Sunday, July 20, 2025

Latest Posts

ನಮ್ಮಲ್ಲಿ ಬಂದು ಜಾಗನೋಡಿ : ರಾಜ್ಯದ ಉದ್ಯಮಿಗಳಿಗೆ ಸಚಿವ ನಾರಾ ಗಾಳ! ; ಬಯಲಾಯ್ತು ಆಂಧ್ರದ ಕುತಂತ್ರ..

- Advertisement -

ಬೆಂಗಳೂರು : ಸತತ ಮೂರು ವರ್ಷಗಳಿಂದ ದೇವನಹಳ್ಳಿಯಲ್ಲಿ ರೈತರ ಭೂಸ್ವಾಧೀನದ ವಿರುದ್ದ ನಡೆಯುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರು ರೈತರೊಂದಿಗೆ ಸಭೆ ನಡೆಸಿ ಭುಸ್ವಾಧೀನ ಕೈ ಬಿಡುವುದಾಗಿ ಘೋಷಿಸಿದ್ದಾರೆ. ಆದರೆ ಇದಾದ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಫುಲ್‌ ಆಕ್ಟೀವ್‌ ಆಗಿದ್ದು, ಉದ್ಯಮಿಗಳನ್ನು ತನ್ನತ್ತ ಸೆಳೆಯಲು ಮುಂದಾಗಿದೆ.

ಈ ಕುರಿತು ಆಂಧ್ರಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ನಾರಾ ಲೋಕೇಶ್‌ ತಮ್ಮ ರಾಜ್ಯಕ್ಕೆ ಹೆಚ್ಚಿನ ಕಂಪನಿಗಳಿಗೆ ಮಣೆ ಹಾಕಲು ಮುಂದಾಗಿದ್ದಾರೆ. ದೇವನಹಳ್ಳಿಯ ಚನ್ನರಾಯಪಟ್ಟಣ ಜಮೀನು ಭೂಸ್ವಾಧೀನ ರದ್ದಾಗಿದೆ. ಈ ಹಿನ್ನೆಲೆ ಏರೋಸ್ಪೇಸ್ ಉದ್ಯಮಿಗಳಿಗೆ ನಮ್ಮಲ್ಲಿ ಬಂದು ಉದ್ಯಮ ಪ್ರಾರಂಭಿಸಿ ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ.

ಇನ್ನೂ 1,777 ಎಕರೆ ಭೂಸ್ವಾಧೀನಕ್ಕಾಗಿ ಮುಂದಾಗಿದ್ದ ಕರ್ನಾಟಕ ಸರ್ಕಾರ ಫೈನಲ್ ನೋಟಿಫಿಕೇಶನ್‌ನ್ನು ರದ್ದು ಮಾಡಿದೆ. ಈ ವಿಚಾರ ತಿಳಿದು ಬೇಜಾರಾಯಿತು. ನಿಮಗಾಗಿ ನನ್ನ ಬಳಿ ಇನ್ನೊಂದು ಉತ್ತಮ ಆಯ್ಕೆ ಇದೆ. ನೀವು ಆಂಧ್ರಪ್ರದೇಶದಲ್ಲಿ ಏಕೆ ಜಾಗ ಹುಡುಕಬಾರದು? ಪ್ರೋತ್ಸಾಹ ಧನ ಹಾಗೂ 8000 ಎಕರೆಗಳಿಗೂ ಅಧಿಕ ಭೂಮಿ ನಿಮಗಾಗಿ ತಯಾರಾಗಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಿ, ಚರ್ಚಿಸಲು ಇಚ್ಚಿಸುತ್ತೇನೆ ಎಂದು ಸಚಿವ ನಾರಾ ಲೋಕೇಶ್‌ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಮೂಲಕ ಉದ್ಯಮಿಗಳಿಗೆ ಗಾಳ ಹಾಕುವ ಕೆಲಸ ಮಾಡಿದ್ದಾರೆ.

ಮುಖ್ಯವಾಗಿ ಬೆಂಗಳೂರು ಆಂಧ್ರಪ್ರದೇಶದ ಗಡಿಗೆ ಹತ್ತಿರವಿದೆ ಇದರಿಂದ ಈ ಭಾಗದಲ್ಲೇ ಏರೋಸ್ಪೇಸ್‌ ಉದ್ಯಮಗಳಿಗೆ ನೆಲೆ ನೀಡಬಹುದು. ಈ ಮೂಲಕ ಲಾಭ ಮಾಡಿಕೊಳ್ಳಲು ಆಂಧ್ರ ತನ್ನ ಕುತಂತ್ರ ಹೆಣೆದಿದೆ. ಆದರೆ ಈ ಆಹ್ವಾನವನ್ನು ಯಾವ್ಯಾವ ಉದ್ಯಮಿಗಳು ಸ್ವೀಕರಿಸುತ್ತಾರೆ? ಎನ್ನುವುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.

- Advertisement -

Latest Posts

Don't Miss