ಹುಬ್ಬಳ್ಳಿ: ಇಂದು ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಇಂದು ರೈತರ ಬೇಡಿಕೆಗಳು ಈಡೇರಿಕೆ ಕುರಿತು ರಾಜ್ಯ ಮತ್ತು ಕೆಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಭಟನೆಯ ಮೂಲಕ ಕುಂದಗೋಳ ಬಂದ್ ಗೆ ರೈತರು ಕರೆ ನೀಡಿದ್ದಾರೆ.
ರೈತರೇ ದೇಶದ ಬೆನ್ನಲುಬು ಅಂತಾರೆ, ಆದರೆ ಅದೇ ರೈತ ಸಂಕಷ್ಟದಲ್ಲಿರುವಾಗ ಯಾವ ಸರ್ಕಾರವು ಸರಿಯಾಗಿ ಸ್ಪಂದಿಸುವುದಿಲ್ಲ. ಮಳೆಗಾಲದಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ರೈತ ಕಂಗಾಲಾಗಿದ್ದಾನೆ ಬೆಳೆದ ಬೆಳೆ ಕೈ ಸೇರದೆ ಬೆಳೆ ನಾಶವಾಗಿವೆ ಹಾಗಾಗಿ ಕುಂದಗೋಳ ಸುತ್ತಮುತ್ತಲ ಪ್ರದೇಶವನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ರೈತರು ಬ್ಯಾಂಕ್ನಲ್ಲಿ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡಬೇಕು ಪ್ರತಿ ಹೆಕ್ಟರ್ ಪ್ರದೇಶಕ್ಕೆ ತಲಾ 50 ಸಾವಿರ ಪರಿಹಾರ ಘೋಷಣೆ ಮಾಡಬೇಕು
ರೈತರು 2018 ರಿಂದ ಇಲ್ಲಿಯವರೆಗೂ ಸರ್ಕಾರಕ್ಕೆ ಬೆಳೆ ವಿಮೆ ಕಟ್ಟುತ್ತಾ ಬಂದಿದ್ದೇವೆ ಆದರೆ ಇಲ್ಲಿಯವರೆಗೂ ನಮಗೆ ಬೆಳೆ ಪರಿಹಾರ ನೀಡಿಲ್ಲ . 2018 ರಿಂದ ಇಲ್ಲಿಯವರೆಗು ಬೆಳೆ ವಿಮೆ ನೀಡಬೇಕೆಂದು ಹಾಗೂ ಇನ್ನು ಹಲವಾರು ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಇಂದು ಕುಂದಗೋಳ ಪಟ್ಟಣ ಸಂಪೂರ್ಣ ಬಂದ್ ಗೆ ರೈತ ಮುಖಂಡರು ಕರೆ ಕೊಟ್ಟು ಪ್ರತಿಭಟನೆ ಕೈಗೊಂಡಿದ್ದಾರೆ.
ತಹಶಿಲ್ದಾರ್ ಕಛೇರಿ ಬಳಿ ಇರುವ ಗಾಂಧಿ ವೃತ್ತದಿಂದ ಗಾಳಿ ಮಾರೆಮ್ಮ ದೇವಸ್ಥಾನದವರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇನ್ನು ಈ ಪ್ರತಿಭಟನೆಯಲ್ಲಿ ಕುಂದಗೋಳದ 5 ಸಾವಿರ ರೈತರು ಪಾಲ್ಗೊಳ್ಳಲಿದ್ದಾರೆ. ಪಟ್ಟಣದ ಬೀದಿಗಳಲ್ಲಿ ಎತ್ತಿನಗಾಡಿ ಮೆರವಣಿಗೆ ಮುಖಾಂತರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಪ್ರತಿಭಟನೆಯ ಮೂಲಕ ರೈತರ ದ್ವನಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದೆಯಾ? ಸರ್ಕಾರದಿಂದ ರೈತರ ಬೇಡಿಕೆ ಈಡೇರಲಿದೆಯಾ ಎಂಬುದನ್ನುಕಾದು ನೋಡಬೇಕಿದೆ.
HD Revanna: ಎತ್ತಿನಹೊಳೆ ಕಾಮಗಾರಿ ವೀಕ್ಷಿಸಿದ ಮಾಜಿ ಸಚಿವ ಹಾಲಿ ಶಾಸಕ ಹೆಚ್ ಡಿ ರೇವಣ್ಣ**
ಲಿಂಗಾಯತರಿಗೆ ಸ್ವತಂತ್ರ ಧರ್ಮ ಸ್ಥಾನಮಾನ ಮೀಸಲಾತಿ ಪ್ರಯೋಜನಗಳ ಮೇಲೆ ಪರಿಣಾಮ ಬೀರುವುದಿಲ್ಲ: ಎಸ್ ಎಂ ಜಾಮ್ದಾರ್.