ಜಕರ್ತಾ: ಯುವ ಭಾರತ ಹಾಕಿನ ತಂಡ ಏಷ್ಯಾಕಪ್ ಟೂರ್ನಿಯ ಫೈನಲ್ ತಲುಪುವಲ್ಲಿ ವಿಫಲವಾಗಿದೆ. ಭಾರೀ ರೋಚಕತೆಯಿಂದ ಕೂಡಿದ್ದ ಫೈನಲ್ ನಲ್ಲಿ ದ,ಕೊರಿಯಾ ವಿರುದ್ಧ ಭಾರತ 4-4 ಗೋಲುಗಳಿಗೆ ತೃಪ್ತಿಪಟ್ಟಿತ್ತು.
ಜಪಾನ್ ವಿರುದ್ಧ 5-0 ಗೋಲುಗಳನ್ನು ದಾಖಲಿಸಿದ ಪರಿಣಾಮ ಭಾರತ ತಂಡ ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸಿತು.
ಭಾರತ ಪರ ನೀಲಂ ಸಂಜೀವ್ (9ನೇ ನಿಮಿಷ), ದಿಪ್ಸನ್ (21ನೇ ನಿಮಿಷ), ಕರ್ನಾಟಕ ಶೇಷೇಗೌಡ್(22ನೇ ನಿಮಿಷ), ಶಕ್ತಿವೇಲ್ (37ನೇ ನಿಮಿಷ), ಗೋಲು ಹೊಡೆದರು, ಕೊರಿಯಾ ಪರ ಜಾಂಗ್ (13ನೇನಿಮಿಷ), ಜಿವೂ (18), ಕಿಮ್ ಜುಂಗ್ (28) ಜುಂಗ್ ಮನ್ಜೆ (44ನೇ )ಗೋಲು ಗಳಿಸಿದರು.
ಅಗ್ರ ಮೂರು ತಂಡಗಳು ತಲಾ 5 ಅಂಕ ಪಡೆದಿವೆ. ಆದೆರ ಗೋಲುಗಳ ಆಧಾರದ ಮೇಲೆ ಸ್ಥಾನಗಳನ್ನು ನಿರ್ಧರಿಸಲಾಗಿದೆ.
ಮೊದಲ ಸ್ಥಾನ ಪಡೆದ ಕೊರಿಯಾ, ಎರಡನೆ ಸ್ಥಾನ ಪಡೆದ ಕೊರಿಯಾ ಫೈನಲ್ನ ಲ್ಲಿ ಮುಖಾಮುಖಿಯಾಗಲಿದೆ. ಭಾರತ 3ನೇ ಸ್ಥಾನಕ್ಕಾಗಿ ಜಪಾನ್ ವಿರುದ್ಧ ಹೋರಾಡಲಿದೆ.