Friday, December 27, 2024

Latest Posts

ಮೂರು ಮಂದಿ ಸೇರಿ ಮೂರಾಬಟ್ಟಿ ಮಾಡಿದ ನೂತನ ರಸ್ತೆ; ರವಿ ಪಾಟೀಲ..!

- Advertisement -

www.karnatakatv.net : ಬೈಲಹೊಂಗಲ: ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರೈತರಿಗೆ ಜಮೀನುಗಳಿಗೆ ಹೋಗಲು ಇತ್ತಿಚೆಗೆ ನಿರ್ಮಾಣವಾಗಿ ನಾಲ್ಕು ತಿಂಗಳ ಹಿಂದೆ ಲೋಕಾರ್ಪಣೆಗೊಂಡಿತ್ತು ಆದರೆ ಈ ರಸ್ತೆ ನಾಲ್ಕು ತಿಂಗಳಲ್ಲೆ ಕಿತ್ತು ಹೋಗಿರುವದನ್ನ ಖಂಡಿಸಿ ನೇಗಿಲಯೋಗಿ ರಾಜ್ಯ ರೈತ ಸಂಘಟನೆ ರೈತರು ಅಧಿಕಾರಿಗಳ ವಿರುದ್ದ ಅಕ್ರೋಶ ಗೊಂಡಿದ್ದಾರೆ.

ಹೌದು ಬೈಲಹೊಂಗಲ ತಾಲೂಕಿನ ಕಲ್ಲೂರು ಮತ್ತು ಹೊಳಿ ಹೊಸುರ ಸಂಪರ್ಕಿಸುವ ರಸ್ತೆ ಮಾರ್ಗ ಇತ್ತಿಚೆಗೆ 80 ಲಕ್ಷ ರೂಗಳ ಅನುದಾನದಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿ ರೈತರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದಾರೆ.ಮತ್ತು  ಹೊಸದಾಗಿ ಬಂದಿರುವ ಗುತ್ತಿಗೆದಾರರಿಗೆ ಕೆಲಸ ಕೊಟ್ಟಿದ್ದಾರೆ ಇದರಿಂದ ಈ ರಸ್ತೆ ಮಾರ್ಗವನ್ನು ಮೂರು ಜನರು ಕೂಡಿ ಮೂರಾಬಟ್ಟೆ ಮಾಡಿದ್ದಾರೆ ಇದರಿಂದ ಈ ರಸ್ತೆ ಮಾರ್ಗ ಸಂಪೂರ್ಣ ಕಳಪೆ ಮಟ್ಟದ್ದಾಗಿದೆ ಎಂದು ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡ ರೈತರು.

ಮತ್ತೆ ಪುನಃ ರಸ್ತೆ ಮಾರ್ಗ ಸರಿ ಪಡಿಸಬೇಕು ಎಂದು ಅಕ್ಕಪಕ್ಕದ ಜಮೀನಿನ ರೈತರು ಮತ್ತು ನೇಗಿಲಯೋಗಿ ರಾಜ್ಯ ರೈತ ಸಂಘಟನೆ ರಾಜ್ಯಾಧ್ಯಕ್ಷ ರವಿ ಪಾಟೀಲ ಅವರ ನೇತೃತ್ವದಲ್ಲಿ ಆಗ್ರಹಿಸಿದರು.

ಇವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 80 ಲಕ್ಷ ರೂಪಾಯಿಗಳ ಅನುದಾನದಲ್ಲಿ ಹೊಳಿಹೊಸುರ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು ಇದನ್ನ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ ಇದರಿಂದ ಪುನಃ ರಸ್ತೆ ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಅಕ್ಕಪಕ್ಕದ ರೈತರ ಜೊತೆ ಸೇರಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಇಂಜಿನಿಯರ್ ಅವರು ಮಾತು ಕೊಟ್ಟಂತೆ ರೈತರಿಗೆ ಅನುಕೂಲಕರವಾದ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಇವರು ಮಾತನಾಡಿ ಬಾರಿ ಗಾತ್ರದ ವಾಹನಗಳು ಓಡಾಡಿದ್ದರಿಂದ ರಸ್ತೆ ಹದಿಗೆಟ್ಟು ಹೋಗಿದೆ ಇದರಿಂದ ಗುತ್ತೊಗೆದಾರರ ಜೊತೆ ಮಾತನಾಡಿ ಅವರಿಗೆ ಸಮ್ಮುಖದಲ್ಲಿ ಕೆಟ್ಟು ಹೋಗಿರುವ ರಸ್ತೆಯನ್ನ ಸರಿಪಡಿಸುವ ಕೆಲಸ ಮಾಡಿಸುತ್ತೇವೆ .ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಾವು ರಸ್ತೆ ಸರಿಪಡಿಸುವ ಕೆಲಸ ಮಾಡುತ್ತೇವೆ‌‌. ನಾನು ಬಂದಾಗಿದ್ದ 80 ಲಕ್ಷ ಅನುದಾನ ಬಂದಿದೆ ಇದರಿಂದ ರೈತರ ಒತ್ತಾಯದ ಮೇರೆಗೆ ಮಳೆ ನಿಂತ ಮೇಲೆ ಮತ್ತೆ ರಸ್ತೆ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಸಂಘಟನೆ ಕಾರ್ಯದರ್ಶಿ ಭೀರಪ್ಪ ದೇಶನೂರ,ಕಲ್ಲಪ್ಪ ಹರಿಯಾಲ ರೈತ ಮುಖಂಡರು ನೇಗಿಲಯೋಗಿ,ದೇಶಾಯಿ ಕರವಿನಕೊಪ್ಪ,ವೀರಭದ್ರಪ್ಪ ನಾಯ್ಕರ,ಅದೃಶ್ಯ ಸತ್ತೆನ್ನವರ,ಬಸಲಿಂಗ ಹುಲಿಕಟ್ಟಿ,ಮಡಿವಾಳ ಸುತಗಟ್ಟಿ,ಬಸವರಾಜ್ ಸುತಗಟ್ಟಿ,ನಾಗಪ್ಪ ಶಿಂಧೆ ರೈತ ನಾಯಕರು, ಸೇರಿದಂತೆ ಇನ್ನು ಹಲವಾರು ಅಕ್ಕಪಕ್ಕದ ಜಮೀನಿನ ರೈತರು ಉಪಸ್ಥಿತರಿದ್ದರು.

ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ

- Advertisement -

Latest Posts

Don't Miss