Monday, October 20, 2025

Latest Posts

ದಲಿತ ಸಮುದಾಯದಿಂದಲೇ ದಲಿತರ ಮೇಲೆ ದೌರ್ಜನ್ಯ – 7 ದಲಿತ ಕುಟುಂಬಗಳಿಗೆ ಬಹಿಷ್ಕಾರ!

- Advertisement -

ಇದೆಂತ ದುರ್ವಿಧಿ… ದಲಿತ ಸಮುದಾಯದಿಂದಲೇ ದಲಿತರ ಮೇಲೆ ದೌರ್ಜನ್ಯ ಎಸಗಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ದಲಿತ ಸಮುದಾಯದೊಳಗೇ ಸಮಾಜದ ಯಜಮಾನರು ಎಂದು ಗುರುತಿಸಿಕೊಂಡವರು 7 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.

ಕೇವಲ ಕೂಲಿ ಸಂಬಳ ಅಥವಾ ವರಿಯ ಬಗ್ಗೆ ಪ್ರಶ್ನೆ ಎತ್ತಿದ ಕಾರಣ, ಹಾಗೂ ಸಮುದಾಯದ ಅಕ್ರಮ ಪ್ರಕ್ರಿಯೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ, ಈ ಕುಟುಂಬಗಳಿಗೆ ಸಮುದಾಯದ ಕುಲದ ಪಂಚಾಯಿತಿಯಿಂದ ಬಹಿಷ್ಕಾರ ಮತ್ತು ದಂಡದ ಶಿಕ್ಷೆ ವಿಧಿಸಲಾಗಿದೆ.

ಪಂಚಾಯಿತಿಯಲ್ಲಿ ತೀರ್ಮಾನಿಸಿರುವಂತೆ ಈ 7 ಕುಟುಂಬದವರೊಂದಿಗೆ ಗ್ರಾಮದ ಉಳಿದವರು ಮಾತನಾಡಬಾರದು.ಇವರನ್ನು ಯಾವುದೇ ಸಮುದಾಯದ ಕಾರ್ಯಕ್ರಮಗಳಿಗೆ ಆಹ್ವಾನಿಸಬಾರದು. ಬಹಿಷ್ಕಾರ ಮಾಡಿರೋ ಆ ಕುಟುಂಬಗಳ ಬಳಿ ಯಾವುದೇ ವ್ಯವಹಾರ ಮಾಡದಂತೆಯೂ ಸೂಚನೆ ನೀಡಲಾಗಿದೆ.

ಇವರೊಂದಿಗೆ ಯಾವುದೇ ವ್ಯಾಪಾರ, ವಾಣಿಜ್ಯ ಅಥವಾ ಸಾಮಾಜಿಕ ಸಂಬಂಧ ಇಟ್ಟರೆ, ಅವರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಜಿಲ್ಲಾಡಳಿತವನ್ನು ಸಂಪರ್ಕಿಸಿ, ನ್ಯಾಯ ನೀಡುವಂತೆ ಮತ್ತು ತಾವು ಎದುರಿಸುತ್ತಿರುವ ಮಾನಸಿಕ ಹಾಗೂ ಸಾಮಾಜಿಕ ಅಣತೆಯನ್ನು ತಡೆಗಟ್ಟುವಂತೆ ಮನವಿ ಸಲ್ಲಿಸಿವೆ.

ಸಮುದಾಯದೊಳಗಿನ ಈ ಬಗೆಯ ಒಳಜಾತಿ ಅಂತರ ಹಾಗೂ ಮಾನವೀಯತೆಯನ್ನು ಮೀರುವ ದೌರ್ಜನ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ವಿವಿಧ ಹಂತಗಳಿಂದ ಕೇಳಿ ಬರುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss