www.karnatakatv.net: ರಾಯಚೂರು: ನಿನ್ನೆ ತಡರಾತ್ರಿ ತರಬೇತಿ ವೈದ್ಯರ ಮೇಲೆ ಹಲ್ಲೆ ನಡೆಸಿದ ರೋಗಿ ಸಂಬಂಧಿಕರು ಹಲ್ಲೆ ಖಂಡಿಸಿ ರಿಮ್ಸ್ ಆಸ್ಪತ್ರೆ ಎದುರು ತರಬೇತಿ ವೈದ್ಯರಿಂದ ಪ್ರತಿಭಟನೆ ನಡೆಸಿದರು.
ರಾಯಚೂರಿನ ರಿಮ್ಸ್ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಹಲ್ಲೆ ಮಾಡಿದವರ ವಿರುದ್ಧ GBJಶಿಸ್ತು ಕ್ರಮಕ್ಕೆ ಆಗ್ರಹಿಸಿ ಕೈಗಳಿಗೆ ಕಪ್ಪು ಬಟ್ಟೆ ಧರಿಸಿ ತರಬೇತಿ ವೈದ್ಯರ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ರಿಮ್ಸ್ ಆಸ್ಪತ್ರೆ ನಿರ್ದೇಶಕ ಬಸವರಾಜ ಪೀರಾಪುರ ಭೇಟಿ ನೀಡಿದರು . ರಿಮ್ಸ್ ಆಸ್ಪತ್ರೆ ಡೀನ್ ಜೊತೆಗೆ ವಾಗ್ವಾದಕ್ಕೆ ಇಳಿದ ವೈದ್ಯರು ಆಸ್ಪತ್ರೆಯಲ್ಲಿ ವೈದ್ಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ ರೋಗಿಗೆ ಚಿಕಿತ್ಸೆ ನೀಡುವಾಗಲೇ ಹಲ್ಲೆ ಮಾಡಿದ್ದಾರೆ ಹಲ್ಲೆ ಮಾಡಿದವರ ವಿರುದ್ಧ ಎಫ್ ಐಆರ್ ದಾಖಲು ಮಾಡಲು ವೈದ್ಯರ ಆಗ್ರಹಿಸಿದರು. ವೈದ್ಯರ ಒತ್ತಾಯಕ್ಕೆ ಮಣಿದ ರಿಮ್ಸ್ ಆಸ್ಪತ್ರೆಯ ಡೀನ್ ಬಸವರಾಜ ಪೀರಾಪುರ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸ್ ಪಿಗೆ ದೂರು ನೀಡಲು ತೀರ್ಮಾನಮಾಡಿದರು .