ಪುನೀತ್ ರಾಜಕುಮಾರ್, ಅವರ ಕುಟುಂಬಸ್ಥರನ್ನ ಮತ್ತು ಅಪಾರ ಅಭಿಮಾನಿಗಳನ್ನ ಅಗಲಿ ಇಂದಿಗೆ 7 ತಿಂಗಳು ಕಳೆದಿದೆ. ಈ ನೋವಿನಿಂದ ಅಪ್ಪು ಅಭಿಮಾನಿಗಳು ಇನ್ನೂ ಕೂಡ ಹೊರಗೆ ಬಂದಿಲ್ಲ.
ಮೇ 29 ಕ್ಕೆ ಅಪ್ಪು ಅವರು ಅಗಲಿ ಏಳು ತಿಂಗಳಾಗಿರುವುದರಿಂದ ಪುನೀತ್ ಕುಟುಂಬಸ್ಥರು ಹಾಗೂ ಆಪ್ತರು ಪುನೀತ್ ಅವರ ಪುಣ್ಯಭೂಮಿಗೆ ಬಂದು ವಿಶೇಷ ಪೂಜೆಯನ್ನು ಸಲ್ಲಿಸಿದರು.
ಅಪ್ಪು ಅಗಲಿದ ದಿನದಂದು ಪ್ರತಿ ತಿಂಗಳು ಕುಟುಂಬಸ್ಥರು ಹಾಗೂ ಆಪ್ತರು ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆಯನ್ನ ಸಲ್ಲಿಸುತ್ತಾರೆ. ಹಾಗೆಯೇ ಈ ಬಾರಿಯೂ ಕೂಡ ಪೂಜೆಯನ್ನು ಸಲ್ಲಿಸಲಾಗಿದೆ. ಪೂಜೆ ಸಲ್ಲಿಸಿದ ಬಳಿಕ ಅಭಿಮಾನಿಗಳಿಗೂ ಕೂಡ ಪುಣ್ಯಭೂಮಿಗೆ ಭೇಟಿ ನೀಡಲು ಅವಕಾಶ ನೀಡಲಾಗಿತ್ತು.
ಅಪ್ಪು ಅವರ ಸಮಾಧಿಗೆ ಕುಟುಂಬಸ್ಥರೆಲ್ಲರೂ ಪೂಜೆ ಸಲ್ಲಿಸಿದ ಬಳಿಕ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ರಾಜ್‌ಕುಮಾರ್ ಅವರ ಸಮಾಧಿಗೂ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿದರು.
ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಿಂದ ಇನ್ನೂ ಅವರ ಅಭಿಮಾನಿಗಳು ಹೊರಗೆ ಬಂದಿಲ್ಲ. ಹೀಗಿರುವಾಗ ಅಪ್ಪು ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ಬಿಡುಗಡೆಯಾಗಿ ಬಾರಿ ಯಶಸ್ಸು ಕಂಡಿದೆ. ಆದರೆ ಅಪ್ಪು ಅವರ ಕನಸಿನ ಸಿನಿಮಾ ‘ಗಂಧದ ಗುಡಿ’ ಯಾವಾಗ ಬಿಡುಗಡೆಯಾಗುತ್ತೆ ಎಂಬ ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾದು ಕೂತಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ