ಊಟ ಬೇಡಿದ ಮುಗ್ಧ ಮಗುವಿಗೆ ಕೆಂಡದ ಕಿಡಿಯಿಂದ ಕೈ ಸುಟ್ಟ ಮಲತಾಯಿ..!

ಹಸಿವು ಅಂತ ಊಟಕ್ಕೆ ಮನೆಗೆ ಬಂದ ಮಗನ ಕೈಗಳನ್ನ‌ ಸುಟ್ಟು, ಮಂಚಕ್ಕೆ ಕೈ ಕಾಲು ಕಟ್ಟಿ ಹಿಂಸಿಸಿ ಕ್ರೌರ್ಯ ಮೆರೆದ ಮಲತಾಯಿ ಈಗ ವಾಡಿ ಪೊಲೀಸರ ಅತಿಥಿಯಾಗಿದ್ದಾಳೆ.

ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ಸಮೀಪವಿರುವ ನಾಲವಾರ ಸ್ಟೇಷನ್ ತಾಂಡದಲ್ಲಿ ಇಂತಹದೊಂದು ಅಮಾನವೀಯ ಕೃತ್ಯ ನಡೆದಿದೆ. ನಾಲವಾರ ಸಮೀಪವಿರುವ ತಾಂಡಾ ನಿವಾಸಿ ತಿಪ್ಪಣ್ಣಾ ಎಂಬುವರ ಹೆಂಡತಿ ಮೃತಪಟ್ಟಿದ್ದು,‌ ತನ್ನ ನಾಲ್ಕು ವರ್ಷದ ಮಗುವಿನ ಆರೈಕೆಗೆ ಎಂದು ಇತ್ತೀಚಿಗೆ ಮರೆಮ್ಮ ಎಂಬ ಮಹಿಳೆಯನ್ನ ಮದುವೆಯಾಗಿದ್ದ. ತಿಪ್ಪಣ್ಣಾ ಮನೆಯಲ್ಲಿ ಇರುವಾಗ ಮಲತಾಯಿ ಮರೆಮ್ಮ ಮಗುವನ್ನ ಸರಿಯಾಗಿ ನೋಡಿಕೊಳ್ಳುತ್ತಿದ್ದಳು. ಆದರೆ ಮದೆವೆಯಾದ ನಂತರ ದುಡಿಯಲು ಅಂತ ತಿಪ್ಪಣ್ಣಾ ಮಹಾರಾಷ್ಟ್ರದ ಪುಣೆಗೆ ಹೋಗುತ್ತಿದ್ದ. ಆ ಸಮಯದಲ್ಲಿ ಮಗುವಿನ ಮೇಲೆ ಈ ರೀತಿ ಕ್ರೌರ್ಯ ಮೆರೆದಿದ್ದಾಳೆ.

ದಿನನಿತ್ಯ ಮಗುವನ್ನು ಹೊಡೆದು-ಬಡೆದು ಹಿಂಸೆ ನೀಡುವುದನ್ನ ಸ್ಥಳೀಯರು ಗಮನಿಸಿದ್ದಾರೆ. ಹಸಿವಿನಿಂದ ಬಳಲಿದ ಮಗು ಮಲತಾಯಿಗೆ ಊಟ ಕೇಳಿದೆ. ಊಟ ನೀಡುವ ಬದಲು ನಿರ್ದಯಿ ಮಲತಾಯಿ ಮರೆಮ್ಮ, ಮಗುವಿನ ಕೈಗಳ ಮೇಲೆ ಬರೆ ಎಳೆದಿದ್ದಾಳೆ. ಮಂಚಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿದ್ದಾಳೆ‌ ಎಂದು ತಿಳಿದು ಬಂದಿದೆ.

About The Author