ಅಭಿಮಾನಿಯ ಸೋಗಿನಲ್ಲಿ ಬಂದು ರೋಹಿತ್ ಶರ್ಮಾ ಕೈಯಲ್ಲಿದ್ದ 3 ಕೋಟಿ ವಾಚ್ ಕದಿಯಲು ಪ್ರಯತ್ನ

Sports News: ಸೆಲೆಬ್ರಿಟಿಗಳು ಬಂದಾಗ ಅಭಿಮಾನಿಗಳು ಬಂದು, ಸೆಲ್ಫಿಗಾಗಿ ಮುಗಿ ಬೀಳೋದು ಕಾಮನ್. ಹಲವು ಬಾರಿ ಸೆಲೆಬ್ರಿಟಿಗಳು ಅಭಿಮಾನಿಗಳ ಕಾಟಕ್ಕೆ, ಅವರನ್ನ ನೂಕಿದ್ದು, ಹೊಡೆದಿದ್ದು, ಹಲ್ಲೆ ಮಾಡಿದ್ದು, ಮೊಬೈಲ್ ಕಸಿದಿದ್ದು, ಇತ್ಯಾದಿ ಘಟನೆಗಳು ನಡೆದಿದೆ.

ಆದರೆ ಕೆಲವರು ಅಭಿಮಾನಿಗಳ ಜೊತೆ ಸೆಲ್ಫಿಗೆ ತಾಳ್ಮೆಯಿಂದ ಪೋಸ್ ನೀಡುತ್ತಾರೆ. ಕೈ ಕುಲುಕುತ್ತಾರೆ. ಆದರೆ ಅದೇ ತಾಳ್ಮೆಯನ್ನು ಕೆಣಕಲು ಬಂದಾಗ, ಸರಿಯಾಗಿ ಪ್ರತಿಕ್ರಿಯೆಯೂ ನೀಡುತ್ತಾರೆ. ಅದೇ ರೀತಿ ರೋಹಿತ್ ಶರ್ಮಾ ಕಾರ್‌ನಲ್ಲಿ ಕುಳಿತು, ಅಭಿಮಾನಿಗಳ ಬಳಿ ಕೈ ಬೀಸುತ್ತಿದ್ದಾಗ, ಸಡನ್ ಆಗಿ ಅಭಿಮಾನಿಯ ಸೋಗಿನಲ್ಲಿ ಬಂದ ಕೆಲ ಹುಡುಗರು, ಅವರ ಕೈಯಲ್ಲಿದ್ದ 3 ಕೋಟಿಗೂ ಹೆಚ್ಚು ಬೆಲೆ ಬಾಳುವ ವಾಚ್ ಕದಿಯಲು ಪ್ರಯತ್ನಿಸಿದ್ದಾರೆ.

ರೋಹಿತ್ ಶರ್ಮಾ ಅವರಿಗೆ ಎಚ್ಚರಿಕೆ ನೀಡಿ, ಕಾರ್ ಡೋರ್ ಕ್ಲೋಸ್ ಮಾಡಿದ್ದಾರೆ. ಅವರ ವಾಚ್ 3 ಕೋಟಿ 25 ಲಕ್ಷ ರೂಪಾಯಿ ಬೆಲೆ ಬಾಳುವಂತಾಗಿದ್ದು, ರೋಲೆಕ್ಸ್ ಜಿರಾಫ್ ಬ್ರ್ಯಾಂಡ್‌ನದ್ದಾಗಿದೆ.

About The Author