www.karnatakatv.net: ಜಮ್ಮು- ಕಾಶ್ಮೀರಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ, ಭಾಷಣ ಮಾಡುವ ಮುನ್ನ ಬುಲೆಟ್ ಪ್ರೂಫ್ ಶೀಲ್ಡ್ ನ್ನು ತೆಗೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಶೇರ್-ಇ-ಕಾಶ್ಮೀರ್ ಅಂತಾರಾಷ್ಟ್ರೀಯ ಕನ್ವೆನ್ಶನ್ ಕೇಂದ್ರದಲ್ಲಿ ಭಾಷಣ ಮಾಡುವ ಮುನ್ನ ಬುಲೆಟ್ ಪ್ರೂಫ್ ಶೀಲ್ಡ್ ನ್ನು ತೆಗೆಯುವ ಮೂಲಕ ಅಮಿತ್ ಶಾ ಎಲ್ಲರ ಗಮನ ಸೆಳೆದಿದ್ದಾರೆ. ಇಂದು ನಾನು ಎಲ್ಲರೊಂದಿಗೆ ಪ್ರಾಮಾಣಿಕವಾಗಿ ಮಾತನಾಡಲು ಇಚ್ಛಿಸುತ್ತೇನೆ. ಇದೇ ಕಾರಣಕ್ಕೆ ನಾನು ಬುಲೆಟ್ ಪ್ರೂಫ್ ಶೀಲ್ಡ್ ನ್ನು ತೆಗೆದು ಹಾಕಿದ್ದೇನೆ. ಫಾರೂಕ್ ಸಾಬ್ ನನಗೆ ಪಾಕಿಸ್ತಾನದವರ ಜೊತೆ ಮಾತನಾಡಿ ಎಂದು ಸಲಹೆ ನೀಡಿದ್ದರು. ಆದರೆ ನಾನು ಕಣಿವೆ ರಾಜ್ಯದ ಜನರು ಹಾಗೂ ಯುವಕರೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಗೃಹ ಸಚಿವ ಅಮಿತ್ ಶಾ 3ನೇ ದಿನದ ಪ್ರವಾಸ ಇದಾಗಿದೆ.
ಇನ್ನು ಇತ್ತ ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿದ್ದು ಆಯುಶ್ಮಾನ್ ಭಾರತ್ ಹೆಲ್ತ್ ಇನ್ ಫ್ರಾಸ್ಟಕ್ಚರ್ ಮಿಷನ್ ಅನಾವರಣಗೊಳಿಸಿದ್ದಾರೆ. ಇದರ ಜೊತೆಯಲ್ಲಿ ಉತ್ತರ ಪ್ರದೇಶದಲ್ಲಿ 9 ಮೆಡಿಕಲ್ ಕಾಲೇಜುಗಳ ಉದ್ಘಾಟನೆಯನ್ನೂ ಮಾಡಿದ್ದಾರೆ.

