ಡಿ-56 ಅಪ್ಡೇಟ್ ಗೆ ನಾಳೆವರೆಗೂ ಕಾಯ್ಬೇಡಿ, ಇವತ್ತೇ ಕೊಡ್ತೀವಿ ಅಂತ ಹೊಸ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಎಸ್, ವರ ಮಹಾಲಕ್ಷ್ಮಿಹಬ್ಬದ ಪ್ರಯುಕ್ತ ಈ ಶುಭದಿನವೇ ಡಿ-56 ಚಿತ್ರದ ಮುಹೂರ್ತ ನಡೆಯಲಿದ್ದು, ಸದ್ಯ ನಿರ್ದೆಶಕ ತರುಣ್ ಸುಧೀರ್ ಹೊಸ ಅಪ್ಡೇಟ್‌ವೊಂದನ್ನ ಅಭಿಮಾನಿಗಳಿಗೆ ಕೊಟ್ಟಿದ್ದಾರೆ.
ತಮ್ಮ ಟ್ವಿಟ್ಟರ್ ಪೇಜ್‌ನಲ್ಲಿ ನಮ್ಮ ನಾಯಕಿಯನ್ನ ನಾಳೆ ರಿವೀಲ್ ಮಾಡಲಿದ್ದೇವೆ ಎಂದು ಪೋಸ್ಟರ್‌ನಲ್ಲಿ ನಾಯಕಿಯ ಅರ್ದ ಭಾಗ ಮಾತ್ರ ಮುಖ ಕಾಣಿಸುವಂತೆ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳ ಕುತೂಹಲವನ್ನ ಹೆಚ್ಚಿಸಿದೆ ಚಿತ್ರತಂಡ. ಅಂದ್ಹಾಗೆ ಈ ಪೋಸ್ಟರ್‌ನ ನೋಡಿದ ಕೆಲ ಅಭಿಮಾನಿಗಳು ಶ್ರೀಲೀಲಾ ಇರಬಹು ಅಂದ್ರೆ, ಕೆಲವರು ಅನುಷ್ಕಾ ಶೆಟ್ಟಿ ಅಂತಿದ್ದಾರೆ.
ವಿಶೇಷ ಅಂದ್ರೆ 5ನೇ ತಾರೀಖು ನಟಿ ಅಶಿಕಾ ರಂಗನಾಥ್ ಹುಟ್ಟುಹಬ್ಬವಿದೆ, ಹೀಗಾಗಿ ಅವ್ರಿಗೆ ಈ ಮೂಲಕ ಗಿಫ್ಟ್ ಕೊಡಲಿದೆಯೇನೋ ಚಿತ್ರತಂಡ. ಸೋ ದರ್ಶನ್ ಅವ್ರ 56ನೇ ಸಿನಿಮಾಗೆ ಅಶಿಕಾನೇ ನಾಯಕಿ ಅಂತ ಕಮೆಂಟ್ ಮಾಡ್ತಿದ್ದಾರೆ. ಮತ್ತೂ ಕೆಲವರು ಭಾವನಾ, ಸೇರಿದಂತೆ ಹಲವು ನಟಿಮಣಿಯರ ಹೆಸರನ್ನ ಹೇಳ್ತಿದ್ದಾರೆ. ಒಟ್ಟಿನಲ್ಲಿ ನಿರ್ದೇಶಕ ತರುಣ್ ಸುಧೀರ್ ರ ಡಿ-56 ನಾಯಕಿಯ ಬಗ್ಗೆ ಪೋಸ್ಟರ್ ರಿವೀಲ್ ಮಾಡಿ ಕುತೂಹಲ ಹೆಚ್ಚಿಸಿ, ಮಹೂರ್ತಕ್ಕೆ ಮತ್ತೇನು ಅಪ್ಡೇಟ್ಸ್ ಕೊಡ್ಬೋದು ಅನ್ನೋ ನಿರೀಕ್ಷೆಯಲ್ಲಿದ್ದಾರೆ ಡಿ-ಫ್ಯಾನ್ಸ್.