Monday, April 21, 2025

Latest Posts

ಹೊಸ ಸೀರಿಯಲ್ ನಲ್ಲಿ ಅನಿರುದ್ಧ್ ಭಾರೀ ನಿರೀಕ್ಷೆ..!

- Advertisement -

ಕಲಾ ಸಾಮ್ರಾಟ್ ಎಸ್. ನಾರಾಯಣ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ಅನಿರುದ್ಧ ನಾಯಕನಾಗಿ ಪಾತ್ರ ಮಾಡಲಿದ್ದಾರೆ..

ಈ ಬಗ್ಗೆ ನಟ ಅನಿರುದ್ಧ ಸ್ವತಹ ಪೋಸ್ಟ್ ಹಾಕಿದು, ಕರ್ನಾಟಕ ಟಿವಿಗೂ ಆ ಪೋಸ್ಟ್ ಲಭ್ಯವಿದೆ..
ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ”
-ಅನಿರುದ್ಧ, ನಟ

ಈ ಬಗ್ಗೆ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ ನಟ ಅನಿರುದ್ಧ ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೇನೆ , ಎಸ್.ನಾರಾಯಣ್ ಸರ್ ಜೊತೆ ಕೆಲಸ ಮಾಡಲು ತುಂಬಾ
ಸಂತೋಷವಿದೆ ಎಂದರು..

ಸೂರ್ಯವಂಶ” ಕಲಾ ಸಾಮ್ರಾಟ್ ಎಸ್.ನಾರಾಯಣ್ ರಚನೆ ಮತ್ತು ನಿರ್ದೇಶನದ ಸೀರಿಯಲ್ ಹಾಗಾಗಿ ಸೀರಿಯಲ್ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದು,
ಈ ಸೀರಿಯಲ್ ಹೇಗಿರುತ್ತದೆ? ಅನಿರುದ್ಧ ಇಲ್ಲಿ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ? ಈ ರೀತಿ ಹಲವಾರು ಪ್ರಶ್ನೆಗಳೂ ಹುಟ್ಟುಕೊಂಡಿವೆ.

ಹರೀಶ್ ರಿಕ್ಕಿ
ಫಿಲಂ ಬ್ಯುರೋ
ಕರ್ನಾಟಕ ಟಿವಿ

- Advertisement -

Latest Posts

Don't Miss