ಅಂಕಿತಾ ಅಮರ್ ಕಿರುತೆರೆಯಿಂದ ಜನಪ್ರಿಯರಾದ ನಟಿ. ಹಾಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ಮತ್ತು ಗಾಯಕಿ. ‘ಪುಟ್ಟಗೌರಿ ಮದುವೆ’ ಸೀರಿಯಲ್ ನಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಇವರು, ಕಲರ್ಸ್ ಕನ್ನಡದ ‘ನಮ್ಮನೆ ಯುವರಾಣಿ’ ಸೀರಿಯಲ್ ನಲ್ಲಿ ನಟಿಸಿ ಜನರ ಮನಸ್ಸನ್ನ ಸೆಳೆದಿದ್ದಾರೆ.
ಅಂಕಿತಾ ಅಮರ್ ಗಾಯಕಿ ಮತ್ತು ನಟಿ. ಇಷ್ಟು ದಿನ ಕಿರುತೆರೆಯಲ್ಲಿ ಮಿಂಚುತ್ತಿದ್ದ ಈಕೆ ಇದೀಗ ರಕ್ಷಿತ್ ಶೆಟ್ಟಿ ತಂಡವನ್ನು ಸೇರಿಕೊಂಡಿದ್ದಾರೆ.
ಅಂದ್ಹಾಗೆ ಅಂಕಿತಾ ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ‘777 ಚಾರ್ಲಿ’ ಚಿತ್ರ ರಿಲೀಸ್ ಆದ ನಂತರದಲ್ಲಿ ಈ ಸಿನಿಮಾ ಘೋಷಣೆಯಾಗುವುದು. ಇನ್ನು ಈ ಸಿನಿಮಾವನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಲಿದ್ದು, ಇದೊಂದು ಕಾವ್ಯಾತ್ಮಕ ಸಿನಿಮಾವಂತೆ.
ಇನ್ನು ಈ ಸಿನಿಮಾ ಬಗ್ಗೆ ಅಂಕಿತಾ ಅಮರ್ ಮಾತನಾಡಿದ್ದು, “ಈ ಸಿನಿಮಾದಲ್ಲಿ ನನ್ನ ನೆನಪುಗಳಲ್ಲಿ ನಾನು ಬದುಕುತ್ತಿರುತ್ತೇನೆ. ನನ್ನ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡು ಖುಷಿ ಪಡುತ್ತಿರುತ್ತೇನೆ. ಈ ರೀತಿ ನೆನಪು ಮಾಡಿಕೊಳ್ಳದೆ ಒಂದು ದಿನವೂ ನಾನು ಕಳೆಯದಿರೋದಿಲ್ಲ. ನನ್ನ ಸುತ್ತಮುತ್ತ ಇರುವ ಎಲ್ಲರಿಗೂ ನನ್ನ ಪಾತ್ರ ತುಂಬ ಇಷ್ಟವಾಗಿರುತ್ತದೆ. ನನಗೂ ಈ ಸಿನಿಮಾದ ಪಾತ್ರಕ್ಕೂ ತುಂಬ ಹೊಂದಿಕೆಯಿದೆ. ಹಾಗಾಗಿ ತೆರೆ ಮೇಲೆ ಅದ್ಭುತವಾಗಿ ಬರುವುದು ಎಂದು ಬಯಸಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಸದ್ಯ ಅಂಕಿತಾ ತೆಲುಗು ಸೀರಿಯಲ್ ಒಂದರಲ್ಲಿ ನಟಿಸುತ್ತಿದ್ದು, ‘ಅಬ ಜಬ ದಬ’ ಸಿನಿಮಾದಲ್ಲಿ ಕೂಡ ಪೃಥ್ವಿ ಅಂಬರ್ ಜೊತೆ ನಟಿಸುತ್ತಿದ್ದಾರೆ. ‘ಅಬ ಜಬ ದಬ’ ಸಿನಿಮಾ ನಂತರದ ಎರಡನೇ ಸಿನಿಮಾ ಇದಾಗಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ