political news:
ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣಾ ಸಮೀಪಿಸುತಿದ್ದು ಬೆಂಗಳೂರಿನ ಯಲಹಂಕಾ ಕ್ಷೇತ್ರದಲ್ಲಿಯೂ ಸಹ ಚುನಾವಣಾ ಕಾರ್ಯ ರಂಗೇರುತ್ತಾಇದೆ.ಎಲ್ಲಾ ಪಕ್ಷದ ಅಭ್ಯರ್ಥಿಗಳು ಹಾಗೂ ಚುನಾವಣಾ ಟಿಕೆಟ್ ಆಕಾಂಕ್ಷಿಗಳು ಹಗಲಿರುಳೆನ್ನದೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಜನತಾದಳ ಪಕ್ಷದಿಂದ ಟಿಕೆಟ್ ಪಡೆದುಕೊಂಡಿರುವ ಯಲಹಂಕಾ ಕ್ಷೇತ್ರದ ಅಭ್ಯರ್ಥಿ ಮುನೇಗೌಡರು ಸಹ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಶುರುಮಾಡಿದ್ದಾರೆ. ಅದರೆ ಪ್ರಚಾರದ ವೇಳೆ ಅವರಿಗೆ ಬೇರೆ ಪಕ್ಷದ ಅಭ್ಯರ್ಥಿಗಳಿಂದ ಸಮಸ್ಯೆಗಳು ಶುರುವಾಗಿದೆ ಎಂದು ಮಾಧ್ಯಮಗೋಷ್ಠಿ ಮಾಡಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಹಾಗಾದರೆ ಅವರರು ಎದುರಿಸುತ್ತಿರುವ ಸಮಸ್ಯೆಗಳಾದರೂ ಯಾವವು ,ಅವರಿಗೆ ಸಮಸ್ಯೆ ಮಾಡುತ್ತಿರುರಾದರೂ ಯಾರು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈಗಾಗಲೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಪಡೆದುಕೊಂಡ ಅಭ್ಯರ್ಥಿಗಳಾಗಿರುವ ಮುನೇಗೌಡರು ತಮ್ಮ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸುವ ದೃಷ್ಟಿಯಿಂದ ಯಲಹಂಕಾ ಕ್ಷೇತ್ರದಲ್ಲಿ ಹಗಲಿರುಳೆನ್ನದೆ ನಿರಂತರವಾಗಿ ಪ್ರಚಾರವನ್ನು ಮಾಡುತಿದ್ದಾರೆ. ಈಗಾಗಲೆ ಹಲವು ದಿನಗಳಿಂದ ಪ್ರಚಾರದಲ್ಲಿ ತೊಡಗಿರುವ ಮುನೇಗೌಡರು ತಮ್ಮ ಪರಿಶ್ರಮದಿಂದ ಈಗಾಗಲೆ ಸಾಕಷ್ಟು ಕಾರ್ಯಕರ್ತರನ್ನು ಗಳಿಸಿಕೊಂಡಿದ್ದಾರೆ. ಅವರು ತಮ್ಮ ಒಳ್ಳೆಯ ನಡುವಳಿಕೆಯಿಂದ ಬೇರೆ ಪಕ್ಷದ ಕಾರ್ಯಕರ್ತರನ್ನು ತಮ್ಮ ಪಕ್ಷದತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ದಿನದಿಂದ ದಿನಕ್ಕೆ ತಮ್ಮ ಪಕ್ಷಕ್ಕೆ ಸೇರಿಕೊಳ್ಳುವ ಜನರ ಸಂಖ್ಯೆ ಜಾಸ್ತಿಯಾಗುತ್ತಿದೆ. ಎಂದು ಅವರು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಾವು ಮೊದಲೇ ಹೇಳಿದಂತೆ ಪಕ್ಷದಲ್ಲಿ ಕಾರ್ಯಕರ್ತರ ಸಂಖ್ಯೆ ಜಾಸ್ತಿಯಾಗುತ್ತಿರುವುದನ್ನು ಸಹಿಸಿಕೊಳ್ಳದ ಬಿಜೆಪಿ ಪಕ್ಷದ ಯಲಹಂಕಾ ಕ್ಷೇತ್ರದ ಶಾಸಕರಾಗಿರುವ ಎಸ್ ಆರ್ ವಿಶ್ವನಾಥರವರು ಮತ್ತವರ ಕಾರ್ಯಕರ್ತರು ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಹೆದರಿಸುತ್ತಿದ್ದಾರೆ ಎಂದು ಜೆಡಿಎಸ್ ನ ಮುನೇ ಗೌಡರು ವಿಶ್ವನಾಥ ವಿರುದ್ದ ಆರೋಪ ಮಾಡಿದ್ದಾರೆ.
ಮಂಗಳವಾರ ರಾಜನಕುಂಟೆಯ ಸಿಲ್ವರ್ ಓಕ್ ರೆಸಾರ್ಟ ನಲ್ಲಿ ಜೆಡಿಎಸ್ ಅಭ್ಯರ್ಥಿಗಳಾದ ಮನೇಗೌಡುರು ಮತ್ತು ಜೆಡಿಎಸ್ ನ ಮುಖಂಡರಾದ ಎ ಪಿ ರಂಗನಾಥ ಅವರ ನೇತೃತ್ವದಲ್ಲಿ ಜೆಡಿಎಸ್ನ ಕಾನೂನು ಘಟಕ ವಿಭಾಗದಿಂದ ಯಲಹಂಕಾ ಕ್ಷೇತ್ರದ ಚುನಾವಣಾ ದೌರ್ಜನ್ಯದ ವಿರುದ್ದ ಮಾಧ್ಯಮಗೋಷ್ಠಿಯನ್ನು ಹಮ್ಮಿಕೊಂಡಿದ್ದು ಇಲ್ಲಿ ಬಿಜೆಪಿ ಪಕ್ಷದವರು ಚುನಾವಣೆಗೆ ಮತ್ತು ಬೇರೆ ಪಕ್ಷದ ಕಾರ್ಯಕರ್ತರಿಗೆ ಯಾವ ರೀತಿ ತೊಂದರೆ ಕೊಡುತಿದ್ದಾರೆ ಹಾಗೂ ಮತದಾರರಿಗೆ ಹೆಗೆಲ್ಲ ಬೆದರಿಕೆ ಹಾಕುತ್ತಿದ್ದಾರೆ ಎಂಬುದರ ಬಗ್ಗೆ ವಿವರಿಸಿದ್ದಾರೆ.
ಇನ್ನು ಯಲಹಂಕ ಕ್ಷೇತ್ರದ ಶಾಸಕರಾಗಿರುವ ಎಸ್ ಆರ್ ವಿಶ್ವನಾಥ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಪೋಲಿಸ್ ಇಲಾಖೆ, ಕಂದಾಯ ಇಲಾಖೆ, ಪಿಡಿಓಗಳನ್ನು ಮತ್ತು ಸರ್ಕಾರದ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಜೆಡಿಎಸ್ ಪಕ್ಷದ ಮುಖಂಡರ ಮೇಲೆ ದೌರ್ಜನ್ಯ ಹಲ್ಲೆ ಮಾಡುತ್ತಿದ್ದಾರೆ. ಹಾಗೂ ಬಿಡಿಎ ಅಧ್ಯಕ್ಷರಾಗಿ ಏನೆಲ್ಲ ಅವ್ಯವಹಾರ ಮಾಡಿದ್ದಾರೆ ಎಲ್ಲವೂ ಗೊತ್ತಿದೆ. ನಮ್ಮ ಪಕ್ಷಕ್ಕೆ ಬೆಂಬಲ ನೀಡುವವರ ಮೇಲೆ ಬೇದರಿಕೆ ಹಾಕುವುದು , ಹಾಗೂ ನಾನು ಹಿಂದೆ ಮಚ್ಚು ಹಿಡಿದಿದ್ದೆ ಎನ್ನುವುದು ಇವೆಲ್ಲ ಒಬ್ಬ ಶಾಸಕ ಹೇಳುವುದು ಸರಿಯಲ್ಲ.ಹಾಗೂ ಶಿವರಮ್ ಕಾರಂತ ಬಡಾವಣೆಯಲ್ಲಿ ಲಕ್ಷಾಂತರ ಬಡ ರೈತರಿಗೆ ಶಾಸಕರಾದ ಎಸ್ ಆರ್ ವಿಶ್ವನಾಥ ಅವರಿಂದ ಅನ್ಯಾಯವಾಗಿದೆ. ಬಿಜೆಪಿಯವರು ದೇವೇಗೌಡರು ಮುಸ್ಲಿಂ ಸಮುದಾಯದವರಿಗೆ ನೀಡಿದಂತಹ ಮೀಸಲಾತಿಯನ್ನು ಹಿಂಪಡೆದುಕೊಂಡಿದ್ದಾರೆ ಎಂದು ಎ .ಪಿ ರಂಗನಾಥ ಅವರು ಎಸ್ ಆರ್ ವಿಶ್ವನಾಥ ವಿರುದ್ದ ಆರೋಪ ಮಾಡಿದರು.
ಇನ್ನು ಇದೇ ವೇಳೆ ಮಾತನಾಡಿದ ಯಲಹಂಕ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳಾದ ಮುನೆಗೌಡರು ಮಾತನಾಡಿ ಜೆಡಿಎಸ್ ಯಲಹಂಕದಲ್ಲಿ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರನ್ನು ಎಸ್ ಅರ್ ವಿಶ್ವನಾಥ ಅವರು ಮನೆಗೆ ಕರೆಸಿ ಬೆದರಿಕೆ ಹಾಕುವುದು ಹಾಗೂ ಪಕ್ಷದ ಮುಖಂಡರ ಹೆಸರಿನಲ್ಲಿ ಪೋಲಿಸ್ ಠಾಣೆಯಲ್ಲಿ ರೌಡಿ ಶೀಟರ್ ಎಂದು ದೂರು ದಾಖಲಿಸಿದ್ದಾರೆ. ರೌಡಿಶೀಟರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾರ್ಯಕರ್ತರ ಮನೆಗಳಿಗೆ ತೆರಳಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಹಾಗೂ ಸರ್ಕಾರದ ಆಸ್ತಿಯನ್ನುಅಕ್ರಮವಾಗಿ ಕಬಳಿಕೆ ಮಾಡಿಕೊಂಡಿದ್ದಾರೆ. ಬಡವರಿಗೆ ನೀಡಲು ಮೀಸಲಿಟ್ಟಿರುವ ನಿವೇಶನಗಳನ್ನು ವಿಶ್ವನಾಥ ಅವರು ತಮ್ಮ ಪಕ್ಷದ ಮುಖಂಡರಿಗೆ ನೀಡಿರುತ್ತಾರೆ, ಗೋಮಾಳದ ಜಾಗವನ್ನ ಶಾಸಕರು ತಮ್ಮ ಪತ್ನಿಯ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಇವೆಲ್ಲ ಅಕ್ರಮ ದಬ್ಬಾಳಿಕೆ ದೌರ್ಜನ್ಯದ ವಿರುದ್ದ ಕಾನೂನು ಪ್ರಕಾರ ಹೋರಾಟ ಮಾಡುತ್ತೇನೆ . ನೀವು ನಿಮ್ಮ ಕೆಲಸ ಮಾಡಿ ಒಳ್ಳೆಯ ರೀತಿ ಪ್ರಚಾರ ಮಾಡಿ ಅದೇ ರೀತಿ ನಾವು ಸಹ ನಮ್ಮ ಪಕ್ಷದ ಪರ ಪ್ರಚಾರ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು . ಇನ್ನು ಈ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷರಾದ ಕೃಷ್ಣಪ್ಪ, ಬಾರ್ ಕೌನ್ಸಿಲ್ ನ ಉಪಾಧ್ಯಕ್ಷರಾದ ಶಿವಕುಮಾರ್ ಅವರು , ಜೆಡಿಎಸ್ ನ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹಿರಿಯ ವಕೀಲರು ಹೇಮಂತರಾಜ, ಯಲಹಂಕ ಕ್ಷೇತ್ರದ ಜೆಡಿಎಸ್ ಉಸ್ತುವಾರಿಯಾದ ರವಿ ಹಾಗೂ ಪಕ್ಷದ ಮುಖಂಡರು ಹಾಜರಾಗಿದ್ದರು.
ಇನ್ನು ಇಷ್ಟೆಲ್ಲ ಆರೋಪಗಳನ್ನುಒಳಗೊಂಡಿರುವ ಶಾಸಕರ ವಿರುದ್ದ ಆರೋಪ ಮಾಡಿತ್ತಿರುವ ಜೆಡಿಎಸ್ ಪಕ್ಷದ ಮಾತನ್ನು ಜನ ನಂಬುತ್ತಾರಾ. ನಂಬಿ ಜೆಡಿಎಸ್ ಪರ ಯಲಹಂಕ ಕ್ಷೇತ್ರದ ಜನ ನಿಲ್ಲತ್ತಾರಾ , ಮತ ನೀಡುತ್ತಾರಾ ಅಥವಾ ಇಷ್ಟು ದಿನದ ಸುದೀರ್ಘ ಆಡಳಿತ ನಡೆಸಿರುವ ಬಿಜೆಪಿ ಪಕ್ಷದ ಯಲಹಂಕಾ ಕ್ಷೇತ್ರದ ಶಾಸಕರ ಕೆಲಸವನ್ನು ಮೆಚ್ಚಿ ಮತ್ತೊಮ್ಮೆ ಮತ ಹಾಕಿ ಬಿಜೆಪಿ ಪಕ್ಷಕ್ಕೆ ಅಧಿಕಾರ ಮಾಡಲು ಅವಕಾಶ ನೀಡುತ್ತಾರಾ ಎನ್ನುವುದನ್ನು ಕಾದು ನೊಡಬೇಕಿದೆ.
ದೇವಸ್ಥಾನದಲ್ಲಿ ಮೆಟ್ಟಿಲು ಮುರಿದು 30ಕ್ಕೂ ಹೆಚ್ಚು ಜನ ಬಾವಿಗೆ.. 4 ಜನರ ಸಾವು