Saturday, July 27, 2024

Latest Posts

ಅಂಜಲಿ ಹಂತಕ ಗಿರೀಶ್‌ಗೆ ಕಠಿಣ ಶಿಕ್ಷೆಯಾಗಬೇಕು: ವಿಚಾರಣೆ ಬಳಿಕ ಸಂತ್ರಸ್ತೆ ಹೇಳಿಕೆ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಹತ್ಯೆ ಆರೋಪಿ ಗಿರೀಶ್‌ನನ್ನು ಸಿಐಡಿ ಇಂದು ಇಡೀ ದಿನ ಡ್ರಿಲ್ ಮಾಡಿದ್ದು, ಪ್ರಕರಣದ ಬಗ್ಗೆ ಇಂಚಿಂಚು ಮಾಹಿತಿ ಪಡೆಯುತ್ತಿದೆ.

ಅಲ್ಲದೇ, ಟ್ರೇನ್‌ನಲ್ಲಿ ಗದಗ ಮಹಿಳೆಗೆ ಗಿರೀಶ್ ಚಾಕು ಚುಚ್ಚಿದ್ದು, ಆ ಮಹಿಳೆಯನ್ನು ಕೂಡ ಕರೆಸಿ ವಿಚಾರಣೆ ನಡೆಸಲಾಗಿದೆ. ರೈಲಿನಲ್ಲಿ ಬರುವಾಗ, ದಾವಣಗೆರೆಯ ಬಳಿ, ಆ ಮಹಿಳೆ ಶೌಚಕ್ಕೆ ಹೋಗುವಾಗ, ಗಿರೀಶ್ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ, ಚಾಕು ಚುಚ್ಚಿದ್ದ.

ಹೀಗಾಗಿ ಸಂತ್ರಸ್ತೆಯನ್ನು ಕರೆಸಿ, ವಿಚಾರಣೆ ನಡೆಸಿದ್ದು, ಬಳಿಕ ಆಕೆ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ.  ಇಂದು ನಮ್ಮನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ಕರೆದಿದ್ದರು. ಈ ವೇಳೆ ಆರೋಪಿ ಮುಂದೆ ನಿಲ್ಲಿಸಿ ಕೆಲವು ಪ್ರಶ್ನೆ ಕೇಳಿದರು. ರೈಲಿನಲ್ಲಿ ಚಾಕುವಿನಿಂದ ಅಟ್ಯಾಕ್ ಮಾಡಿದ್ದ ಆರೋಪಿ ಇವನೇನಾ ಎಂದರು. ಅದಕ್ಕೆ ನಾನಾ ಹೌದು ಎಂದು ಹೇಳಿದೆ. ನನ್ನ ಮಗನ ಹಾಸ್ಟೆಲ್ ಅಡ್ಮಿಶೇನ್ ತುಮಕುರುಗೆ ತೆರಳುದ್ವಿ. ಮರಳಿ ಬರುವ ಸಂದರ್ಭದಲ್ಲಿ ಇತ ನಾವಿರೋ ಟ್ರೈನಲ್ಲಿ ಇದ್ದಾ.

ನನ್ನೇ ದಿಟ್ಟಿಸಿ ನೋಡುತ್ತಿದ್ದಾ, ವಾಶ್ರೂಮಗೆ ತೆರಳಿದಾಗ ಫಾಲೋ ಮಾಡಿ ಬಂದಿದ್ದ. ನನ್ನನ್ನು ಯಾಕೆ ಫಾಲೋ ಮಾಡತ್ತಿದ್ದೀತಾ ಎಂದು ಪ್ರಶ್ನೆ ಮಾಡಿದೆ. ಈ ವೇಳೆ ತಕ್ಷಣವೇ ಚಾಕು ತೆಗೆದು ಹೊಟ್ಟೆಗೆ ಹಾಕಲು ಯತ್ನಿಸಿದ್ದಾ. ಈ ವೇಳೆ ಅದು ತಪ್ಪಿ‌ ನನ್ನ ಕೈಗೆ ಬಿದಿತ್ತು. ಇತ ಒಂದು ಕೊಲೆ ಮಾಡಿ ಬಂದಿದ್ದಾನೆ ಅನ್ನುವುದು ಗೊತ್ತೆ ಇರಲಿಲ್ಲ. ಅಂದು ಘಟನೆಯ ನಂತರ ಈತ ಒಂದು‌ಕೊಲೆ ಮಾಡಿ ಬಂದಿದ್ದಾ‌ ಅನ್ನುವುದು ಕೇಳಿ ಭಯವಾಗಿತ್ತು. ಇಂತಹವನಿಗೆ ತಕ್ಕ ಶಿಕ್ಷೆಯಾಗಬೇಕು. ಇತನಿಗೆ ಹೊರಗೆ ಬಾರದ ಹಾಗೇ ಸಿಐಡಿ ಅಧಿಕಾರಿಗಳು ಮಾಡಬೇಕು ಎಂದು ಮಹಿಳೆ ಆಗ್ರಹಿಸಿದ್ದಾರೆ.

ಅಂಜಲಿ ಹಂತಕನಿಗೆ ಸಿಐಡಿ ಅಧಿಕಾರಿಗಳ ಡ್ರಿಲ್: ಚುರುಕುಗೊಂಡ ತನಿಖೆ..!

ಹೆಚ್.ಡಿ.ಕುಮಾರಸ್ವಾಮಿ ಪೆನ್‌ಡ್ರೈವ್ ಪಿತಾಮಹ: ಕೆ.ಎನ್.ರಾಜಣ್ಣ

ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಈಶ್ವರಪ್ಪ

- Advertisement -

Latest Posts

Don't Miss