ಕರ್ನಾಟಕ ಟಿವಿ ಸಂಪಾದಕೀಯ : ಯಡಿಯೂರಪ್ಪ ರಾಜಕಾರಣ ಶುರು ಮಾಡಿದಾಗ ಅಮಿತ್ ಶಾ, ನರೇಂದ್ರ ಮೋದಿ ಇನ್ನೂ ರಾಜಕಾರಣದ ಕಡೆ ತಿರುಗಿ ನೋಡಿರಲಿಲ್ಲ.. ಆದ್ರೀಗಾ ಯಡಿಯೂರಪ್ಪಗೆ ರಾಜಕೀಯ ಪಟ್ಟು ಕಲಿಸಿಕೊಡ್ತೀವಿ ಅನ್ನೋ ರೀತಿ ಅಮಿತ್ ಶಾ ವರ್ತನೆ ತೋರ್ತಿದ್ದಾರೆ.. ಮಹಾರಾಷ್ಟ್ರ, ಜಾರ್ಖಂಡ್, ಹರಿಯಾಣದಲ್ಲಿ ಜನ ಪಾಠ ಕಲಿಸಿದ್ರು ಅಮಿತ್ ಶಾ ಇನ್ನೂ ಲೋಕಲ್ ಪಾಲಿಟಿಕ್ಸ್ ನಲ್ಲಿ ಕೈ ಯಾಡಿಸೋದನ್ನ ಬಿಟ್ಟಿಲ್ಲ.. ಬೈ ಎಲೆಕ್ಷನ್ ಫಲಿತಾಂಶ ಬಂದ 24 ಗಂಟೆಯಲ್ಲಿ ಗೆದ್ದವರನ್ನ ಸಚಿವರನ್ನಾಗಿ ಮಾಡ್ತೀವಿ ಅಂತ ಘೋಷಣೆ ಮಾಡಿದ್ದ ಯಡಿಯೂರಪ್ಪ ಇದೀಗ ಅಮಿತ್ ಶಾ ಮೊಂಡಾಟಾಕ್ಕೆ ಬೇಸತ್ತಿದ್ದಾರೆ.. ಇನ್ನು ಸ್ವತಂತ್ರವಾಗಿ ಚುನಾವಣೆ ಗೆಲ್ಲಲು ಸಾಧ್ಯವಾಗದ ಬಾಯಿಬುಡುಕ ನಾಯಕರ ಮಾತುಕಟ್ಟಿಕೊಂಡು ಯಡಿಯೂರಪ್ಪಗೆ ಅಮಿತ್ ಶಾ ಅಡ್ಡಗಾಲು ಹಾಕ್ತಿದ್ದಾರೆ.. ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡದೆ ಅಮಿತ್ ಶಾ ನಾನೇ ಸಾಮ್ರಾಟ ಅಂತ ಭಾವಿಸಿದಂತಿದೆ.. ಆದ್ರೆ ಕರ್ನಾಟಕದಲ್ಲಿ ಯಡಿಯೂರಪ್ಪರನ್ನ ಸರಿಯಾಗಿ ನಡೆಸಿಕೊಳ್ಳದಿದ್ರೆ 25 ಬಿಜೆಪಿ ಸಂಸದ ಸಂಖ್ಯೆ 2024ರ ಚುನಾವಣೆಯಲ್ಲಿ 5ಕ್ಕಿಳಿದರೂ ಅಚ್ಚರಿ ಇಲ್ಲಅನ್ನೋದು ಚಾಣಕ್ಯನಿಗೆ ಅರಿವಾಗದಿರೋದು ದುರಂತವೇ ಸರಿ..
2013ರ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದ ಬಿಜೆಪಿ..!
2013ರ ಚುನಾವಣೆಯಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದ ಪರಿಣಾಮ ಬಿಜೆಪಿ ಜೆಡಿಎಸ್ ಗಿಂತಲೂ ಕೆಳಕ್ಕೆ ಕುಸಿದಿತ್ತು.. ಮತಗಳಿಗೆ ಪ್ರಮಾಣದಲ್ಲೂ ಮೂರನೇ ಸ್ಥಾನಕ್ಕೆ ಕುಸಿದಿತ್ತು.. ಪಕ್ಷ ಕಟ್ಟಿ 6 ಎಂಎಲ್ ಎ ಗೆದ್ದಿದ್ದ ಯಡಿಯೂರಪ್ಪಅಧಿಕಾರಕ್ಕೆ ಬರದಿದ್ರೂ ಬಿಜೆಪಿಯನ್ನ ಮುಳುಗಿಸಿದ್ರು. 2014ರ ಲೋಕಸಭಾ ಚುನಾವಣೆ ವೇಳೆಗೆ ಮರಳಿ ಬಿಜೆಪಿಗೆ ಯಡಿಯೂರಪ್ಪ ಸೇರ್ಪಡೆಯಾದ ಕಾರಣ ರಾಜ್ಯದಲ್ಲಿ ಬಿಜೆಪಿ 18 ಸ್ಥಾನಗಳನ್ನ ಗೆಲ್ಲಲು ಸಾಧ್ಯವಾಯ್ತು.. 2019ರ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯಾದ್ಯಂತ ಓಡಾಡಿದ ಪರಿಣಾಮ 25 ಸ್ಥಾನಗಳು ಬಿಜೆಪಿಗೆ ಸಿಕ್ಕಿತ್ತು.. ಆದ್ರೆ ಈಗ ಅಮಿತ್ ಶಾ ನಡೆದುಕೊಳ್ತಿರೋ ರೀತಿ ನೋಡಿದ್ರೆ ಯಡಿಯೂರಪ್ಪ ಸಿಎಂ ಆಗಿದ್ದೇ ನಮ್ಮಿಂದ ಅಂತ ಭಾವಿಸಿದಂತಿದೆ.. ಇನ್ನಾದರೂ ಅಮಿತ್ ಶಾ ಸಂಪುಟ ವಿಸ್ತರಣೆ ಗೆ ಗ್ರೀನ್ ಸಿಗ್ನಲ್ ಕೊಟ್ಟು ಯಡಿಯೂರಪ್ಪ ಆಡಳಿತದಲ್ಲಿ ಕಡ್ಡಿಯಾಡಿಸದೆ ಸುಲಲಿತಾ ಆಡಳಿತಕ್ಕೆ ಅನುವು ಮಾಡಿಕೊಟ್ರೆ ಯಡಿಯೂರಪ್ಪ ಖುಷಿಯಾಗಿ ಆಡಳಿತ ಮಾಡ್ತಾರೆ.. ಇಲ್ಲದಿದ್ರೆ ಬೂಕನಕೆರೆ ಯಡಿಯೂರಪ್ಪ ಸಿಡಿದೆದ್ರೆ ಏನಾಗುತ್ತೆ ಅನ್ನೋದು ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ.. ಯಾಕಂದ್ರೆ ಯಡಿಯೂರಪ್ಪ ಕೋಟ ಕಾಂಗ್ರೆಸ್ ಪಕ್ಷಕ್ಕೆ ತಾನೆ ಲಾಭ.. ನಷ್ಟ ಮಾತ್ರ ಕಮಲ ಪಕ್ಷಕ್ಕೆ..
ನಿಮ್ಮ ಪ್ರಕಾರ ಅಮಿತ್ ಶಾ ಈಗ ಯಡಿಯೂರಪ್ಪ ವಿಚಾರದಲ್ಲಿ ನಡೆದುಕೊಳ್ತಿರೋದು ಸರೀನಾ..? ಈ ಬಗ್ಗೆ ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ..