Banglore News : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟ ಇಂದು ಸೋಮವಾರ ಸೆ.11ರಂದು ಕರೆ ನೀಡಿದ್ದ ಬೆಂಗಳೂರು ಬಂದ್ ಎಫೆಕ್ಟ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ಪ್ರಯಾಣಿಕರಿಗೂ ತಟ್ಟಿತ್ತು. ಕ್ಯಾಬ್, ಟ್ಯಾಕ್ಸಿ, ಆಟೋ ಇಲ್ಲದೆ ಬಿಎಂಟಿಸಿ ಬಸ್ ನ್ನೆ ಕಾಯುವ ಪರಿಸ್ಥಿತಿ ಮುಂದಾಯಿತು.
ಖಾಸಗಿ ಬಂದ್ ಕರೆಯಿಂದಾಗಿ ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡಾ ಬಿಎಂಟಿಸಿ ಬಸ್ ನಲ್ಲಿಯೇ ಪ್ರಯಾಣಿಸುವಂತಾಗಿತ್ತು. ಖಾಸಗಿ ಕ್ಯಾಬ್ ನ್ನೇ ಹೆಚ್ಚಾಗಿ ಅವಲಂಬಿಸಿದ್ದ ಮಾಜಿ ಕ್ರಿಕೆಟಿಗ ಬಂದ್ ಕಾರಣದಿಂದ ಬಿಎಂಟಿಸಿ ಬಸ್ ನಲ್ಲೇ ಪ್ರಯಾಣ ಮಾಡುವಂತಾಯಿತು.
ಜೊತೆಗೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಎಂಟಿಸಿ ಪ್ರಯಾಣದ ಕುರಿತಾದ ತಮ್ಮ ಅನುಭವವನ್ನು ತಮ್ಮ ಟ್ವಿಟರ್ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ಏರ್ಪೋರ್ಟ್ ನಿಂದ ಮನೆಗೆ ಮರಳುವ ಸಲುವಾಗಿ ಬಿಎಂಟಿಸಿ ಯಲ್ಲಿ ಪ್ರಯಾಣ ಮಾಡಬೇಕಾಯಿತು ಎಂಬುವುದಾಗಿಯೂ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ ಅನಿಲ್ ಕುಂಬ್ಳೆ.
BMTC trip back home today from the airport. pic.twitter.com/jUTfHk1HrE
— Anil Kumble (@anilkumble1074) September 11, 2023

