Big boss: ಕಳೆದ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಮಾತನಾಡಿದ್ದು, ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಗಿಲ್ಲಿ ಉತ್ತಮ ಸ್ಪರ್ಧಿ. ಯಾರೂ ಅವನಿಗೆ ಪ್ರತೀಸ್ಪರ್ಧಿಗಳಿಲ್ಲ. ಎಲ್ಲಿ ಮಾತನಾಡಿದ್ದಾರೋ, ಅಲ್ಲೇ ಕೌಂಟರ್ ನೀಡಬೇಕು. ಆ ಗುಣ ಗಿಲ್ಲಿಗಿದೆ. ಹಾಗಾಗಿ ಆತ ಇಷ್ಟದ ಸ್ಪರ್ಧಿ ಅಂತಾರೆ ಗೋಲ್ಡ್ ಸುರೇಶ್. ಆದರೆ ಉಳಿದವರೆಲ್ಲ ಸೇಫ್ ಆಗಿರುತ್ತಾರೆ. ಸ್ಪರ್ಧೆಗಿಂತ, ಸೇಫ್ ಆಗಿರೋದು ಮುಖ್ಯ. ನಮ್ಮ ಸೀಸನ್‌ನಲ್ಲಿ ಹಾಗಿರಲಿಲ್ಲ ಎಂದು ಹೇಳ್ತಾರೆ ಗೋಲ್ಡ್ ಸುರೇಶ್.
ಇನ್ನು ಮಂಜು ಮತ್ತು ರಜತ್ ಜತೆ ಗಿಲ್ಲಿ ಮಾತನಾಡಿರುವ ರೀತಿ ಬಗ್ಗೆ ಮಾತನಾಡಿರುವ ಗೋಲ್ಡ್ ಸುರೇಶ್, ಮಂಜು ಮತ್ತು ರಜತ್ ತೀರಾ ಪರ್ಸನಲ್ ಆಗಿ ಮಾತನಾಡಿದರು, ಅದಕ್ಕೇ ಗಿಲ್ಲಿ ಕೌಂಟರ್ ನೀಡಿದ್ದು ಸರಿಯಾಗಿತ್ತು ಎಂದಿದ್ದಾರೆ.
ಇನ್ನು ಗಿಲ್ಲಿ ಹಿರೋ, ಆದರೆ ಆಚೆ ಎಲ್ಲರಿಗೂ ಅಶ್ವಿನಿ ಅವರು ವಿಲನ್ ಆಗಿ ಕಾಣಿಸುತ್ತಿದ್ದಾರೆ. ಆದರೆ ಪರ್ಸನಲ್ ಆಗಿ ಅಶ್ವಿನಿಯವರು ನನಗೆ ಪರಿಚಯ. ಅವರು ಹಾಗಿಲ್ಲ. ಆದರೆ ಅಶ್ವಿನಿ ಬಿಗ್‌ಬಾಸ್‌ನಲ್ಲಿ ವಿಲನ್ ಆಗಿ ಕಾಣುತ್ತಿದ್ದಾರೆ. ಆದರೆ ಇ್ತತೀಚೆಗೆ ಗಿಲ್ಲಿ ಮತ್ತು ಅಶ್ವಿನಿ ಚೆನ್ನಾಗಿ ಆಡುತ್ತಿದ್ದಾರೆ. ಹಾಗೇ ಇದ್ದರೆ, ಅವರಿಬ್ಬರು ಫೈನಲ್ ಗೆ ಬರುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಗೋಲ್ಡ್ ಸುರೇಶ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

