Saturday, May 10, 2025

Latest Posts

ಅಮೆರಿಕ ಕೋರ್ಟ್ನಿಂದ ಗೌತಮ್ ಅದಾನಿ ಸೇರಿ 8 ಜನರ ವಿರುದ್ಧ ಅರೆಸ್ಟ್ ವಾರಂಟ್

- Advertisement -

International News: ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಸೇರಿ 8 ಜನರ ವಿರುದ್ಧ ವಂಚನೆ ಕೇಸ್‌ ಅಡಿ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ.

ಸೋಲಾರ್ ಎನರ್ಜಿ ಕಾಂಟ್ರ್ಯಾಕ್ಟ್ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ. ಗೌತಮ್ ಅದಾನಿ, ಸೈರಿಲ್, ಸಾಗರ್ ಅದಾನಿ, ವಿನೀತ್ ಜೈನ್, ರಂಜೀತ್ ಗುಪ್ತಾ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಎಂಬುವವರ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ.

ಅದಾನಿ ಸೇರಿ ಇನ್ನಿತರರು ಸೋಲಾರ್ ಎನರ್ಜಿ ಕಾಂಟ್ರಾಕ್ಟ್ ಪಡೆಯಲು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್‌ಗೂ ಅಧಿಕ ಮೊತ್ತದಷ್ಟು ಲಂಚ ನೀಡಿದ್ದಾರೆಂಬ ಆರೋಪವಿದೆ. ಅಲ್ಲದೇ, ವಿದೇಶಿ ಹೂಡಿಕೆದಾರರಿಂದ ಈ ವಿಷಯ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಹಾಗಾಗಿ ಅದಾನಿ ಮತ್ತು 7 ಜನರ ವಿರುದ್ಧ ಅಮೆರಿಕ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.

- Advertisement -

Latest Posts

Don't Miss