ಅಂತರಾಷ್ಟ್ರೀಯ ಸುದ್ದಿ: ಆಂದ್ರ ಪ್ರದೇಶದ ಮೂಲದ ವಿದ್ಯಾರ್ಥಿ ಜಾಹ್ನವಿ ಕುಂದುಲಾ ಅವರು ಅಮೇರಿಕಾದ ಸಿಯಾಟಿಲ್ ಪ್ರದೇಶದಲ್ಲಿ ವಿದ್ಯಾಬ್ಯಾಸ ಮಾಡುತ್ತಿರುತ್ತಾಳೆ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಸಿಯಾಟೆಲ್ ನಗರದ ಬೀದಿಯಲ್ಲಿ ವೇಗವಾಗಿ ಬಂದು ಪೋಲಿಸ್ ಗಸ್ತು ವಾಹನ ರಸೆಯಲ್ಲಿ ಹೋಗುತ್ತಿರುವ ಜಾಹ್ನವಿಗೆ ಗುದ್ದಿದ ಪರಿಣಾಮವಾಗಿ ಜಾಹ್ನವಿ ಸಾವಿಗೀಡಾಗಿದ್ದಾಳೆ.
ಗಸ್ತು ವಾಹನ ಚಲಾಯಿಸುತ್ತಿದ್ದ ಅಧಿಕಾರಿ ಕೆವಿನ್ ಡೇವ್ ಮಿತಿ ಮೀರಿದ ಮದ್ಯ ಸೇವನೆಯಿಂದ ಸುಮಾರು 119 ಕಿಮೀ ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದನು ಡಿಕ್ಕಿ ಹೊಡೆದ ನಂತರ ಜಾಹ್ನವಿ ಸಾವಿನ ಕುರಿತು ಅಧಿಕಾರಿ ತಮಾಷೆ ಮಾಡಿ ನಕ್ಕಿರುವ ವೀಡಿಯೋ ಬಾಡಿಕ್ಯಾಮ್ ನಲ್ಲಿ ಸೆರೆಯಾಗಿದ್ದು
ಸಿಯಾಟೆಲ್ ಪೊಲೀಸ್ ಇಲಾಖೆಯು ಸೋಮವಾರದಂದು ಈ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ, ಹಾಗೂ ಆಕಸ್ಮಿಕವಾಗಿ ನಡೆದಿರುವ ಘಟನೆ ಆದರೆ ಇದನ್ನು ತನಿಖೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ವಿಚಾರವನ್ನು ತಳ್ಳಿ ಹಾಕಿದರು.
ವರದಿಗಳ ಕುರಿತು ಪ್ರತಿಕ್ರಿಯಿಸಿದ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಕಾನ್ಸುಲೇಟ್ ಜನರಲ್ ಬುಧವಾರ ರಸ್ತೆ ಅಪಘಾತದಲ್ಲಿ ಕಂದುಲಾ ಅವರ ಸಾವಿನ ನಿರ್ವಹಣೆಯನ್ನು “ಆಳವಾದ ತೊಂದರೆ” ಎಂದು ಬಣ್ಣಿಸಿದ್ದಾರೆ.