www.karnatakatv.net: ಬೆಂಗಳೂರು : ಮುಂಜಾಗೃತ ಕ್ರಮಕೈಗೊಂಡು ಶೂಟಿಂಗ್ ಮಾಡುವುದುಮತ್ತು ಚಿತ್ರರಂಗಕ್ಕೆ ಆಗುತ್ತಿರುವ ಪೈರಸಿ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಭರವಸೆಯನ್ನು ನೀಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಚಿತ್ರರಂಗದ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ನಮಗೆ ಪರದೆಯ ಹಿಂದಿನ ಸಮಸ್ಯೆ ಕಾಣುವುದಿಲ್ಲ. ಸಿನಿಮಾ ಮಾಡುವ ವೇಳೆ ಎಷ್ಟು ಒತ್ತಡದಲ್ಲಿ ಕೆಲಸ ಕಾರ್ಯಗಳು ನಡೇಯುತ್ತವೆ ಎಂದು ನನಗೆ ಗೊತ್ತು, ಇದೆಲ್ಲದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು, ಕೋಟ್ಯಂತರ ರೂ. ಬಂಡವಾಳ ಹೂಡಿ ಜನರನ್ನು ರಂಜಿಸುವ ನಿಟ್ಟಿನಲ್ಲಿ ಚಲನಚಿತ್ರಗಳನ್ನು ತಯಾರಿಸಲಾಗುತ್ತದೆ. ಆದರೆ ಕೆಲವರು ಅದನ್ನು ನಕಲಿ ಮಾಡಿ ನಿರ್ಮಾಪಕರಿಗೆ ನಷ್ಟ ಉಂಟು ಮಾಡುತ್ತಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಪೈರಸಿ ಹಾವಳಿಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದಕ್ಕೆ ಪ್ರತ್ಯೇಕ ಕಾನೂನು ಮಾಡಲು ಪ್ರಯತ್ನಿಸುತ್ತೇನೆ ಎಂದರು. ಇದಕ್ಕೂ ಮೊದಲು ಸಿನಿಮಾಗಳ ಮೇಲೆ ಪೈರಸಿ ಪ್ರಭಾವ ಜಾಸ್ತಿ ಆಗುತ್ತಿದೆ. ಇದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಗೃಹ ಮಂತ್ರಿಗಳಿಗೆ ಮನವಿ ಮಾಡಲಾಯಿತು.
ಕನ್ನಡ ಪ್ರತಿಭೆಗಳು ಬೆಳೆಯಬೇಕು, ನಾನು ರಾಜ್ ಕುಮಾರ್ ಅಭಿಮಾನಿ ಎಂದ ಅರಗ ಜ್ಞಾನೇಂದ್ರ, ಸೈಬರ್ ತಂಡದಲ್ಲಿ ನೂರಿತ ತಜ್ಞರಿದ್ದಾರೆ ಗುಜರಾತ್ ನಲ್ಲಿ 20ಕ್ಕೂ ಹೆಚ್ಚು ಜನರಿಗೆ ಸೈಬರ್ ಟ್ರೈನಿಂಗ್ ಆಗ್ತಿದೆ ಅದಲ್ಲದೇ ಅಪರಾಧ ಪತ್ತೆ ಹಚ್ಚಲು ಸ್ವಲ್ಪ ಲೇಟ್ ಆಗಿದೆ ಆದರೆ ಅದನ್ನು ಅಲ್ಲಿಯೇ ಬಿಟ್ಟಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ಟಿವಿ- ಬೆಂಗಳೂರು