- Advertisement -
ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ಸಿದ್ಧಪಡಿಸಿರೋ ಸುಲಲಿತ ವಹಿವಾಟು ವರದಿಯನ್ನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಿಡುಗಡೆ ಮಾಡಿದ್ರು. ಈ ವರದಿಯಲ್ಲಿ ಆಂಧ್ರ ಪ್ರದೇಶ ಮೊದಲ ಸ್ಥಾನವನ್ನ ಉಳಿಸಿಕೊಂಡಿದ್ರೆ ಉತ್ತರ ಪ್ರದೇಶ ಎರಡನೇ ಹಾಗೂ ತೆಲಂಗಾಣ ಮೂರನೇ ಸ್ಥಾನವನ್ನ ಪಡೆದಿವೆ.
ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಮಿಕರ ನಿಯಂತ್ರಣ ಕಾಯ್ದೆ, ಪರಿಸರ ಪರವಾನಿಗಿ ಸೇರಿದಂತೆ ವಿವಿಧ ಅಂಶಗಳ ಸಮೀಕ್ಷೆ ನಡೆಸಿದ ಡಿಐಪಿಪಿ ರ್ಯಾಂಕ್ ನೀಡಿದೆ.
2018ರಲ್ಲೂ ಮೊದಲನೇ ಸ್ಥಾನ ಪಡೆದಿದ್ದ ಆಂಧ್ರಪ್ರದೇಶ ಈ ಬಾರಿಯೂ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ಎರಡನೆ ಸ್ಥಾನದಲ್ಲಿದ್ದ ತೆಲಂಗಾಣ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದೆ.
- Advertisement -