www.karnatakatv.net: ಕೌನ್ ಬನೇಗಾ ಕರೋಡ್ ಪತಿ ಶೋ ನಡೆಸುತ್ತಾ ಅಮಿತಾಭ್ ಬಚ್ಚನ್ ನಟಿ ಕೃತಿ ಸನೋನ್ ಜೊತೆ ಹೆಜ್ಜೆ ಹಾಕಿ ತಮ್ಮ ಯೌವ್ವನದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್ ಪತಿಯ 13 ನೇ ಸೀಸೆನ್ ನಡೆಸಿಕೊಡುತ್ತಿರುವಾಗ, ಈ ಶೋನಲ್ಲಿ ಪ್ರತಿ ಶುಕ್ರವಾರ ‘ಶಾನ್ದಾರ್ ಶುಕ್ರವಾರ್’ ಎಂಬ ಸಂಚಿಕೆ ಪ್ರಸಾರವಾಗುತ್ತದೆ. ಅದರಲ್ಲಿ ವಿವಿಧ ಕ್ಷೇತ್ರಗಳ ಖ್ಯಾತ ತಾರೆಯರು ಚಾರಿಟಿಯ ಉದ್ದೇಶದಿಂದ ಭಾಗವಹಿಸಿ, ಗೆದ್ದ ಹಣವನ್ನು ದಾನ ಮಾಡುತ್ತಾರೆ. ಈ ವಾರದ ಸಂಚಿಕೆಯಲ್ಲಿ ಬಾಲಿವುಡ್ ನ ಖ್ಯಾತ ನಟಿ ಕೃತಿ ಸನೋನ್ ಭಾಗಿಯಾಗಲಿದ್ದಾರೆ. ಈ ಕುರಿತು ಬಿಗ್ ಬಿ ಚಿತ್ರಗಳನ್ನು ಹಂಚಿಕೊoಡಿದ್ದು, ಅದರಲ್ಲಿ ಅವರು ಕೃತಿ ಜೊತೆಗೆ ಹೆಜ್ಜೆ ಹಾಕುತ್ತಿರುವಾಗ, ಅಮಿತಾಭ್ ಗೆ ತಮ್ಮ ಯೌವ್ವನದ ದಿನಗಳು ನೆನಪಾಗಿವೆಯಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾoನಲ್ಲಿ ಚಿತ್ರಗಳನ್ನು ಹಂಚಿಕೊoಡಿರುವ ಅಮಿತಾಭ್, ಅದಕ್ಕೆ ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ ‘ನಟಿ ಕೃತಿಯೊಂದಿಗೆ ಬಲ್ರೂಮ್ ನೃತ್ಯ ಮಾಡುತ್ತಾ ನನ್ನ ಕಾಲೇಜು ಹಾಗೂ ಕಲ್ಕತ್ತಾದ ದಿನಗಳು ನೆನಪಾದವು’ ಎಂದು ಅಮಿತಾಭ್ ಸಂಭ್ರಮ ಹಂಚಿಕೊoಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.