Friday, November 22, 2024

Latest Posts

ನಿಮಗೆ ಜ್ಞಾಪಕಶಕ್ತಿ ಕಡಿಮೆಯಾಗುತ್ತಿದೆಯೇ.. ನೆನಪಿಗಾಗಿ ಈ ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ..!

- Advertisement -

Health:

ವಯಸ್ಸಾದಂತೆ ಜ್ಞಾಪಕ ಶಕ್ತಿಯೂ ದುರ್ಬಲವಾಗುತ್ತದೆ. ಈ ಪರಿಸ್ಥಿತಿಯಲ್ಲಿ ಅನೇಕ ವಿಷಯಗಳನ್ನು ಮರೆತುಹೋಗುತ್ತಿರುತ್ತಾರೆ . ಈ ಸಮಸ್ಯೆಯು ಕೆಲವೊಮ್ಮೆ ಯುವಜನರಲ್ಲಿಯೂ ಕಂಡುಬರುತ್ತದೆ. ಅದಕ್ಕಾಗಿಯೇ ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು. ನಿಮ್ಮ ದೈನಂದಿನ ಆಹಾರದಲ್ಲಿ ಇವುಗಳನ್ನು ಸೇರಿಸುವುದರಿಂದ ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಹುದು. ಬಾದಾಮಿ, ವಾಲ್‌ನಟ್ಸ್ ಅಥವಾ ಗೋಡಂಬಿಯನ್ನು ಪ್ರತಿದಿನ ತಿನ್ನುವುದರಿಂದ ಜ್ಞಾಪಕಶಕ್ತಿಯನ್ನು ಸುಧಾರಿಸಬಹುದು. ಹಾಗಾದರೆ ನೆನಪಿನ ಶಕ್ತಿ ಹೆಚ್ಚಿಸುವ ಆಹಾರಗಳ ಬಗ್ಗೆ ತಿಳಿಯೋಣ.

ನೆನಪಿನ ಶಕ್ತಿ ಹೆಚ್ಚಿಸುವ ಆಹಾರಗಳು
ನಿಮ್ಮ ಆಹಾರದಲ್ಲಿ ಎಲೆಕೋಸು, ಈರುಳ್ಳಿ ಮತ್ತು ಕೋಸುಗಡ್ಡೆಯಂತಹ ತರಕಾರಿಗಳನ್ನು ಸೇವಿಸಬೇಕು. ಏಕೆಂದರೆ ಇದರಲ್ಲಿ ಫ್ಲೇವನಾಯ್ಡ್‌ಗಳಿವೆ. ಇವು ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಲು, ಮೊಸರು, ಮೀನು, ಕಾಳುಗಳು, ಬೀನ್ಸ್, ಕುಂಬಳಕಾಯಿ ಬೀಜಗಳು, ಗೋಧಿ, ಬಾರ್ಲಿ, ಓಟ್ಸ್ ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಬೇಕು. ಏಕೆಂದರೆ ಇದರಲ್ಲಿ ಮೆಗ್ನೀಸಿಯಮ್ ಅಧಿಕವಾಗಿದೆ. ಇವು ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮೊಳಕೆಗಳು, ಪಾಲಕ್, ಕ್ಯಾರೆಟ್, ಸಿಹಿ ಆಲೂಗಡ್ಡೆ ಇತ್ಯಾದಿಗಳಲ್ಲಿ ಕ್ಯಾರೊಟಿನಾಯ್ಡ್ಗಳು ಎಂಬ ಅಂಶಗಳಿದೆ ಇವು ಜ್ಞಾಪಕಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನೀವು ನಿಮ್ಮ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ಮೊಟ್ಟೆಯ ಹಳದಿ, ಧಾನ್ಯಗಳು, ಸೋಯಾಬೀನ್ ಮತ್ತು  ಎಳ್ಳಿನಲ್ಲಿ ಲೆಸಿಥಿನ್ ಎಂಬ ಪೋಷಕಾಂಶವಿದೆ. ಇವು ಮೆಮೊರಿ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತಾದೆ.

ಮೊಟ್ಟೆ, ಕೋಳಿ, ಮೀನು ಮತ್ತು ಹಾಲು ಮುಂತಾದ ವಿಟಮಿನ್ ಬಿ 12 ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಂಬೆ, ಆಮ್ಲಾ, ಕ್ಯಾಪ್ಸಿಕಂ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದು ಮೆಮೊರಿ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತಾದೆ. ಬಾದಾಮಿ, ವಾಲ್‌ನಟ್ಸ್, ಗೋಡಂಬಿ ಮತ್ತು ಅಂಜೂರದಲ್ಲಿ ವಿಟಮಿನ್ ಇ ಹೇರಳವಾಗಿದೆ.ಇವುಗಳನ್ನು ತಿನ್ನುವುದರಿಂದ ಮೆದುಳಿನ ಕಾರ್ಯವನ್ನು ಸುಧಾರಿಸಬಹುದು. ಅವುಗಳನ್ನು ದೈನಂದಿನ ಆಹಾರದಲ್ಲಿ ತೆಗೆದುಕೊಳ್ಳಬೇಕು.

ಈ ಮೂರು ವಿಧದ ಪಾನೀಯಗಳೊಂದಿಗೆ ದೇಹದಲ್ಲಿ ಕಬ್ಬಿಣದ ಕೊರತೆಗೆ ಚಕ್ ಹೇಳಿ..!

ನೀವು ಸಸ್ಯಾಹಾರಿಯೇ..? ಆದರೆ ಆ ವಿಟಮಿನ್ ಕೊರತೆಯಿಂದ ಚರ್ಮದ ಸಮಸ್ಯೆ ಗ್ಯಾರಂಟಿ..!

ನಿಮಗೆ ಬೆಳಗ್ಗೆ ಎದ್ದ ತಕ್ಷಣ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಾ..?

- Advertisement -

Latest Posts

Don't Miss