ಫೈ ಓವರ್ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ASI ನಾಭಿರಾಜ್ ಸಾ*ವು

Hubli News: ಹುಬ್ಬಳ್ಳಿ: ಫೈ ಓವರ್‌ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ನಾಭಿರಾಜ್ ದಯಣ್ಣವರ ( 59) ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವಸಾವನ್ನಪ್ಪಿದ್ದಾರೆ.

ನಾಭಿರಾಜ್ ಅವರು ಕಳೆದ ಮಂಗಳವಾರ ಸಾಯಂಕಾಲ ಕರ್ತವ್ಯಕ್ಕೆ ಬೈಕ್ ಮೇಲೆ ತೆರಳುತ್ತಿದ್ದರು. ಹಳೇ ಕೋರ್ಟ್ ಸರ್ಕಲ್ ಬಳಿಯಲ್ಲಿ ನಡೆಯುತ್ತಿದ್ದ ಫೈಓವ‌ರ್ ಕಾಮಗಾರಿಯ ಕಬ್ಬಿಣದ ರಾಡ್ ಅವರ ತಲೆಯ ಮೇಲೆ ಬಿದ್ದಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ತಲೆಗೆ ಬಲವಾದ ಏಟು ಬಿದ್ದ ಕಾರಣ ಕೋಮಾಗೆ ಜಾರಿದ್ದ ನಾಭಿರಾಜ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

About The Author