www.karnatakatv.net : ಕಲ್ಲಿದ್ದಲು ಪೂರೈಕೆಯಲ್ಲಿನ ಕೊರತೆಯಿಂದ ವಿದ್ಯುತ್ ಕೊರತೆಯು ಕಾಣಿಸಿಕೊಂಡಿದೆ. ಇದರ ಹಿನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಇಂಧನ ಸಚಿವರು ಹಾಗೂ ಕಲ್ಲಿದ್ದಲು ಸಚಿವರ ಜೋತೆ ಸಭೆಯನ್ನು ನಡೆಸಿದ್ದಾರೆ.
ಕೇಂದ್ರ ಸರ್ಕಾರ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಇದೆ ಎಂದು ಪ್ರತಿಪಾದಿಸುತ್ತಿದೆಯಾದರೂ ರಾಜ್ಗಳಲ್ಲಿ ಕಗ್ಗತ್ತಲೆಯ ಎಚ್ಚರಿಕೆಯನ್ನು ನೀಡಿವೆ. ದೇಶದ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ 72 ಲಕ್ಷ ಟನ್ ಕಲ್ಲಿದ್ದಲ ಸಂಗ್ರಹವಿದೆ. ಇದು ನಾಲ್ಕು ದಿನಗಳಿಗೆ ಸಾಕು ಎಂದು ಕಲ್ಲಿದ್ದಲು ಇಲಾಖೆ ನಿನ್ನೆ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ಇತ್ತೀಚಿನ ತಿಂಗಳುಗಳಲ್ಲಿ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯದಿಂದ ದೇಶದ ಹಲವು ಪ್ರದೇಶಗಳು ವಿದ್ಯುತ್ ಕೊರತೆಯ ಆತಂಕವನ್ನು ಎದುರಿಸುತ್ತಿವೆ. ಸೆಪ್ಟೆಂಬರ್ ಅಂತ್ಯಕ್ಕೆ ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸರಾಸರಿ ಕೇವಲ ೪ ದಿನಕ್ಕೆ ಬೇಕಾದಷ್ಟು ಕಲ್ಲಿದಲಿನ ಸಂಗ್ರಹ ಮಾತ್ರ ಇತ್ತು. ಇದು ಇತ್ತೀಚಿನ ವರ್ಷಗಳಲ್ಲಿಯೇ ಕನಿಷ್ಠ ಪ್ರಮಾಣದ ಕಲ್ಲಿದ್ದಲ ಸಂಗ್ರಹವಾಗಿದೆ.