ಪಾಟ್ನಾ: ಕಳೆದ 24 ಗಂಟೆಗಳಲ್ಲಿ ಬಕ್ಸರ್‌ನಲ್ಲಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಮೇಲೆ ಎರಡು ಬಾರಿ ದಾಳಿಗೆ ಯತ್ನಗಳು ನಡೆದಿವೆ ಎಂದು ಆರೋಪಿಸಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ಕಿಡಿಕಾರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನಿ ಚೌಬೆ ಅವರು “ಸೋಮವಾರ ಬಕ್ಸರ್‌ನಲ್ಲಿ ರೈತರ ಮೇಲಿನ ದೌರ್ಜನ್ಯದ ವಿರುದ್ಧ ಒಂದು ದಿನದ ಉಪವಾಸ ಹೋರಾಟ ಮಾಡಲಾಗಿದ್ದು, ನನ್ನ ಕಾರ್ಯಕ್ರಮದ ಸಮಯದಲ್ಲಿ ನನ್ನಿಂದ ಕೇವಲ 5-6 ಅಡಿ ದೂರದಲ್ಲಿ ಕೆಲವು ಕಿಡಿಗೇಡಿಗಳು ನನ್ನ ಮೇಲೆ ದೊಣ್ಣೆಗಳನ್ನು ಬೀಸಲು ಬಂದರು. ಆದರೆ ನನ್ನ ಅಂಗರಕ್ಷಕರು ಮತ್ತು ಪೊಲೀಸ್ ಸಿಬ್ಬಂದಿ ಮೂವರನ್ನು ಹಿಡಿದು ನನ್ನನ್ನು ಉಳಿಸಿದರು. ಕಿಡಿಗೇಡಿಗಳನ್ನು ಅವರು ಹಿಡಿಯದಿದ್ದರೆ ಏನಾಗುತ್ತಿತ್ತೋ ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.
ಅಧಿವೇಶನದ ಬಳಿಕ ನಾಲ್ಕು ಕಡೆ ರಥಯಾತ್ರೆ : ಸಿಎಂ ಬೊಮ್ಮಾಯಿ
ಮತ್ತೊಬ್ಬ ವ್ಯಕ್ತಿ ಕರ್ತವ್ಯದ ಸಾಲಿನಲ್ಲಿದ್ದ ಪೊಲೀಸ್ ಸಿಬ್ಬಂದಿಯ ಕಡೆ ದೇಶ ನಿರ್ಮಿತ ಪಿಸ್ತೂಲ್ ಬೀಸುತ್ತಾ ಓಡಿಹೋದನು. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು, ಅವರು ಏನನ್ನೂ ಮಾಡಲಿಲ್ಲ. ಈ ಬಗ್ಗೆ ಪೊಲೀಸ್ ಉಪ ನಿರೀಕ್ಷಕರು, ಉಪ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಪತ್ರ ಬರೆದು ಘಟನೆಯ ಬಗ್ಗೆ ತಿಳಿಸಿದ್ದೇನೆ” ಎಂದು ಹೇಳಿದರು. ಕೆಲವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ತನ್ನ ಮೇಲೆ ಹಲ್ಲೆ ನಡೆಸಿದ ಮೂವರನ್ನು ನಂತರ ಬಿಡುಗಡೆ ಮಾಡಲಾಯಿತು. ಪೊಲೀಸ್ ಠಾಣೆಗೆ ಕರೆತಂದಿದ್ದ ದುಷ್ಕರ್ಮಿಗಳನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ನಿತೀಶ್ ಕುಮಾರ್ ಅವರನ್ನು ಕೇಳಲು ಬಯಸುತ್ತೇನೆ. ಯಾರ ಒತ್ತಡದ ಮೇರೆಗೆ ದುಷ್ಕರ್ಮಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಳಬಯಸುತ್ತೇನೆ ಎಂದು ಸಚಿವರು ಹೇಳಿದರು.
ಪಾಕ್ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಿದ ಭದ್ರತಾ ಮಂಡಳಿ
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾದ ಮೋದಿ : ಕರ್ನಾಟಕ ಚುನಾವಣೆ ಕುರಿತು ಚರ್ಚೆ




