Friday, July 4, 2025

Latest Posts

ದೇವಸ್ಥಾನದಲ್ಲಿ ಮೆಟ್ಟಿಲು ಮುರಿದು 30ಕ್ಕೂ ಹೆಚ್ಚು ಜನ ಬಾವಿಗೆ.. 4 ಜನರ ಸಾವು

- Advertisement -

ರಾಮನವಮಿ ಪ್ರಯುಕ್ತ ಇಂದೋರ್‌ನ ದೇವಸ್ಥಾನವೊಂದರಲ್ಲಿ ನೂಕುನುಗ್ಗಲಾಗಿ, 30ಕ್ಕೂ ಹೆಚ್ಚು ಜನ ಬಾವಿಗೆ ಬಿದ್ದ ಘಟನೆ ನಡೆದಿದೆ. ಇಂದೋರ್‌ನ ಬೇಲೆಶ್ವರ ಮಹಾದೇವ ದೇವಸ್ಥಾನಕ್ಕೆ ಭಕ್ತಾದಿಗಳು ಬಂದಿದ್ದು, ಇಲ್ಲಿನ ಮೆಟ್ಟಿಲ ಮೇಲೆ ಭಕ್ತಾದಿಗಳು ಭಾರ ಹಾಕಿದ್ದಾರೆ. ಆ ಭಾರ ತಾಳಲಾರದೇ, ಮೆಟ್ಟಿಲು ಕುಸಿದಿದ್ದು, ಜನ ಬಾವಿಗೆ ಬಿದ್ದಿದ್ದಾರೆ. ನಾಲ್ವರು ಸಾವನ್ನಪ್ಪಿದ್ದಾರೆ.

ಜನರನ್ನು  ರಕ್ಷಿಸಿ, ಚಿಕಿತ್ಸೆಗೆ ಕರೆದೊಯ್ಯಲು 12 ಆ್ಯಂಬುಲೆನ್ಸ್ ಬಂದಿದ್ದು, ಇಬ್ಬರು ಮಕ್ಕಳು ಸೇರಿ 9 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರು ಮತ್ತು ರಕ್ಷಣಾ ಪಡೆ ಉಳಿದವರನ್ನು ಬದುಕಿಸುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ಮಾತನಾಡಿದ ಮಧ್ಯಪ್ರದೇಶ ಸಿಎಂ, ಶಿವರಾಜ್ ಸಿಂಗ್ ಚೌಹಾಣ್, 10 ಜನರನ್ನ ಈಗಾಗಲೇ ರಕ್ಷಿಸಲಾಗಿದ್ದು, ಉಳಿದವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

ಪ್ರಧಾನಿ ಮೋದಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಇಂದೋರ್‌ನ ಈ ಘಟನೆಯಿಂದ ತೀವ್ರ ಬೇಸರವಾಗಿದೆ. ಸಿಎಂ ಶಿವರಾಜ್‌ ಸಿಂಗ್‌ರೊಡನೆ ಈ ಬಗ್ಗೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ರಾಜ್ಯ ಸರ್ಕಾರವು ತ್ವರಿತ ಗತಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಎಲ್ಲಾ ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಕುರ್ಚಿಯ ವಿಷಯಕ್ಕೆ ತನ್ನ ಸಹೋದ್ಯೋಗಿಯನ್ನ ಗುಂಡಿಕ್ಕಿ ಕೊಂದ ವ್ಯಕ್ತಿ..

ಎರಡು ಯುವಕರ ಗುಂಪಿನ ನಡುವೆ ಕೋಮು ಘರ್ಷಣೆ.. ಪೊಲೀಸರ ಜೀಪಿಗೆ ಬೆಂಕಿ..

ಕಿಂಗ್ ಚಾರ್ಲ್ಸ್ಗೆ ಬರ್ಗರ್ ಕಿಂಗ್ ಕಿರೀಟ್ ಕೊಡಲು ಮುಂದಾದ ಫ್ಯಾನ್.. ಆಮೇಲೇನಾಯ್ತು..?

- Advertisement -

Latest Posts

Don't Miss