ಬೆಂಗಳೂರು: ನಗರದ ವಿವಿಧ 6 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಇದು ಶಾಂತಿ ಕದಡುವ ಹುನ್ನಾರವಾಗಿದೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದುಗೃಹ ಕಚೇರಿ ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವೆಲ್ಲಾ ಶಾಂತಿ ಕದಡುವ ಹುನ್ನಾರವೇ ಆಗಿದ್ದಾವೆ. ಈ ಮೂಲಕ ಪ್ರಗತಿ ಹೊಂದಿದ ರಾಜ್ಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳೋದಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಬೆದರಿಕೆ ಇ-ಮೇಲ್ ಕಳುಹಿಸಿದವರನ್ನು ಪತ್ತೆ ಹಚ್ಚಿ, ಬಂಧಿಸುವಂತೆಯೂ ಸೂಚಿಸಲಾಗಿದೆ ಎಂದರು.
ಬಾಂಬ್ ಬೆದರಿಕೆ ಕರೆ ಬಗ್ಗೆ ಪೊಲೀಸರು ಎಲ್ಲಾ ರೀತಿಯ ತನಿಖೆಯನ್ನು ನಡೆಸುತ್ತಿದ್ದಾರೆ. ಎಲ್ಲಿಂದ ಕರೆ ಬಂದಿದ್ದೆ ಅನ್ನೋದ್ರ ಬಗ್ಗೆ ತೆನಿಖೆಯಾಗುತ್ತಿದೆ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಕೆಟ್ಟ ಹೆಸರು ತರಬೇಕು ಎಂದು ಹೇಳಿ ಈ ರೀತಿ ಮಾಡ್ತಿದ್ದಾರೆ. ಪೊಲೀಸ್ ಗಂಭೀರವಾಗಿ ತಗೆದುಕೊಂಡು ತಪಾಸಣೆ ಮಾಡ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.




