ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಚಿತ್ರ ಜೂನ್ 10 ರಂದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಕೆಜಿಎಫ್-೨ ಚಿತ್ರದ ನಂತರ ‘777 ಚಾರ್ಲಿ’ ಕನ್ನಡ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗಿದೆ. ಇನ್ನು ಸಿನಿಮಾ ತನ್ನ ಟ್ರೇಲರ್ ನಿಂದ ಭಾರತೀಯ ಚಿತ್ರರಂಗದಲ್ಲಿ ಹಲವರ ಗಮನ ಸೆಳೆದಿದೆ.
ಈಗಾಗಲೇ ರಕ್ಷಿತ್ ಶೆಟ್ಟಿ ಆಂಡ್ ಟೀಮ್ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ಮಾಡುತ್ತಿದ್ದಾರೆ. ಇದರ ಜೊತೆಗೆ ನಿನ್ನೆಯಷ್ಟೇ (ಮೇ 30) ರಂದು ‘777 ಚಾರ್ಲಿ’ ಸಿನಿಮಾದ ಜರ್ನಿ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಈ ಹಾಡಿನಲ್ಲಿ ಚಾರ್ಲಿ ಮತ್ತು ಧರ್ಮನ ಬಾಂಧವ್ಯ ಕಂಡು ಅಭಿಮಾನಿಗಳು ದಂಗಾಗಿ ಹೋಗಿದ್ದು, ಸಿನಿಮಾ ನೋಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಈ ಹಾಡಿನಲ್ಲಿ ಧರ್ಮ ಹಾಗೂ ಚಾರ್ಲಿಯ ಸಂಬಂಧದ ಬಗ್ಗೆ ಹೇಳಲಾಗಿದ್ದು, ಪ್ರತಿಯೊಂದು ಸಾಲುಗಳು ಕೂಡ ಅರ್ಥ ಪೂರ್ಣವಾಗಿದೆ.
ಇನ್ನೂ ಕನ್ನಡದಲ್ಲಿ ಈ ಸಿನಿಮಾ ಸೂಪರ್ ಹಿಟ್ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ. ಸಿನಿಮಾ ಅನೌನ್ಸ್ ಆದಾಗಿನಿಂದಲೂ ಸಿನಿಮಾ ಮೇಲಿರುವ ನಿರೀಕ್ಷೆ ಹೆಚ್ಚುತ್ತಲೇ ಇದೆ. ಟಾರ್ಚರ್, ಒಗಾ ಸಾಂಗ್ಗಳು ಈಗಾಗಲೇ ಹಿಟ್ ಲಿಸ್ಟ್ ಸೇರಿದೆ. ಇದೀಗ ಈ ಸಾಲಿಗೆ ಜರ್ನಿ ಸಾಂಗ್ ಕೂಡ ಸೇರಿಕೊಂಡಿದೆ. ನೋಬಿನ್ ಪೌಲ್ ಸಂಗೀತ ನೀಡಿರುವ ಈ ಸಿನಿಮಾ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ