Kerala News: ಈ ವರ್ಷ ಆಹಾರ ಸೇವಿಸಲು ಹೋಗಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ. ಬಜ್ಜಿ ತಿನ್ನಲು ಹೋಗಿ ವ್ಯಕ್ತಿ ಸಾವು. ಬಟರ್ ಚಿಕನ್ ತಿಂದು ವ್ಯಕ್ತಿ ಸಾವು. ಹೀಗೆ ತಮ್ಮಿಷ್ಟದ ಆಹಾರ ಸೇವನೆಯೇ, ಅವರ ಜೀವ ತೆಗೆುವ ಹಾಗಾದ ಘಟನೆ ಹೆಚ್ಚಾಗಿದೆ. ಅದೇ ರೀತಿ ಇ್ಲಲೋರ್ವ ವ್ಯಕ್ತಿ ಇಡ್ಲಿ ತಿನ್ನಲು ಹೋಗಿ, ಸಾವನ್ನಪ್ಪಿದ್ದಾನೆ.
ಕೇರಳದ ಪಲಕ್ಕಡ್‌ನಲ್ಲಿ ಈ ಘಟನೆ ನಡೆದಿದ್ದು, ಓಣಮ್ ಹಬ್ಬದ ಅಂಗವಾಗಿ, ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಇಷ್ಟು ನಿಮಿಷದಲ್ಲಿ ಯಾರು ಇಡ್ಲಿ ಸೇವನೆ ಮಾಡುತ್ತಾರೋ, ಅವರಿಗೆ ಈ ಬಹುಮಾನ ನೀಡಲಾಗುತ್ತದೆ ಎಂದು ಸ್ಪರ್ಧೆ ಮಾಡಲಾಗಿತ್ತು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುರೇಶ್ (49) ಎಂಬ ವ್ಯಕ್ತಿ ಇಡ್ಲಿಯನ್ನು ಗಬಗಬನೆ ತಿಂದಿದ್ದಾರೆ. ಸಾಮಾನ್ಯವಾಗಿ ನಿಧಾನವಾಗಿ ಇಡ್ಲಿ ತಿನ್ನುವಾಗಲೇ, ನಾವು ಅದನ್ನು ಸರಿಯಾಗಿ ಅಗಿದು ತಿನ್ನಬೇಕು ಮತ್ತು ಅದರೊಂದಿಗೆ ನೀರು, ಹಾಲು ಅಥವಾ ಟೀ, ಕಾಫಿ ಸೇವನೆ ಮಾಡಲೇಬೇಕಾಗುತ್ತದೆ. ಏಕೆಂದರೆ, ಇಡ್ಲಿ ಅಷ್ಟು ಈಸಿಯಾಗಿ ನುಂಗಲಾಗುವುದಿಲ್ಲ.
ಆದರೆ ಸ್ಪರ್ಧೆಯಲ್ಲಿ ಗೆಲ್ಲಲೇಬೇಕು ಎಂಬ ಕಾರಣಕ್ಕೆ, ಸುರೇಶ್ ಇಡ್ಲಿಯನ್ನು ಗಬಗಬನೇ ತಿಂದಿದ್ದಾರೆ. ಇಡ್ಲಿ ತಿಂದಾಗ, ನುಂಗಲಾಗದೇ, ಉಸಿರುಗಟ್ಟಿದೆ. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದಾಗ, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಸುರೇಶ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಓಣಮ್ ಹಬ್ಬದ ಸಂಭ್ರಮದಲ್ಲಿ ಇರಬೇಕಾದ ಸುರೇಶ್ ಕುಟುಂಬಸ್ಥರು, ದುಃಖದಲ್ಲಿರಬೇಕಾದ ಪರಿಸ್ಥಿತಿ ಉದ್ಭವವಾಗಿದೆ.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪೊಲೀಸರು ಇದೊಂದು ಅಸಹಜ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.