Friday, April 19, 2024

Latest Posts

ಯೂರೋಪ್‌ನ 28ಕ್ಕೂ ಹೆಚ್ಚು ದೇಶಗಳಲ್ಲಿ “ಕೆ.ಜಿ.ಎಫ್-2” ಅಬ್ಬರ ಶುರು..!

- Advertisement -

ಕೆಜಿಎಫ್ ಚಾಪ್ಟರ್ -೨ ಕ್ರೇಜ್ ಈಗ ನಿಮ್ಮ ಊಹೆಗೂ ಮೀರಿ ಮುಂದೆ ಸಾಗ್ತಿದೆ..ಎಸ್, ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿರೋ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-೨ ಏಷ್ಯಾ ಖಂಡವನ್ನೂ ಮೀರಿ ಮುಂದೆ ಸಾಗ್ತಿದೆ.

ಕನ್ನಡದ ಸಿನಿಮಾ ಕೆಜಿಎಫ್ ಅನ್ನೋದಕ್ಕೆ ಪ್ರತಿಯೊಬ್ಬ ಕನ್ನಡಿಗನಿಗೂ ಬಹಳ ಹೆಮ್ಮೆ ಆಗುತ್ತೆ.. ರಾಕಿಂಗ್ ಸ್ಟಾರ್ ಯಶ್ ತಾನು ಅಂದು ನುಡಿದಂತೆಯೇ ಇವತ್ತು ನಡೆದ್ಕೊಳ್ತಿದ್ದಾರೆ. ಅವತ್ತು ಕನ್ನಡ ಇಂಡಸ್ಟಿçÃನ ನೆಕ್ಸ್÷್ಟ ಲೆವೆಲ್‌ಗೆ ತಗೊಂಡೋಗ್ತೀನಿ ಅಂತ ಖಡಕ್ಕಾಗಿ ಹೇಳಿದ್ದ ಯಶ್ ಇವತ್ತು ಬರೀ ನೆಕ್ಸ್÷್ಟ ಲೆವೆಲ್‌ಗಷ್ಟೇ ಅಲ್ಲ ಏಷ್ಯಾ ಖಂಡವನ್ನೂ ಮೀರಿ ನಮ್ಮ ಕನ್ನಡ ಭಾಷೆ, ಕನ್ನಡ ಚಿತ್ರರಂಗವನ್ನ ಎಲ್ಲೆಡೆ ಪಸರಿಸುತ್ತಿದ್ದಾರೆ.

ಹೌದು,ಕೆಜಿಎಫ್ ಸಿನಿಮಾ ನಿಮ್ಗೆಲ್ಲಾ ಗೊತ್ತಿರೋ ಹಾಗೇ ಭಾರತ ದೇಶದ ಜೊತೆಗೆ ಓವರ್‌ಸೀಸ್‌ನಲ್ಲಿಯೂ ತೆರೆಕಂಡು ಭಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಕೆಜಿಎಫ್-೨ ಅದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟು ಪ್ರಚಾರ ಕಾರ್ಯವನ್ನ ಮಾಡ್ತಿದೆ. ಏಷ್ಯಾ ಖಂಡದ ಜೊತೆಗೆ ಯೂರೋಪ್ ಖಂಡದಲ್ಲೂ ಕೆಜಿಎಫ್-೨ ದರ್ಬಾರ್ ಮಾಡಲು ರಾಕಿಭಾಯ್ ರೆಡಿಯಾಗಿದ್ದಾರೆ.

ಹೌದು , ಯೂರೋಪ್‌ನ ೨೮ಕ್ಕೂ ಹೆಚ್ಚು ದೇಶಗಳಲ್ಲಿ ಕೆಜಿಎಫ್-೨ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಅರ್ಮೇನಿಯಾ, ಆಸ್ಟಿçಯಾ, ಬೆಲ್ಜಿಯಂ, ಡೆನ್ಮಾರ್ಕ್, ಫ್ರಾನ್ಸ್, ಜಾರ್ಜಿಯಾ, ಗ್ರೀಸ್, ಇಟಲಿ, ರಷ್ಯಾ, ಸ್ಪೇನ್, ಸ್ವಿಜರ್‌ಲ್ಯಾಂಡ್, ಸ್ವೀಡನ್ ,ಪೋಲ್ಯಾಂಡ್, ಹೀಗೆ ೨೮ಕ್ಕೂ ಹೆಚ್ಚು ದೇಶಗಳಲ್ಲಿ ರಾಕಿಭಾಂಯ್ ಏಪ್ರಿಲ್ ೧೪ರಂದು ಅಬ್ಬರಿಸೋಕೆ ಸಜ್ಜಾಗಿದ್ದಾನೆ.

ನಳಿನಾಕ್ಷಿ, ಕರ್ನಾಟಕ ಟಿವಿ

- Advertisement -

Latest Posts

Don't Miss