Hubli News: ಹುಬ್ಬಳ್ಳಿ: ಇಂದು ಕೇಂದ್ರ ಗೃಹಸಚಿವರಾದ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಯೋಜಿಸಿದ್ದರು. ಆದರೆ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ, ಅಮಿತ್ ಶಾ ತಾವು ತಂಗಿದ್ದ ಹೋಟೇಲ್ನಲ್ಲೇ ವಿಶ್ರಾಂತಿ ಪಡೆಯಲು ನಿರ್ಧರಿಸಿದರು.
ಹುಬ್ಬಳ್ಳಿಯ ಡೆನಿಸನ್ಸ್ ಹೋಟೇಲ್ನಲ್ಲಿ ಅಮಿತ್ ಶಾ ಉಳಿದಿದ್ದು, ಅಮಿತ್ ಶಾ ಅನುಪಸ್ಥಿತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೆ.ಎಲ್.ಇ. ವೈದ್ಯಕೀಯ ಕಾಲೇಜು ಉದ್ಘಾಟಿಸಿದ್ದಾರೆ.
ಗೊಬ್ಬುರು ಕ್ರಾಸ್ ನಲ್ಲಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಿರೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇದಾಗಿದ್ದು, ಇಲ್ಲಿ 1200 ಬೆಡ್ ವ್ಯವಸ್ಥೆ ಇದೆ.
ಇನ್ನು ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಸಚಿವ ಸಂತೋಷ್ ಲಾಡ್, ಮಾಜಿ ಸಿಎಂ ಗಳಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಪ್ರಭಾಕರ ಕೋರೆ, ಬಸವರಾಜ್ ಹೊರಟ್ಟಿ ಮತ್ತಿತರರ ಉಪಸ್ಥಿತರಿದ್ದರು.
ಇನ್ನು ಅಮಿತ್ ಶಾ ಬಿಪಿಯಲ್ಲಿ ಏರುಪೇರು ಆಗಿದ್ದರಿಂದ ವಿಶ್ರಾಂತಿ ಪಡೆಯುವಂತೆ ವೈದ್ಯಕೀಯ ಸಿಬ್ಬಂದಿ ಸೂಚಿಸಿದ್ದರು. ಇಂದೇ ಅಮಿತ್ ಶಾ ವಿಶೇಷ ವೈದ್ಯಕೀಯ ತಂಡದೊಂದಿಗೆ ಕೊಲ್ಹಾಪುರ ಅಥವಾ ಮುಂಬೈಗೆ ತೆರಳುವ ಸಾಧ್ಯತೆ ಇದೆ.




