ಬಳಸಿ ಇರಾನ್ ಮೇಲೆ ದಾಳಿ ನಡೆಸಿದರೆ ಇರಾನ್ ಅನ್ನು ದೇವರೇ ಕಾಪಾಡಬೇಕಾಗುತ್ತದೆ. ಎಲ್ಲವೂ ಸ್ಮಶಾನದಂತಾಗುತ್ತದೆ, ಪ್ರಮುಖ ನಗರಗಳು, ಇರಾನ್ ಆರ್ಥಿಕತೆಯ ಮೂಲವಾಗಿರುವ ತೈಲ ನಿಕ್ಷೇಪಗಳು ಧ್ವಂಸವಾಗುತ್ತವೆ. ಯಾರೂ ಉಹಿಸದ ರೀತಿಯಲ್ಲಿ ಇರಾನ್ ಹಾನಿ ಅನುಭವಿಸಬೇಕಾಗುತ್ತದೆ.