ನಾವು ಭಾರತದಲ್ಲಿ ಹಲವು ಆರ್ಟಿಸ್ಟ್‌ಗಳನ್ನ ನೋಡಿದ್ದೇವೆ. ಸಮುದ್ರ ದಡದಲ್ಲಿ ಸಿಗುವ ಹೊಯ್ಗೆಯಿಂದ ಕಲಾಕೃತಿಯನ್ನ ಬಿಡಿಸುತ್ತಾರೆ. ದಾರ, ಚಮಚವನ್ನ ಸೇರಿಸಿ, ಚಿತ್ರವನ್ನ ಬಿಡಿಸುತ್ತಾರೆ. ಹೀಗೆ ಚಿತ್ರ ವಿಚಿತ್ರವಾಗಿ ಚಿತ್ರ ಬಿಡಿಸುವ, ಕಲಾಕೃತಿ ರಚಿಸುವ ಆರ್ಟಿಸ್ಟ್‌ಗಳ ಮಧ್ಯೆ, ಕಲಾಕಾರನೋರ್ವ, ಪನೀರ್‌ನ್ನ ಶೀಟ್ ಆಗಿ ಬಳಸಿ, ಸೋಯಾಸಾಸ್‌ನ ಪೇಂಟ್ ರೀತಿ ಬಳಸಿ, ಆಲಿಯಾ ಬಟ್‌ರ ಗಂಗೂಬಾಯಿ ಖಾತಿಯಾವಾಡಿ ಲುಕ್ ಬಿಡಿಸಿ, ನೆಟ್ಟಿಗರ ಮನ ಗೆದ್ದಿದ್ದಾನೆ. ಈಗ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಗಂಗೂಬಾಯಿ ಖಾತಿಯಾವಾಡಿ ಸಿನಿಮಾ ರಿಲೀಸ್ ಆಗುವ ಮುನ್ನ ಸಿನಿಮಾದ ಬಗ್ಗೆ ಹಲವು ವಿವಾದಗಳು ಭುಗಿಲೆದ್ದಿದ್ದವು. ಆದ್ರೆ ಸಿನಿಮಾ ರಿಲೀಸ್ ಆದ ದಿನ, ಹಲವರು ಆಲಿಯಾ ಅಭಿನಯಕ್ಕೆ, ಸಂಜಯ್ ನಿರ್ದೇಶನಕ್ಕೆ ಭೇಷ್ ಎಂದಿದ್ದರು. ಅಂತೆಯೇ ಈ ಸಿನಿಮಾ ಸಖತ್ ಸದ್ದು ಮಾಡಿ, ಕೋಟಿ ಕೋಟಿ ಬಾಚಿತ್ತು. ಇದೀಗ ಅದರ ಕ್ರೇಜ್ ಎಲ್ಲಿವರಿಗೆ ಬಂದಿದೆ ಅಂದ್ರೆ ಪ್ರಫುಲ್ ಎಂಬ ಕಲಾವಿದ, ಪನೀರ್‌ನಲ್ಲಿ ಸೋಯಾ ಸಾಸ್ ಸೇರಿಸಿ, ಆಲಿಯಾಳ ಗಂಗೂಬಾಯಿ ಖಾತಿಯಾವಾಡಿ ಚಿತ್ರವನ್ನ ಬಿಡಿಸಿದ್ದಾನೆ.
ಈ ಸಿನಿಮಾದಲ್ಲಿ ಆಲಿಯಾ ಲುಕ್ ನೋಡಿದವರು, ಈಸಿಯಾಗಿ ಪನೀರ್ ಕಲಾಕೃತಿ ನೋಡಿದ ತಕ್ಷಣ, ಇದು ಆಲಿಯಾ ಭಟ್ ಚಿತ್ರವೇ ಎಂದು ಕಂಡು ಹಿಡಿಯುವಷ್ಟು ಸ್ಪಷ್ಟವಾಗಿದೆ ಈ ಕಲಾಕೃತಿ. ಪ್ರಫುಲ್ ಈ ಚಿತ್ರವನ್ನು ಬಿಟ್ಟು ಹಲವಾರು ಕಲಾಕೃತಿಯನ್ನ ಬಿಡಿಸಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ವೀಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೋ ಕೂಡ ಅಪ್ಲೋಡ್ ಆಗಿದೆ. ಲಿಂಕ್ ಇಲ್ಲಿದೆ ನೋಡಿ..
https://www.instagram.com/p/CacSawmI4u7/




