Thursday, December 12, 2024

Latest Posts

ರಾಷ್ಟ್ರದಲ್ಲಿ ಯಾವುದಾದರೂ ಸರ್ಕಾರ ಸತ್ತಂತಾಗಿದೆ ಅಂದ್ರೆ ಅದು ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ ಸೋಮಣ್ಣ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ,  ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೀತಿದೆ. ಮೋದಿ ಅಮಿತ್ ಶಾ ಬಸವರಾಜ್ ಬೊಮ್ಮಾಯಿಗೆ ನೀವೆ ಚುನಾವಣೆಗೆ ನಿಲ್ಲಬೇಕು ಅಂದ್ರು. ಹೀಗಾಗಿ ಶಿಗ್ಗಾಂವಿಗೂ ಉಪಚುನಾವಣೆ ನಡೀತಿದೆ. ರಾಜ್ಯ ಸರ್ಕಾರ ಇದ್ದು ಸತ್ತಂತಾಗಿದೆ. ರಾಷ್ಟ್ರದಲ್ಲಿ ಯಾವುದಾದರೂ ಸರ್ಕಾರ ಸತ್ತಂತಾಗಿದೆ ಅಂದ್ರೆ ಅದು ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಪಂಜರದ ಗಿಳಿ ಆಗಿದ್ದಾರೆ. ಮೊದಲ ಬಾರಿ ಸಿಎಮ್ ಇದ್ದ ಹಾಗೆ ಸಿದ್ದರಾಮಯ್ಯ ಈಗಿಲ್ಲ.
ಚುನಾವಣೆ ಮುಗಿದ ಬಳಿಕ ಸರ್ಕಾರ ಇರತ್ತೆ ಇಲ್ವೋ ಅನ್ನೋ ನಂಬಿಕೆ ಇಲ್ಲ. ಶಿಗ್ಗಾಂವಿ ಅಲ್ಲಿ ನಾವು ಗೆಲ್ತೀವಿ.
ಇವತ್ತು ಜನ ಅಸಹ್ಯ ಪಡತೀದಾರೆ. ಆಟಾಟೋಪ ನಡೆಯಲ್ಲ. ಸಿದ್ದರಾಮಯ್ಯ ಯಾಕೆ ಹಂಗಾಗಿದೆ ಅನ್ನೋದು ಅರ್ಥ ಆಗತಿಲ್ಲ. ಹಳೇ ಸಿದ್ದರಾಮಯ್ಯ ಈಗಿಲ್ಲ. ಜಮೀರ್ ಅಹಮ್ಮದ್ ನನ್ಮ ಸ್ನೇಹಿತ. ಅವರಿಗೆ ಕಾನೂನು ಒದಕೊಬೇಕು. ಮಂತ್ರಿಯಾಗಿ ಒಳ್ಳೆ ಕೆಲಸ ಮಾಡಿ ಎಂದು ಕೇಂದ್ರ ಸಚಿವ ಸೋಮಣ್ಣ ಹೇಳಿದ್ದಾರೆ.

- Advertisement -

Latest Posts

Don't Miss