Tuesday, April 15, 2025

Latest Posts

ಇಂದು ಪಾಕಿಸ್ಥಾನಕ್ಕೆ ಹಾಂಗ್ ಕಾಂಗ್ ಸವಾಲು 

- Advertisement -

ಶಾರ್ಜಾ:  ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯ ಕೊನೆಯ ಲೀಗ್ ಗುಂಪಿನಲ್ಲಿ ಪಾಕಿಸ್ಥಾನ ತಂಡ ಹಾಂಗ್ ಕಾಂಗ್ ತಂಡವನ್ನು ಇಂದು ಎದುರಿಸಲಿದೆ.

ಇಲ್ಲಿನ ಶಾರ್ಜಾ ಮೈದಾನದಲ್ಲಿ ನಡೆಯಲಿರುವ ಎ ಗುಂಪಿನ ಪಂದ್ಯದಲ್ಲಿ  ಪಾಕಿಸ್ಥಾನ ತಂಡ ಹಾಂಗ್ ಕಾಂಗ್ ತಂಡವನ್ನು ಎದುರಿಸಲಿದೆ.

ಪಾಕಿಸ್ಥಾನ ಮತ್ತು ಹಾಂಗ್ ಕಾಂಗ್ ತಂಡಗಳು ಭಾರತ ವಿರುದ್ಧ ಸೋತಿವೆ.  ಈ ಪಂದ್ಯವನ್ನು ಗೆಲ್ಲಲ್ಲೇ ಬೇಕಾದ ಒತ್ತಡವನ್ನು ಎರಡೂ ತಂಡಗಳು ಎದುರಿಸುತ್ತಿವೆ.  ಈ ಪಂದ್ಯದಲ್ಲಿ ಯಾರು ಸೋಲುತ್ತಾರೋ ಅವರು  ಟೂರ್ನಿಯಿಂದ ಹೊರ ಬೀಳಲಿದ್ದಾರೆ. ಈ ಪಂದ್ಯ ಉಭಯ ತಂಡಗಳಿಗೆ ಮಾಡು ಇಲ್ಲವೆ ಮಡಿ ಪಂದ್ಯ ಆಗಿದೆ.ಟೂರ್ನಿಯಲ್ಲಿ  ಒಟ್ಟು 13 ಪಂದ್ಯಗಳು ನಡೆಯಲಿವೆ.

ಗ್ರೂಪ್ ಹಂತದಲ್ಲಿ ಎಲ್ಲಾ ತಂಡಗಳು ಆಯಾ ಗುಂಪಿನ ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡುತ್ತವೆ.  ನಂತರ ಸೂಪರ್ 4 ಹಂತದಲ್ಲಿ ಎಲ್ಲಾ ತಂಡಗಳ ವಿರುದ್ಧ ಆಡಲಿವೆ.  ಸೆ.11ರಂದು ದುಬೈ ಮೈದಾನದಲ್ಲಿ ನಡೆಯವ ಫೈನಲ್‍ನಲ್ಲಿ ಅಂಕಪಟ್ಟಿಯಲ್ಲಿ ಸ್ಥಾನ ಪಡೆಯುವ ಅಗ್ರ ಎರಡು  ತಂಡಗಳು ಸೆಣಸಲಿವೆ.

ಪಾಕಿಸ್ಥಾನ ತನ್ನ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡಿದೆ. 147 ರನ್ ಗಳ ಸಾಧಾರಣ ಮೊತ್ತವನ್ನು ಗಳಿಸಿ ವಿರೋಚಿತ ಸೋಲು ಅನುಭವಿಸಿತು.

ಪಾಕ್ ತಂಡದ ನಾಯಕ ಬಾಬರ್ ಅಜಂ 15ರಿಂದ 20 ರನ್‍ಗಳ ಕೊರತೆ ಎದುರಿಸಿದೆವು ಎಂದು ಹೇಳಿದ್ದರು.

ಇನ್ನು ಹಾಂಗ್ ಕಾಂಗ್ ತಂಡವನ್ನು ಕಡೆಗಣಿಸುವಂತಿಲ್ಲ ಟೂರ್ನಿಯಲ್ಲಿ ಜೀವಂತವಾಗಿರಿಸಲು ಇಂದು ಗೆಲ್ಲಲ್ಲೇಬೇಕಿದೆ. ಪಾಕಿಸ್ಥಾನ ತಂಡ ಬ್ಯಾಟಿಂಗ್‍ನಲ್ಲಿ ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ.

ನಾಯಕ ಬಾಬರ್ ಅಜಂ, ಫಾಕರ್ ಜಮಾನ್ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ.  ಮಧ್ಯಮ ಕ್ರಮಾಂಕದಲ್ಲಿ ಇಫ್ತಿಖರ್ ಅಹಮದ್, ಖುಷ್‍ದಿಲ್ ಶಾ, ಮೊಹ್ಮದ ನವಾಜ್ ಜವಾಬ್ದಾರಿಯುವತವಾಗಿ ಬ್ಯಾಟಿಂಗ್ ಮಾಡಬೇಕಿದೆ.

ಬೌಲಿಂಗ್ ವಿಭಾಗದಲ್ಲಿ  ತಾರಾ ಬೌಲರ್‍ಗಳ ಅನುಪಸ್ಥಿತಿ ನಡುವೆಯೂ ಮೊಹ್ಮದ್ ನವಾಜ್ ಮತ್ತು ನಸೀಮ್ ಶಾ ಅದ್ಬುತ ಬೌಲಿಂಗ್ ಮಾಡಿ ಪಂದ್ಯವನ್ನು ಕೊನೆಯ ಓವರ್‍ವರೆಗೂ ಕೊಂಡೊಯ್ದಿದ್ದರು.

ಮೊನ್ನೆ ಭಾರತ ವಿರುದ್ಧ 40 ರನ್‍ಗಳ ಅಂತರದಿಂದ ಸೋತಿದ್ದರೂ ಒಳ್ಳೆಯ ಪೈಪೋಟಿ ನೀಡಿ ಎಲ್ಲರ ಗಮನ ಸೆಳೆದಿದೆ. ಬೌಲಿಂಗ್‍ನಲ್ಲಿ ಮಿಂಚಿಲ್ಲ. ಆದರೆ ಭಾರತ ನೀಡಿದ  193 ರನ್‍ಗಳಿಗೆ ಪ್ರತಿಯಾಗಿ 152 ರನ್ ಪೇರಿಸುವಲ್ಲಿ ಶಕ್ತವಾಯಿತು. ತಂಡದಲ್ಲಿ ಬಾಬರ್ ಹಾಯತ್ 41, ಕಿನ್‍ಚಿತ್ ಶಾ, ಜೀಶನ್ ಅಲಿರಂತಹ ತಾರಾ ಬ್ಯಾಟರ್‍ಗಳಿದ್ದಾರೆ. ಬೌಲಿಂಗ್‍ನಲ್ಲಿ ಸಾಕಷ್ಟು ಸುಧಾರಿಸಬೇಕಿದೆ. ಹಾಂಗ್ ಕಾಂಗ್ ಎದುರು ಪಾಕಿಸ್ಥಾನ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಸಂಭಾವ್ಯ ತಂಡಗಳು:

ಪಾಕಿಸ್ಥಾನ :  ಮೊಹ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಂ (ನಾಯಕ),ಫಾಕರ್ ಜಮಾನ್, ಇಫ್ತಿಖಾರ್ ಅಹಮದ್, ಖುಷ್‍ದಿಲ್ ಶಾ, ಶಾದಾಬ್ ಖಾನ್, ಆಸೀಫ್ ಅಲಿ, ಮೊಹ್ಮದ್ ನವಾಜ್, ಹ್ಯಾರಿಸ್ ರೌಫ್, ನಸೀಮ್ ಶಾ, ಶೆಹನವಾಜ್ ದಾಹಾನಿ. 

ಹಾಂಗ್‍ಕಾಂಗ್: ನಿಜಾಖಾತ್ ಖಾನ್ (ನಾಯಕ),ಯಾಸೀಮ್ ಮುರ್ತಾಜಾ, ಬಾಬರ್ ಹಾಯತ್, ಕಿನ್‍ಚಿತ್ ಶಾ, ಅಜೀಜ್ ಖಾನ್, ಜೀಶನ್ ಅಲಿ, ಸ್ಕಾಟ್ ಮೆಕ್‍ಕೆಚ್ನಿ(ವಿಕೆಟ್ ಕೀಪರ್), ಹಾರೂನ್ ಅರ್ಷದ್, ಎಸಾನ್ ಖಾನ್, ಆಯುಶ್ ಶುಕ್ಲಾ , ಮೊಹ್ಮದ್ ಘಜಾನ್ಖರ್.   

 

- Advertisement -

Latest Posts

Don't Miss