Tuesday, October 14, 2025

Latest Posts

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಶಿವಣ್ಣ ಕೊಟ್ರು ಅಭಿಮಾನಿಗಳಿಗೆ ಗಿಫ್ಟ್..!

- Advertisement -

ಏಪ್ರಿಲ್-೨೪ ರಂದು ನಟಸಾರ್ವಭೌಮ ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯದ ಹಲವೆಡೆ ಅಭಿಮಾನಿಗಳು ಕಾರ್ಯಕ್ರಮಗಳನ್ನ ನೆರವೇರಿಸಿ ಸಂಭ್ರಮಿಸ್ತಾರೆ. ಅದರಂತೆಯೇ ಈ ದಿನ ಅಣ್ಣಾವ್ರ ಕುಡಿ ಡಾ.ಶಿವರಾಜ್‌ಕುಮಾರ್ ದೊಡ್ಮನೆ ಅಭಿಮಾನಿಗಳಿಗೆ ಸ್ಪೆಷಲ್ ಸುದ್ದಿ ಕೊಟ್ಟಿದ್ದಾರೆ.

​ಅಣ್ಣಾವ್ರ ಜನ್ಮದಿನದಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾದ ಫಸ್ಟ್ ಲುಕ್ ಅನಾವರಣ ಆಗಿದೆ. ಈ ಚಿತ್ರಕ್ಕೆ ‘ಗೋಸ್ಟ್’ ಎಂದು ಟೈಟಲ್ ಇಟ್ಟಿದ್ದು ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಮೂಡಿಬರಲಿದೆ.

ಹೊಸ ನಿರ್ದೇಶಕರಿಂದ ಹಿಡಿದು ಅನುಭವಿ ಡೈರೆಕ್ಟರ್​ಗಳ ನೆಚ್ಚಿನ ನಾಯಕ ನಟನಾಗಿರುವ ಶಿವರಾಜ್ ಕುಮಾರ್, ಸದ್ಯ ಸ್ಯಾಂಡಲ್‌ವುಡ್​ನಲ್ಲಿ ಬಿಡುವಿಲ್ಲದ ನಟರಾಗಿದ್ದಾರೆ.ಸದ್ಯ ಬಿಡುಗಡೆ ಆಗಿರುವ ಗೋಸ್ಟ್ ಸಿನಿಮಾದ ಪೋಸ್ಟರ್​ನಲ್ಲಿ ಎಕೆ 47 ಗನ್​ ಹಿಡಿದು ಶಿವರಾಜ್ ಕುಮಾರ್ ಸಖತ್ ಯಂಗ್​ ಆಗಿ ಕಾಣುತ್ತಿದ್ದಾರೆ. ಕನ್ನಡದಲ್ಲಿ ಶ್ರೀನಿವಾಸ ಕಲ್ಯಾಣ, ಬೀರ್‌ಬಲ್, ಓಲ್ಡ್ ಮಾಂಕ್​ಗಳಲ್ಲಿ ನಿರ್ದೇಶನ ಮಾಡಿ ಅಭಿನಯಿಸಿ ಭರವಸೆ ಹುಟ್ಟಿಸಿರೋ ಶ್ರೀನಿ ಈ ಸಿನಿಮಾವನ್ನು ಬರೆದು ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಉಳಿದ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ.

ಕರ್ನಾಟಕ ಟಿವಿ

- Advertisement -

Latest Posts

Don't Miss