Sunday, December 22, 2024

Latest Posts

ಅನುಷ್ಕಾ ಶರ್ಮಾ ಬಿಗ್‌ಸ್ಕ್ರೀನ್‌ಗೆ ಭರ್ಜರಿ ಕಮ್‌ಬ್ಯಾಕ್!

- Advertisement -

www.karnatakatv.netಅನುಷ್ಕಾ ಶರ್ಮಾ ಅಭಿಮಾನಿಗಳು ವಿಸಿಲ್ ಹೊಡೆಯುವ, ಕುಣಿದು ಕುಪ್ಪಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಬೆಳ್ಳಿತೆರೆಮೇಲೆ ಅನುಷ್ಕಾನ ಕಣ್ತುಂಬಿಕೊಳ್ಳೋದಕ್ಕೆ ಕಾತುರದಿಂದ ಕಾಯ್ತಿದ್ದ ಫ್ಯಾನ್ಸ್ ಗೆ ಈ ಸುದ್ದಿ ಸಪ್ರೈಸ್ ಕೊಡಲಿದೆ. ಹೌದು, ಅನುಷ್ಕಾಶರ್ಮಾ ಮತ್ತೆ ಬಿಗ್‌ಸ್ಕ್ರೀನ್‌ಗೆ ಕಮ್‌ಬ್ಯಾಕ್ ಮಾಡ್ತಾರಂತೆ. ಕ್ರೀಡಾಧಾರಿತ ಚಿತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನುವ ಸುದ್ದಿ ಬಿಟೌನ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

ವಮಿಕಾ ಹಾರೈಕೆಯಲ್ಲಿ ಅನುಷ್ಕಾ

ಅಂದ್ಹಾಗೇ, ಕಳೆದ ಎರಡೂವರೆ ವರ್ಷಗಳಿಂದ ಅನುಷ್ಕಾ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ದರು. ಜೀರೋ ಚಿತ್ರದ ನಂತರ ಫ್ಯಾಮಿಲಿಗೆ ಟೈಮ್ ಕೊಡುವುದಕ್ಕೆ ಶುರುಮಾಡಿದರು. ಈ ಮಧ್ಯೆ ಅನುಷ್ಕಾ-ವಿರಾಟ್ ಮಡಿಲಿಗೆ ವಮಿಕ ಆಗಮನವಾಯ್ತು. ತಾಯ್ತನದ ಸಂಭ್ರಮದ ಜೊತೆಗೆ ಪುತ್ರಿ ವಮಿಕಾ ಹಾರೈಕೆಯಲ್ಲಿ ತೊಡಗಿಸಿಕೊಂಡರು. ಈ ನಡುವೆ ಎರಡು ಚಿತ್ರಗಳಿಗೆ ನಿರ್ಮಾಪಕಿಯಾಗಿ ಬಂಡವಾಳ ಹೂಡಿದ್ದರು. ಈ ವಿಷ್ಯ ಗೊತ್ತಾಗಿ ಅನುಷ್ಕಾ ಇನ್ಮೇಲೆ ಬಣ್ಣ ಹಚ್ಚೋದು ಡೌಟ್ ಎಂದು ಎಲ್ಲರೂ ಭಾವಿಸಿದ್ದರು. ಆದ್ರೀಗ, ಮತ್ತೆ ಸಿಲ್ವರ್‌ಸ್ಕ್ರೀನ್‌ಗೆ ಸ್ಪೋರ್ಟ್ಸ್ ಚಿತ್ರದ ಮೂಲಕ ಲಗ್ಗೆ ಇಡಲಿದ್ದಾರೆ ಎನ್ನುವ ಸುದ್ದಿ ಕೇಳಿರ‍್ತಿದೆ.

ಬೆಳ್ಳಿತೆರೆಮೇಲೆ ಜುಲಾನ್ ಗೋಸ್ವಾಮಿ ಜೀವನಚರಿತ್ರೆ !

ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಟಾರ್ ಆಲ್‌ರೌಂಡರ್ ಎನಿಸಿಕೊಂಡು ತಿಕ್ಕಿಅಳಿಸಲಾಗದ ಇತಿಹಾಸ ಬರೆದಿರುವಂತಹ, ಜುಲಾನ್ ಗೋಸ್ವಾಮಿಯವರ ಬಯೋಪಿಕ್‌ಗೆ ಅನುಷ್ಕಾ ಜೀವತುಂಬಲಿದ್ದಾರೆನ್ನುವ ಸುದ್ದಿ ಕೇಳಿರ‍್ತಿದೆ. ಮಹಿಳಾ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಜುಲಾನ್ ಜೀವನಗಾಥೆ ಬೆಳ್ಳಿತೆರೆಮೇಲೆ ತರೋದಕ್ಕೆ ಸೋನಿ ಪಿಕ್ಚರ್ ಸಂಸ್ಥೆ ಸಕಲ ತಯ್ಯಾರಿ ನಡೆಸುತ್ತಿದೆಯಂತೆ.

ಜುಲಾನ್ ಪಾತ್ರಕ್ಕೆ ಜೀವತುಂಬಲಿದ್ದಾರಂತೆ ಅನುಷ್ಕಾ !

ಜುಲಾನ್ ಲೈಫ್‌ಸ್ಟೋರಿ ಸದ್ಯ ಸ್ಕ್ರಿಪ್ಟಿಂಗ್ ಹಂತದಲ್ಲಿದ್ದು, ನಿರ್ದೇಶಕರು ಯಾರು ಅನ್ನೋದು ಇನ್ನೂ ಪಕ್ಕಾ ಆಗಿಲ್ಲ. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದ ಕೊನೆಯಲ್ಲಿ ಅಥವಾ 2022 ರ ಮೊದಲ ತಿಂಗಳಲ್ಲಿ ಚಿತ್ರೀಕರಣ ಶುರುಮಾಡುವ ಪ್ಲಾನ್ ನಲ್ಲಿದ್ದಾರೆ. ಸದ್ಯ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಹಾಗೂ ಮಗಳು ವಮಿಕಾ ಜೊತೆಯಲ್ಲಿ ಇಂಟರ್‌ನ್ಯಾಷನಲ್ ಟೂರ್ ಹೋಗಿದ್ದಾರೆ. ವಮಿಕಾ ಇನ್ನೂ ಆರು ತಿಂಗಳು ಕಂದಮ್ಮ. ಹೀಗಾಗಿ ಅನುಷ್ಕಾ ಕಂದಮ್ಮನನ್ನ ಒಂಟಿಯಾಗಿ ಬಿಟ್ಟು ಚಿತ್ರೀಕರಣಕ್ಕೆ ಹೋಗೋದು ಡೌಟ್. ಹೀಗಾಗಿ, ಜುಲಾನ್ ಜೀವನಗಾಥೆ ಸೆಟ್ಟೇರೋದಕ್ಕೆ ಇನ್ನೂ ಆರು ತಿಂಗಳು ಸಮಯ ಹಿಡಿಯಬಹುದು. ಲೇಟಾದ್ರೂ ಲೇಟೆಸ್ಟಾಗಿ ಬರುತ್ತೆ ಅಂತಾರಲ್ಲ ಹಾಗೆ ಜುಲಾನ್ ಜೀವನಗಾಥೆ ಅದ್ದೂರಿಯಾಗಿ ಸೆಟ್ಟೇರಲಿದೆ. ಸೋನಿ ಪಿಕ್ವರ್ ಅಡಿಯಲ್ಲಿ ಭರ್ಜರಿಯಾಗಿ ಮೂಡಿಬರಲಿದೆ ಎನ್ನುತ್ತೆ ಮೂಲಗಳು.
ಫ್ಲೋ:

- Advertisement -

Latest Posts

Don't Miss