- Advertisement -
ರಾಜಕೀಯ: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು ಹತ್ತು ಕೆಜಿ ಅಕ್ಕಿ ಬದಲಿಗೆ ಐದು ಕೆಜಿ ಅಕ್ಕಿ ಮತ್ತು ಇನೈದು ಕೆಜಿ ಅಕ್ಕಿ ಬದಲಿಗೆ ಹಣ ಹಾಕುವುದಾಗಿ ಘೋಷಿಸಿ ಆದೇಶಿಸಿತ್ತು
ಆದರೆ ಆರಂಭದಲ್ಲಿ ಐಎಫ್ ಸಿ ಮೊದಲು ಅಕ್ಕಿ ಕೊಡಲು ಒಪ್ಪಿಗೆ ನೀಡಿತ್ತು ನಂತರದಲ್ಲಿ ದಾಸ್ತಾನು ಇಲ್ಲವೆಂದು ಕೊಡಲು ನಿರಾಕರಿಸಿತು.ಆಮೇಲೆ 3.6 ಲಕ್ಷ ಟನ್ ಅಕ್ಕಿಯನ್ನು ಕನಿಷ್ಠ ಬೆಲೆಗೆ ನೀಡಲು ಇ ಹರಾಜಿಗೆ ಮುಂದಾಗಿತ್ತು.ಆದರೆ ಇ ಹರಾಜಿನಲ್ಲಿ ನಿರಾಸೆ ಉಂಟಾಗಿದೆ.
ಕೇವಲ 170 ಟನ್ ಅಕ್ಕಿ ಮಾತ್ರ ಬಿಡ್ಡಿಂಗ್ ಸ್ವೀಕರಿಸಲಾಯಿತು ಮೊದಲು ಸಮ್ಮತಿ ಸೂಚಿಸಿದ ಐಎಸ್ ಸಿ ನಂತರ ಅಕ್ಕಿ ಕೊಡಲು ನಿರಾಕರಿಸಿರು. ಬಿಜೆಪಿ ನಾಯಕರೆ ಅಕ್ಕಿ ಕೊಡುವುದನ್ನು ತಡೆದಿದ್ದಾರೆ ಎಂದು ಆಡಿಕೊಳ್ಳುತಿದ್ದಾರೆ.ಹರಾಜಿಗೆ ನೀರಸ ಪ್ರತಿಕ್ರಿಯೆ ಕೇಳಿ ಬಂದಿರುವ ಕಾರಣ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆ ಶುರುವಾಗಿದೆ..
- Advertisement -