Wednesday, July 30, 2025

Latest Posts

2000 ಕ್ಕೂ ಅಧಿಕ ಕಿಲೋ ಮೀಟರ್ ಪಾದಯಾತ್ರೆ ನಡೆಸಿದ ವೃದ್ದ ದಂಪತಿ

- Advertisement -

www.karnatakatv.net : ರಾಯಚೂರು : ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ವೃದ್ಧ ದಂಪತಿಗಳಿಬ್ಬರು ಸರಿ‌ಸುಮಾರು 2000 ಕ್ಕೂ ಅಧಿಕ ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದಾರೆ.. ಆಶ್ಚರ್ಯ ಆದ್ರೂ ಇದು ಸತ್ಯ.. ಅಷ್ಟಕ್ಕೂ ಯಾರಪ್ಪ ಆ ಪುಣ್ಯಾತ್ಮರು ಅಂತೀರಾ ಈ ಸ್ಟೋರಿ ನೋಡಿ…

ತಿರುಪತಿ ತಿಮ್ಮಪ್ಪನಿಗೆ ಹೊತ್ತ ಹರಕೆ‌ ಈಡೇರಿದ್ದಕ್ಕಾಗಿ ಗುಜರಾತ್ ಮೂಲದ ದಂಪತಿಗಳಿಬ್ಬರು ಗುಜರಾತ್ ನಿಂದ ಆಂದ್ರಪ್ರದೇಶದ ತಿರುಪತಿಗೆ ಪಾದಯಾತ್ರೆ ಬಂದಿದ್ದಾರೆ. ಸರಿ ಸುಮಾರು 75 ವರ್ಷಕ್ಕೂ ಅಧಿಕ ವಯಸ್ಸಿನ ಈ ದಂಪತಿಗಳನ್ನ ಕಂಡು ದಾರಿಯುದ್ದಕ್ಕೂ ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಹೌದು ದೃಶ್ಯದಲ್ಲಿರುವ ಈ ದಂಪತಿಗಳು ಗುಜರಾತ್ ಮೂಲದವರು. ಗುಜುರಾತಿನಿಂದ ಆಂದ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ ಕ್ಕೆ ಪಾದಯಾತ್ರೆ ಮೂಲಕ ನಡೆದು ಬಂದು ದರ್ಶನ ಪಡೆದು ಮರಳಿ ತಮ್ಮ ಊರಿಗೆ ತೆರಳುತ್ತಿದ್ದಾರೆ .ತನ್ನ ಮಡದಿಗೆ 5  ಬಾರಿ ಆಪರೇಷನ್ ಆಗಿದ್ದು, ಆಕೆ ಸದ್ಯ ಆರೋಗ್ಯದಿಂದಿದ್ದಾಳೆ. ನನಗೂ ಕಣ್ಣಿನ ದೃಷ್ಟಿ ಕಡಿಮೆ ಇತ್ತು..  ತಿರುಪತಿ ವೆಂಕಟೇಶ್ವರ ದೆವರಿಗೆ ಬೇಡಿಕೊಂಡ ಮೇಲೆ ಈಗ ನನ್ನ ದೃಷ್ಟಿಯೂ ಚನ್ನಾಗಿ ಕಾಣುತ್ತಿದೆ . ಇದಕ್ಕೆಲ್ಲ ಆ ಗೋವಿಂದನ ದಯೆಯೇ ಕಾರಣ.. ಹಾಗಾಗಿ ನಾನು ನನ್ನ ಮಡದಿ ಪಾದಯಾತ್ರೆ ಬಂದೆವು ಅಂತಾರೆ ಪ್ರಕಾಶ್..

ಇನ್ನು ಇವರು ಒಂದು ದಿನಕ್ಕೆ 25 ರಿಂದ 28 ಕಿಲೋಮೀಟರ್ ನಡೆಯುತ್ತಾರಂತೆ .ಗುಜರಾತ್ ನಿಂದ ತಿರುಪತಿ ‌ಗೆ ಸುಮಾರು 2000 ಕಿಲೋಮೀಟರ್ ಅಂತರವಿದೆ.. ಇನ್ನು ಈ ದಂಪತಿಗಳು ತಮ್ಮ ಊರು ಬಿಟ್ಟುತಿರುಪತಿ ತಲುಪಲು 3 ತಿಂಗಳು 17 ದಿನ ವಾಗಿದೆಯಂತೆ..ಈಗ ಮತ್ತೆ ಮರಳಿ ತಮ್ಮ ಊರಿಗೆ ಹೊಗಲು 3 ತಿಂಗಳು ‌ಬೇಕಂತೆ..  ಒಟ್ಟಾರೆ ಈ ವೃದ್ಧ ದಂಪತಿಗಳು ತಿರುಪತಿ ದರ್ಶನ ಪಡೆದು ಮರಳಿ ತಮ್ಮ ಮನೆ ತಲುಪಲು ಬರೊಬ್ಬರಿ 7 ತಿಂಗಳು ಬೇಕಂತೆ..  ಇದಪ್ಪ ಭಕ್ತಿ ಅಂದ್ರೆ.. ಐದತ್ತು ಕಿಲೋ ಮೀಟರ್ ನಡೆಯೋದಕ್ಕೆ ಸುಸ್ತಾಯ್ತು ಎನ್ನುವ ಇಂದಿನ ಯುವಕರು ಒಂದೊಮ್ಮೆ‌ಇವರನ್ನ ನೋಡಿ ಹುಬ್ಬೇರಿಸದೇ‌ ಇರರು..

ಅನೀಲ್‌ ಕುಮಾರ್ ಕರ್ನಾಟಕ ಟಿವಿ.. ರಾಯಚೂರು

- Advertisement -

Latest Posts

Don't Miss