ಆಂಧ್ರಪ್ರದೇಶ: ರಾಜ್ಯದ ಅಭಿವೃದ್ಧಿಗಾಗಿ ಸಿಎಂ ಜಗನ್ ಮೋಹನ್ ರೆಡ್ಡಿ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿದ್ದಾರೆ.ಇದೀಗ ಜಗನ್ ಮತ್ತೊಂದು ಸಖತ್ ಐಡಿಯಾ ಮಾಡಿದ್ದು ಐಎಎಸ್ ಅಧಿಕಾರಿಗಳು ಇನ್ನು ಮುಂದೆ ಹಾಸ್ಟೆಲ್, ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸರ್ಕಾರಿ ಹಾಸ್ಟೆಲ್ ಮತ್ತು ಸರ್ಕಾರಿ ಆರೋಗ್ಯ ಕೇಂದ್ರಗಳ ಅಭಿವೃದ್ಧಿಯತ್ತ ದೃಷ್ಟಿ ನೆಟ್ಟಿರೋ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಐಎಎಸ್ ಅಧಿಕಾರಿಗಳಿಗೆ ಸೂಚನೆಯೊಂದನ್ನು ನೀಡಿದ್ದಾರೆ. ವಾರಕ್ಕೊಮ್ಮೆಯಾದ್ರೂ ಸರ್ಕಾರಿ ಹಾಸ್ಟೆಲ್ / ಆಸ್ಪತ್ರೆಗಳಿಗೆ ಯಾರಿಗೂ ತಿಳಿಯದಂತೆ ದಿಢೀರನೆ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಅರಿತುಕೊಳ್ಳಿ ಅಂತ ಸೂಚಿಸಿದ್ದಾರೆ. ಇನ್ನು ರಾತ್ರಿ ವೇಳೆ ದಿಢೀರ್ ಭೇಟಿಗೆ ಸಮಯ ನಿಗದಿ ಮಾಡಿಕೊಳ್ಳಿ ಅಂತ ಐಎಎಸ್ ಅಧಿಕಾರಿಗಳಿಗೆ ಸೂಚನೆ ನಡೀರೋ ಸಿಎಂ, ಹಾಸ್ಟೆಲ್/ ಆಸ್ಪತ್ರೆಯಲ್ಲಿ ಟಾಯ್ಲೆಟ್ ಗಳನ್ನೇ ನೀವು ಬಳಸಿ. ಈ ಮೂಲಕ ಅಲ್ಲಿ ನೈರ್ಮಲ್ಯತೆ ಬಗ್ಗೆ ತಿಳಿದುಕೊಂಡು ಕೂಡಲೇ ಫೋಟೋ ತೆಗೆದುಕೊಳ್ಳಿ. ಅಲ್ಲೇನಾದ್ರೂ ಸಮಸ್ಯೆ ಇದ್ರೆ ಕ್ರಮ ತೆಗೆದುಕೊಂಡು ಸಮಸ್ಯೆಗಳನ್ನು ಸರಿಪಡಿಸಿ ಬಳಿಕ ಮತ್ತೊಂದು ಫೋಟೋ ತೆಗೆದುಕೊಳ್ಳಿ. ಇದರಿಂದ ಅಭಿವೃದ್ಧಿ ನಿಶ್ಚಿತ. 2 ವರ್ಷಗಳಲ್ಲಿ ರಾಜಾದ್ಯಂತ ಇಂತಹ ಸಮಸ್ಯೆ ಸರಿಪಡಿಸಲು ಸಾಧ್ಯ ಅಂತ ಸೂಚಿಸಿದ್ದಾರೆ.
ಇನ್ನು ಜಗನ್ ಐಎಎಸ್ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿರೋದಕ್ಕೆ ಒಂದು ಕಾರಣ ಇದೆ. ಐಎಎಸ್ ಅಧಿಕಾರಿಗಳ ಗಮನಕ್ಕೆ ಅಲ್ಲಿನ ಸಮಸ್ಯೆಗಳು ಗಮನಕ್ಕೆ ಬಂದ್ರೆ ಕೂಡಲೇ ಅವುಗಳಿಗೆ ಪರಿಹಾರ ಸಿಗಲಿದೆ ಅನ್ನೋದು ಜಗನ್ ಅಭಿಪ್ರಾಯ. ಹೀಗಾಗಿ ಇನ್ನು ಮುಂದೆ ಆಂಧ್ರದಲ್ಲಿ ಐಎಎಸ್ ಅಧಿಕಾರಿಗಳು ವಾರಕ್ಕೊಮ್ಮೆಯಾದ್ರೂ ಸರ್ಕಾರಿ ಹಾಸ್ಟೆಲ್ / ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಯಾವಾಗ ಬೇಕಾದ್ರೂ ಐಎಎಸ್ ಅಧಿಕಾರಿಗಳು ಭೇಟಿ ನೀಡೋ ಸಂಭವ ಇರೋದ್ರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇನ್ನು ಮುಂದೆ ಸರಿಯಾಗಿ ಕಾರ್ಯನಿರ್ವಹಿಸ್ತಾರೆ ಅನ್ನೋದು ಸಿಎಂ ಜಗನ್ ಮೋಹನ್ ರೆಡ್ಡಿ ಉದ್ದೇಶವಾಗಿದೆ.
ಸಾಲ ವಸೂಲಿ ಮಾಡೋರಿಗೆ ಕೇಂದ್ರ ಶಾಕ್..!! ಮಿಸ್ ಮಾಡದೇ ಈ ವಿಡಿಯೋ ನೋಡಿ