ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ದಿವಂಗತ ಚಿರಂಜೀವಿ ಸರ್ಜಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಇಂದ್ರಜಿತ್ ಲಂಕೇಶ್ ಕ್ಷಮೆಯಾಚಿಸಿದ್ದಾರೆ.
ಫಿಲಂ ಚೇಂಬರ್ನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು..ನನ್ನ ಹೇಳಿಕೆಯಿಂದ ಚಿರು ಕುಟುಂಬಸ್ಥರಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸುವೆ ಅಂತಾ ಹೇಳಿದ್ರು. ಕ್ಷಮೆಗೆ ಆಗ್ರಹಿಸಿ ಮೇಘನಾ ಫಿಲಂ ಚೇಂಬರ್ಗೆ ಪತ್ರ ಬರೆದಿದ್ದಾರೆ ಅನ್ನೋ ವಿಷಯವನ್ನ ಕಾಲ್ ಮೂಲಕ ಸಾ.ರಾ ಗೋವಿಂದು ಹಾಗೂ ಉಮೇಶ್ ಬಣಕಾರ್ ಹೇಳಿದ್ರು. ಚಿರಂಜೀವಿ ಸರ್ಜಾ ಒಬ್ಬ ಪ್ರತಿಭಾವಂತ ನಟ . ಅವರ ಅಕಾಲಿಕ ಮರಣದ ಬಗ್ಗೆ ಅನುಮಾನ ಬಂದ ಕಾರಣ ಈ ರೀತಿ ಮಾತನಾಡಿಬಿಟ್ಟೆ ಅಂತಾ ಹೇಳಿದ್ರು.
ಡ್ರಗ್ ಮಾಫಿಯಾದ ವಿರುದ್ಧ ನನ್ನ ಹೋರಾಟ ನಿರಂತರವಾಗಿರಲಿದೆ. ಡ್ರಗ್ ಮಾಫಿಯಾ ಕೇಸ್ನಲ್ಲಿ ಪೊಲೀಸರು ಸಮರ್ಥವಾಗಿ ಕೆಲಸ ಮಾಡ್ತಿದ್ದಾರೆ. ಡ್ರಗ್ ಮಾಫಿಯಾ ಚಿತ್ರರಂಗದಿಂದ ತೊಲಗುವವರೆಗೂ ನನ್ನ ಹೋರಾಟ ನಿಲ್ಲಲ್ಲ ಅಂತಾ ಗುಡುಗಿದ್ರು.