ಜಕಾರ್ತಾ : ಏಷ್ಯಾಕಪ್‍ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಸೂಪರ್ 4ನ ಕೊನೆಯ ಪಂದ್ಯದಲ್ಲಿಂದು ದ.ಕೊರಿಯಾ ವಿರುದ್ಧ ಆಡುತ್ತಿದ್ದು ಫೈನಲ್ ಕನಸು ಕಾಣುತ್ತಿದೆ.
ಮೊನ್ನೆ ಮಲೇಷ್ಯಾ ವಿರುದ್ಧ ಗೆಲ್ಲುವ ಪಂದ್ಯವನ್ನು ಭಾರತ ಕೊನೆಯ ಹಂತದಲ್ಲಿ ಬಿಟ್ಟುಕೊಟ್ಟು ಡ್ರಾ ಮಾಡಿಕೊಂಡಿತು. ಇದಕ್ಕೂ ಮುನ್ನ ಬಲಿಷ್ಠ ಜಪಾನ್ ವಿರುದ್ಧ 2-1 ಅಂತರದಿಂದ ಗೆದ್ದಿತ್ತು.
ಸೂಪರ್ 4 ಅಂಕಪಟ್ಟಿಯಲ್ಲಿ ದ.ಕೊರಿಯಾ +2(5-3) ಅಗ್ರಸ್ಥಾನದಲ್ಲಿದ್ದಾರೆ. ಭಾರತ +1(5-4) ಎರಡನೆ ಸ್ಥಾನದಲ್ಲಿದೆ.
ಒಂದು ವೇಳೆ ಇಂದಿನ ಪಂದ್ಯದಲ್ಲಿ ಭಾರತ ಮತ್ತು ದ.ಕೊರಿಯಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡು ಮತ್ತೊಂದು ಪಂದ್ಯದಲ್ಲಿ ಮಲೇಷ್ಯಾ ತಂಡ ಜಪಾನ್ ವಿರುದ್ಧ 2 ಗೋಲುಗಳ ಅಂತರದಿಂದ ಗೆದ್ದರೆ ಫೈನಲ್‍ಗೆ ಅರ್ಹತೆ ಪಡೆಯಲಿದೆ.
ಇಂದಿನ ಜಿದ್ದಜಿದ್ದಿನ ಪಂದ್ಯದಲ್ಲಿ ದ.ಕೊರಿಯಾ ವಿರುದ್ಧ ಭಾರತ ತಂಡ ಬದಲಾವಣೆ ಮತ್ತು ಸಂಯೋಜನೆಯನ್ನು ತಡೆಯಬೇಕು.
ಸೂಪರ್4 ಹಂತದಲ್ಲಿ ದ.ಕೊರಿಯಾ ಮಲೇಷ್ಯಾ ವಿರುದ್ಧ 2-2 ಡ್ರಾ, ಜಪಾನ್ ವಿರುದ್ಧ 3-1 ಅಂತರದಿಂದ ಗೆದ್ದು ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.
ಟೂರ್ನಿಯ ಆರಂಭದಲ್ಲಿ ವೈಫಲ್ಯ ಅನುಭವಿಸಿದ ನಂತರ ಟೂರ್ನಿಯಿಂದ ಹೊಬೀಳುವ ಭೀತಿಯಲ್ಲಿದ್ದಾಗ ಇಂಡೋನೇಷ್ಯಾ ವಿರುದ್ಧ 15-0 ಅಂತರದಿಂದ ಗೆದ್ದು ಅಚ್ಚರಿ ನೀಡಿತ್ತು. ನಂತರ ಜಪಾನ್ ವಿರುದ್ಧವೂ ಗೆದ್ದು ಬೀಗಿತ್ತು.
ಭಾರತ ತಂಡದ ಫಾರ್ವರ್ಡ್ ಆಟಗಾರರಾದ ಕನ್ನಡಿಗ ಸುನಿಲ್, ಪವನ್ ರಾಜಭರ ಹಾಗೂ ಉತ್ತಮ್ ಸಿಂಗ್ ಮಿಂಚು ಹರಿಸಿದ್ದಾರೆ.
ಮೊನ್ನೆ ಮಲೇಷ್ಯಾ ವಿರದ್ಧು ಮಿಡ್ ಫೀಲ್ಡರ್ ಭಿರೇಂದ್ರ ಲಾಕ್ರಾ ಸಾಕಷ್ಟು ಅನಗತ್ಯ ಪೆನಾಲ್ಟಿ ಕಾರ್ನರ್‍ಗಳನ್ನು ಬಿಟ್ಟುಕೊಟ್ಟರು. ಗೋಲ್‍ಕೀಪರ್ ಸೂರಜ್ ಕರ್ಕೆರಾ ಎದುರಾಳಿ ದಾಳಿಯನ್ನು ತಡೆದು ಗಮನ ಸೆಳೆದಿದ್ದಾರೆ.
ಕೊರಿಯಾ ಎದುರು ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವು ಕಾಣಬೇಕಿದೆ. ಮತ್ತೊಂದು ಪಂದ್ಯದಲ್ಲಿ ಜಪಾನ್ ಮಲೇಷ್ಯಾ ವಿರುದ್ಧ ಆಡಲಿದೆ.

