ದೆಹಲಿ: ಅಬಕಾರಿ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದೆಹಲಿ ಸಿ.ಎಂ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ವಿಸ್ತರಿಸಿದೆ. ಇವರೊಂದಿಗೆ ಮತ್ತೋರ್ವ ಆರೋಪಿ ವಿನೋದ್ ಚೌಹಾಣ್ ಕಸ್ಟಡಿ ಅವಧಿಯನ್ನೂ ವಿಸ್ತರಿಸಲಾಗಿದೆ.
ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಜುಲೈ.3ರ ವರೆಗೆ ವಿಸ್ತರಿಸಿದೆ. ಕಸ್ಟಡಿ ಅವಧಿ ಮುಗಿದ ಬಳಿಕ ಇಬ್ಬರನ್ನೂ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಿಆರ್ಎಸ್ ನಾಯಕಿ ಕವಿತಾ ಅವರ ಪಿ.ಎ ಮೂಲಕ ವಿನೋದ್ ಚೌಹಾಣ್ 25ಕೋಟಿ ರೂ. ಗಳನ್ನು ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಅಭಿಷೇಕ್ ಬೋಯನಪಲ್ಲಿ ಮೂಲಕ ಗೋವಾ ಚುನಾವಣೆಗೆ ಹಣ ಪಡೆದಿದ್ದರು ಎನ್ನುವ ಆರೋಪದ ಮೇಲೆ ಅವರನ್ನು ಮೇ ತಿಂಗಳಲ್ಲಿ ಬಂಧಿಸಲಾಗಿತ್ತು.
ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಲಾಗಿತು. ಆದರೆ ಸುಪ್ರೀಂ ಕೋರ್ಟ್ ಮೇ ತಿಂಗಳಿನಲ್ಲಿ 21ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಕೇಜ್ರಿವಾಲ್ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಏಳು ದಿನಗಳ ಕಾಲ ಜಾಮೀನು ವಿಸ್ತರಿಸಲು ಕೋರಿದ್ದರು. ಆದರೆ ಅವರು ಜಾಮೀನು ಪಡೆಯಲು ಸಾಧ್ಯವಾಗಲಿಲ್ಲ. ಮಧ್ಯಂತರ ಜಾಮೀನು ಮುಗಿದ ನಂತರ ಅವರು ಜೂ.2 ರಂದು ತಿಹಾರ್ ಜೈಲಿನಲ್ಲಿ ಸೇರಿದ್ದರು. ಕೇಜ್ರಿವಾಲ್ ಪರವಾದ ಹಿರಿಯ ವಕೀಲ ವಿವೇಕ್ ಜೈನ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ವಿರೋಧಿಸಿದ್ದಾರೆ ಮತ್ತು ಬಂಧನವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.
Arvind Kejriwal: ಕೇಜ್ರಿವಾಲ್ಗೆ ಸದ್ಯಕ್ಕಿಲ್ಲ ರಿಲೀಫ್..!
- Advertisement -
- Advertisement -