ಹುಬ್ಬಳ್ಳಿ: ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ಬೆಳೆ ಬೆಳೆಯುವ ರೈತರಿಗೆ ಬರಗಾಲ ಆವರಿಸಿದೆ. ರೈತರ ಕಷ್ಟ ನಿವಾರಿಸಲು ಸರ್ಕಾರ ಕೃತಕವಾಗಿ ಮೋಡ ಬಿತ್ತನೆಗೆ ಅನುಮತಿ ನೀಡಿದ ಬೆನ್ನಲ್ಲೆ ಸರ್ಕಾರ ಮೋಡ ಬಿತ್ತನೆಗೆ ಅಧಿಕೃತವಾಗಿ ಚಾಲನೆ ನೀಡಿತು.
ಈಗಾಗಲೆ ಸರ್ಕಾರದಿಂದ ಕೃತಕ ಮೋಡ ಬಿತ್ತನೆಗೆ ಅನುಮತಿ ಸಿಕ್ಕ ಬೆನ್ನಲ್ಲೆ ಕೃತಕ ಮೋಡ ಬಿತ್ತನೆ ಮಾಡಿ ರೈತರಿಗೆ ಬೆಳೆ ಬೆಳೆಯಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಕಾನೂನು ಶಾಸಕ ಹೆಚ್ ಕೆ ಪಾಟೀಲ್ ಅವರು ಮೋಡ ಬಿತ್ತನೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಇನ್ನು ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಒಡೆತನಕ್ಕೆ ಸೇರಿದ ಪಿಕೆಕೆ ಸಂಸ್ಥೆ ಮೋಡ ಬಿತ್ತನೆಯ ಜವಬ್ದಾರಿ ವಹಿಸಿಕೊಂಡಿದೆ. ಹಾವೇರಿ ಜಿಲ್ಲೆಯ ರೈತರಿಗಾಗಿ ಇಂದಿನಿಂದ ಮೂರು ದಿನಗಳ ಕಾಲ ಉಚಿತವಾಗಿ ಮೊಡ ಬಿತ್ತನೆ ಕಾರ್ಯ ಮುಂದುವರಿಯಲಿದೆ.
ಇನ್ನೂ ಈ ಕಾರ್ಯಕ್ರಮದಲ್ಲಿ ಹೆಚ್.ಕೆ.ಪಾಟೀಲ್ ಅವರಿಗೆ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕ ಯು.ಬಿ.ಬಣಕಾರ ಸೇರಿದಂತೆ ಅನೇಕ ನಾಯಕರು ಸಾಥ್ ಕೊಟ್ಟರು.
Rayareddy Angry: ನಾನು ಸಿಟ್ಟಾಗಿದ್ದಕ್ಕೆ ಸಮಸ್ಯೆಗೆ ಪರಿಹಾರ’ : ರಾಯರೆಡ್ಡಿ
Ganesh Festival: ಹುಬ್ಬಳ್ಳಿಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ವಿಘ್ನ..!