Web News: ಜೀವನದಲ್ಲಿ ದುಡ್ಡು ಸಂಪಾದಿಸಬೇಕು. ಶ್ರೀಮಂತರಾಗಬೇಕು ಅಂತಾ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಎಲ್ಲರೂ ಹಗಲು ರಾತ್ರಿ ದುಡಿದು ಪೈಪೋಟಿ ಮಾಡುತ್ತಿರುವುದೇ ಶ್ರೀಮಂತರಾಗಲು. ಆದರೆ ನೀವು ಸಮಯ ಮೀರಿ ಶ್ರೀಮಂತಿಕೆಯ ಬಗ್ಗೆ ಯೋಚಿಸಿದರೆ, ಪ್ರಯೋಜನವಿಲ್ಲ. ಹಾಗಾಗಿ ನಾವಿಂದು ಹೂಡಿಕೆ ಮಾಡಲು ಯಾವ ವಯಸ್ಸಿನಿಂದ ಶುರು ಮಾಡಬೇಕು ಅಂತಾ ಹೇಳಲಿದ್ದೇವೆ.
ನೀವು ನಿವತ್ತರಾಗುವ ವೇಳೆಗೆ ಶ್ರೀಮಂತರಾಗಬೇಕು. ಕೋಟ್ಯಾಧೀಪತಿಗಳಾಗಬೇಕು ಅಂದ್ರೆ, ನಿಮಗೆ ಕೆಲಸ ಸಿಕ್ಕ ತಕ್ಷಣ ಅಂದ್ರೆ 25ನೇ ವಯಸ್ಸಿಗೆ ನೀವು ಹೂಡಿಕೆ ಮಾಡಲು ಶುರು ಮಾಡಬೇಕು. ನಾವು ಎಷ್ಟು ತಡ ಮಾಡುತ್ತೇವೋ, ಅಷ್ಟು ಕಡಿಮೆ ಲಾಭ ಪಡೆಯುತ್ತೇನೆ.
ಆದರೆ ನೀವು ನಾನು ಲೇಟ್ ಆದರೂ ಹೆಚ್ಚು ಇನ್ವೆಸ್ಟ್ ಮಾಡಿ ಲಾಭ ಪಡೆಯುತ್ತೇನೆ ಎನ್ನಬಹುದು. ಆದರೆ ಹೂಡಿಕೆಯಲ್ಲಿ ನೀವು ಎಷ್ಟು ಇನ್ವೆಸ್ಟ್ ಮಾಡಿದ್ದೀರಿ ಎನ್ನುವುದಕ್ಕಿಂತ, ಎಷ್ಟು ಬೇಗ ಹೂಡಿಕೆ ಮಾಡಿದ್ದೀರಿ ಅನ್ನೋದು ಮುಖ್ಯವಾಗುತ್ತದೆ.
ಏಕೆಂದರೆ ಹೂಡಿಕೆಯಲ್ಲಿ ಕಾಂಪೌಂಡಿಂಗ್ ಕೆಲಸ ಮಾಡುತ್ತದೆ. ಅದರಿಂದ ನಿಮಗೆ ಹೆಚ್ಚು ಲಾಭ ಬರಬೇಕು ಎಂದಲ್ಲಿ, ನೀವು ಬಹುಬೇಗ ಹೂಡಿಕೆ ಮಾಡಲು ಶುರು ಮಾಡಬೇಕು. ಹಾಗಾಗಿ 20ರಿಂದ 30 ವರ್ಷ ವಯಸ್ಸು ಮೀರುವ ಮುನ್ನವೇ ಹೂಡಿಕೆ ಮಾಡುವುದು ಉತ್ತಮ.




