Sunday, September 8, 2024

Latest Posts

ನೀವು ಶನಿದೋಷದಿಂದ ಬಳಲುತ್ತಿದ್ದೀರಾ.. ಶನೀಶ್ವರನ ಕೃಪೆಗಾಗಿ ಶನಿವಾರದಂದು ಈ ಕ್ರಮಗಳನ್ನು ಅನುಸರಿಸಿ ..!

- Advertisement -

Devotional:

ಜೀವನದಲ್ಲಿ ಶನಿದೋಷವನ್ನು ತೊಡೆದುಹಾಕಲು, ಶನಿವಾರದಂದು ಶನಿ ದೇವರಿಗೆ ವಿಶೇಷ ಪೂಜೆ ಮತ್ತು ಪರಿಹಾರಗಳನ್ನು ಸೂಚಿಸಲಾಗುತ್ತದೆ. ಶನಿಗ್ರಹವನ್ನು ಮೆಚ್ಚಿಸಲು ಶನಿವಾರದಂದು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಂದು ತಿಳಿದುಕೊಳ್ಳೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆಯಾದರೂ ಶನಿಯ ಪ್ರಭಾವವನ್ನು ಎದುರಿಸಬೇಕಾಗುತ್ತದೆ. ಶನಿದೋಷದಿಂದಾಗಿ ವ್ಯಕ್ತಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ಮನುಷ್ಯನು ಮಾಡುವ ಕರ್ಮಗಳ ಪ್ರಕಾರ, ಶನಿಯು ಕೆಲವರಿಗೆ ಶುಭ ಮತ್ತು ಇತರರನ್ನು ಕೆಟ್ಟ ರೀತಿಯಲ್ಲಿ ಪ್ರಭಾವಿಸುತ್ತಾನೆ. ಶನಿ ದೇವರ ಕೋಪವು ಜನರ ಜೀವನ, ಉದ್ಯೋಗ, ವ್ಯಾಪಾರ, ಹಣಕಾಸು ಮತ್ತು ಆರೋಗ್ಯದಲ್ಲಿ ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಆದರೆ, ಶನಿಯು ಯಾವಾಗಲು ಸಮಸ್ಯೆಗಳನ್ನು ನೀಡುತ್ತಾನೆ ಎಂಬುದು ನಿಜವಲ್ಲ. ಶನಿದೇವನ ಆಶೀರ್ವಾದ, ಅನುಗ್ರಹವಿರುವ ವ್ಯಕ್ತಿಯ ಜೀವನವು ತುಂಬಾ ಸಂತೋಷವಾಗಿರುತ್ತದೆ. ಶನಿದೇವನ ಕೃಪೆಯಿಂದ ಜೀವನ ಸುಖಮಯವಾಗಿ ಸಾಗುತ್ತದೆ. ಅವನು ರಾಜಯೋಗದಿಂದ ಬೆಳಗುತ್ತಾನೆ. ಪುರಾಣಗಳ ಪ್ರಕಾರ, ಶನೀಶ್ವರನು ಛಾಯಾ ಮತ್ತು ಸೂರ್ಯ ದೇವರ ಮಗ.

ಶನೀಶ್ವರನು ನ್ಯಾಯ ಮತ್ತು ಕರ್ಮವನ್ನು ಕೊಡುವವನು ಎಂದು ಕರೆಯಲಾಗುತ್ತದೆ. ಶುಭ ಕಾರ್ಯಗಳನ್ನು ಮಾಡುವವರಿಗೆ ಶನಿಯು ಶುಭ ಫಲವನ್ನು ನೀಡುತ್ತಾನೆ. ಕೆಟ್ಟ ಕೆಲಸಗಳಿಗೆ ಶಿಕ್ಷೆಯನ್ನೂ ಕೊಡುತ್ತಾನೆ. ಶನಿಯ ಅಂಶವು ಕೆಟ್ಟ ಪ್ರಭಾವದಲ್ಲಿದ್ದರೆ ವ್ಯಕ್ತಿಗೆ ಕೆಟ್ಟ ದಿನಗಳು ಪ್ರಾರಂಭವಾಗುತ್ತವೆ ಎಂದು ನಂಬುತ್ತಾರೆ, ಕೆಲಸದಲ್ಲಿ ನಿರಂತರ ವೈಫಲ್ಯಗಳು, ಶನಿದೋಷವು ವ್ಯಕ್ತಿಯ ಜೀವನದ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ. ಇದರಿಂದ ಮನುಷ್ಯ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಶನಿದೋಷ ಪರಿಣಾಮ ಕಡಿಮೆಯಾಗಲು, ಶನೀಶ್ವರನ ಕೃಪೆ ಪಡೆಯಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಉಪಾಯಗಳನ್ನು ಹೇಳಲಾಗಿದೆ. ಜೀವನದಲ್ಲಿ ಶನಿದೋಷವನ್ನು ತೊಡೆದುಹಾಕಲು, ಶನಿವಾರದಂದು ಶನಿ ದೇವರಿಗೆ ವಿಶೇಷ ಪೂಜೆ ಮತ್ತು ಪರಿಹಾರಗಳನ್ನು ಸೂಚಿಸಲಾಗುತ್ತದೆ. ಶನಿಗ್ರಹವನ್ನು ಮೆಚ್ಚಿಸಲು ಶನಿವಾರದಂದು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಂದು ತಿಳಿದುಕೊಳ್ಳೋಣ.

ಶನಿವಾರದಂದು ಹನುಮಂತನ ಆರಾಧನೆ:
ಹನುಮಂತನನ್ನು ಪೂಜಿಸುವ ಯಾವುದೇ ಭಕ್ತನಿಗೆ ಶನೀಶ್ವರನ ಆಶೀರ್ವಾದ ಯಾವಾಗಲೂ ಇರುತ್ತದೆ ಎಂಬುದು ನಂಬಿಕೆ. ಶನೀಶ್ವರನ ಆಶೀರ್ವಾದ ಪಡೆಯಲು ಮತ್ತು ಜಾತಕದಲ್ಲಿ ಶನಿ ದೋಷ ನಿವಾರಣೆಗೆ ಶನಿವಾರದಂದು ಹನುಮಂತನನ್ನು ಪೂಜಿಸಬೇಕು. ವಿಶೇಷವಾಗಿ ಶನಿವಾರದಂದು ಹನುಮಾನ್ ಚಾಲೀಸಾ ಅಥವಾ ಸುಂದರಕಾಂಡವನ್ನು ಪಠಿಸಿ.

ಆಲದ ಮರಕ್ಕೆ ಪೂಜೆ:
ಹಿಂದೂ ಧರ್ಮಗ್ರಂಥಗಳು, ಪುರಾಣಗಳ ಪ್ರಕಾರ, ಎಲ್ಲಾ ದೇವತೆಗಳು ಆಲದ ಮರದಲ್ಲಿ ವಾಸಿಸುತ್ತಾರೆ ಎಂದು ನಂಬಲಾಗಿದೆ. ಆಲದ ಮರದಲ್ಲಿ ವಿಷ್ಣು ಮತ್ತು ಲಕ್ಷ್ಮಿಯು ವಾಸಸ್ಥಾನವಾಗಿದೆ .ಶನೀಶ್ವರ ಶ್ರೀಕೃಷ್ಣನ ಪರಮ ಭಕ್ತ. ಇಂತಹ ಪರಿಸ್ಥಿತಿಯಲ್ಲಿ ಆಲದ ಮರವನ್ನು ಪೂಜಿಸುವ ವ್ಯಕ್ತಿ, ಶನಿವಾರದಂದು ಸೂರ್ಯೋದಯದ ಸಮಯದಲ್ಲಿ ಆಲದ ಮರಕ್ಕೆ ನೀರನ್ನು ಹಾಕಿ, ಎಣ್ಣೆಯಿಂದ ದೀಪಗಳನ್ನು ಹಚ್ಚಿ, ಹೀಗೆ ಮಾಡಿದರೆ ಶನೀಶ್ವರನ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಹೀಗೆ ಅರಳಿ ಮರವನ್ನು ಪೂಜಿಸುವುದರಿಂದ ಶನಿದೇವನ ಕೃಪೆಗೆ ಪಾತ್ರರಾಗುತ್ತಾರೆ.

ಶನೀಶ್ವರ ಮಂತ್ರಗಳನ್ನು ಪಠಿಸಿ:
ಶನೀಶ್ವರನಿಗೆ ಸಮರ್ಪಿತವಾದ ಮಂತ್ರಗಳು, ಶನಿಯ ಆಶೀರ್ವಾದವನ್ನು ಪಡೆಯಲು, ಜಾತಕದಲ್ಲಿ ಶನಿಯ ಪ್ರಭಾವವನ್ನು ಕಡಿಮೆ ಮಾಡಲು ಚಾಲೀಸಾವನ್ನು ಪಠಿಸಬೇಕು. ಶನಿವಾರದಂದು ಓಂ ಪ್ರಾಂ ಪ್ರೇಂ ಪ್ರೌಂ ಸಃ ಶನೈಶ್ಚರಾಯ ನಮಃ ಅಥವಾ ಓಂ ಶನಿ ಶನೈಶ್ಚರಾಯ ನಮಃ ಎಂದು ಜಪಿಸಿ. ಇದಲ್ಲದೇ ಶನಿ ದೇವಸ್ಥಾನಕ್ಕೆ ಹೋಗಿ ಶನಿ ಚಾಲೀಸವನ್ನು ಪಠಿಸಿ, ಪ್ರಾರ್ಥನೆ ಮಾಡಿ.

ಶನಿವಾರದಂದು ಈ ವಸ್ತುಗಳನ್ನು ದಾನ ಮಾಡಿ:
ಶನಿದೋಷವನ್ನು ತೊಡೆದುಹಾಕಲು ಮತ್ತು ಶನಿದೇವನ ಅನುಗ್ರಹವನ್ನು ಪಡೆಯಲು, ಶನಿವಾರದಂದು ಕಪ್ಪು ಎಳ್ಳು, ಕಪ್ಪು ಛತ್ರಿ, ಸಾಸಿವೆ ಎಣ್ಣೆ, ಪಾದರಕ್ಷೆಗಳು ಮತ್ತು ಚಪ್ಪಲಿಗಳನ್ನು ದಾನ ಮಾಡಿ. ಬಡವರಿಗೆ ಅನ್ನದಾನ ಮಾಡಿ.

ಸಾಸಿವೆ ಎಣ್ಣೆ:
ಶನಿವಾರದಂದು ಒಂದು ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ ಮತ್ತು ನಿಮ್ಮ ಮನಸ್ಸಿನಲ್ಲಿ ಶನಿ ದೇವರನ್ನು ಸ್ಮರಿಸಿಕೊಳ್ಳಿ. ಇದರ ನಂತರ ಶನಿ ದೇವಸ್ಥಾನದಲ್ಲಿ ಈ ಎಣ್ಣೆಯನ್ನು ದಾನ ಮಾಡಿ. ಈ ಪರಿಹಾರವು ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಲಕ್ಷ್ಮೀ ಸದಾ ನಿಮ್ಮ ಮನೆಯಲ್ಲಿರಬೇಕು ಅಂದ್ರೆ ನೀವು ಈ ಕೆಲಸವನ್ನು ಮಾಡಬೇಕು..

ಉಳಿದ ಪೂಜಾ ಸಾಮಗ್ರಿಗಳನ್ನು ಏನು ಮಾಡಬೇಕು ಗೊತ್ತಾ…? ತಿಳಿದುಕೊಳ್ಳಿ..

ಇಂಥಹ ಲಕ್ಷಣಗಳಿರುವ ಸ್ತ್ರೀಯನ್ನು ಹೆಂಡತಿಯಾಗಿ ಪಡೆದುಕೊಳ್ಳುವ ಪತಿ ಅದೃಷ್ಟವಂತ ಎನ್ನುತ್ತಿರುವ ಚಾಣಕ್ಯ..!

- Advertisement -

Latest Posts

Don't Miss