ಮೇಷ: ಸಾಂಸಾರಿಕವಾಗಿ ಸಹಧರ್ಮಿಣಿಗೆ ಆರೋಗ್ಯ ಸಮಸ್ಯೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಪ್ರವಾಸಾದಿಗಳಿಗೆ ಸಂತಸ ಸಿಗಲಿದೆ. ಧಾನ್ಯದ ವ್ಯಾಪಾರದಲ್ಲಿ ರಖಂ ವ್ಯಾಪಾರಿಗಳಿಗೆ ಒಳ್ಳೆಯ ಆದಾಯವಿದೆ. ಸಂತಸ ತಂದೀತು.

ವೃಷಭ: ಆಗಾಗ ಬಂಧುಮಿತ್ರರ ಆಗಮನವಿದೆ. ಮಕ್ಕಳ ಬೇಡಿಕೆಗೆ ಮನೆಗೆ ವಾಹನ ಬರಲಿದೆ. ಮನೆಯಲ್ಲಿ ಚೋರ ಭಯವಿದೆ. ಹಳೇ ಶತ್ರುಗಳು, ದಾಯಾದಿಗಳು ದ್ವೇಷ ಸಾಧಿಸಿಯಾರು. ವಿದ್ಯಾರ್ಥಿಗಳ ವಿದ್ಯಾರ್ಜನೆಯಲ್ಲಿ ಯಶಸ್ಸು ಇದೆ.
ಮಿಥುನ : ಕುದುರಿದ ವಿವಾಹ ಪ್ರಸ್ತಾವಕ್ಕೆ ಬಿರುಕು ಮೂಡಲಿದೆ. ವ್ಯಾಪಾರ ವಹಿವಾಟಿನಲ್ಲಿ ನಷ್ಟವೇ ಹೆಚ್ಚಾದೀತು. ಬಂಧಿಮಿತ್ರರಿಂದ ಸಾಲಕ್ಕಾಗಿ ಯಾತನೆ ಇದೆ. ಜಾಗೃತೆ ಇರಲಿ ಸಂಚಾರಾದಿಗಳಿಂದ ಅವಘಡ ಸಂಭವವಿದೆ.
ಕರ್ಕ: ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬಂದೀತು. ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣ ಚೇತರಿಕೆ ತರಲಿದೆ. ಶುಭಮಂಗಲ ಕಾರ್ಯಗಳಿಗಾಗಿ ಚಿಂತನೆ ಕಾರ್ಯಗತವಾದೀತು.
ಸಿಂಹ: ನಾನಾ ರೀತಿಯ ಕೆಲಸ ಕಾರ್ಯಗಳು ಪೂರ್ಣತೆಯನ್ನು ಪಡೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಸಂತಸ ತರಲಿದೆ. ವೈವಕ್ತಿಕವಾಗಿ ರಸಮಯಸಮಯವಿದು. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರಲಾರದು.
ಕನ್ಯಾ : ನಿಶ್ಚಿತ ಗುರಿಯತ್ತ ಸಾಗುವಲ್ಲಿ ಆಗಾಗ ಅಡಚಣೆ ತಾಪತ್ರಯಗಳು ಕಂಡುಬಂದಾವು. ವೃತ್ತಿರಂಗದಲ್ಲಿ ಹೊಂದಾಣಿಕೆಗಳು ಮುನ್ನಡೆಗೆ ಸಾಧಕವಾಗಲಿದೆ. ಅವಿವಾಹಿತರಿಗೆ ಮಂಗಲ ಭಾಗ್ಯಕ್ಕೆ ಇದು ಉತ್ತಮ ಸಮಯ.
ತುಲಾ : ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಸುಧಾರಿಸುತ್ತಾ ಹೋಗಲಿದೆ. ಆರೋಗ್ಯಯದಲ್ಲಿ ಮಾತ್ರ ಹೆಚ್ಚಿನ ರೀತಿಯಲ್ಲಿ ಆಗಾಗ ತಪಾಸಣೆ ಅಗತ್ಯ ಇರುತ್ತದೆ. ಕಾರ್ಯಕ್ಕೆ ಆತುರತೆ ಸಲ್ಲದು. ಸಾವಧಾನವಾಗಿ ಯೋಚಿಸಿ, ಮುನ್ನಡೆಯಿರಿ.
ವೃಶ್ಚಿಕ: ಗೃಹದಲ್ಲಿ ಆಪ್ತೇಷ್ಟರ ಭೇಟಿ, ಸಹಕರಾದಿಗಳಿಂದ ಸಂತಸ ತಂದೀತು. ನಾನಾ ರೀತಿಯಲ್ಲಿ ದುಂದುವೆಚ್ಚಗಳು ಅತಿರೇಕವಾದಾವು. ಅವಿರತ ಚಟುವಟಿಕೆಗಳು ದೇಹಾರೋಗ್ಯದಲ್ಲಿ ಪರಿಣಾಮ ಬೀರದಂತೆ ಜಾಗೃತೆ ವಹಿಸುವುದು.
ಧನು: ಸಾಮಾಜಿಕ ಕಾರ್ಯದಲ್ಲಿ ನಿಮಗೆ ಮೆಚ್ಚುಗೆ ಸಿಗಲಿದೆ. ಆತ್ಮೀಯರಿಂದ ಸಿಗುವ ಸಹಕಾರ ಮುನ್ನಡೆಗೆ ಸಾಧಕವಾಗಲಿದೆ. ಎಡರು ತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಅನುಭವಕ್ಕೆ ಬರಲಿದೆ.
ಮಕರ: ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಸುಧಾರಿಸುವುದು. ಋಣಬಾಧೆಯಿಂದ ಮುಕ್ತರಾಗುವಿರಿ. ಸರಕಾರಿ ಕೆಲಸ ಕಾರ್ಯಗಳು ಸಿದ್ಧಿಯಾಗಿ ಮನಸ್ಸಿಗೆ ನೆಮ್ಮದಿ ತರಲಿದೆ. ಸಾಂಸಾರಿಕವಾಗಿ ತುಸು ನೆಮ್ಮದಿ ಸಂತಸವಿರುತ್ತದೆ.
ಕುಂಭ: ದೈವಾನುಗ್ರಹ ಆರಂಭವಾಗಿದೆ. ನಿರೀಕ್ಷಿತ ಕಾರ್ಯಸಾಧನೆಗೆ ಅನುಕೂಲವಾದೀತು. ದೂರ ಪ್ರವಾಸ, ತೀರ್ಥಾಟನೆ ನಿಮ್ಮ ಇಚ್ಛೆ ರೂಪದಲ್ಲಿ ನೆರವೇರಲಿದೆ. ಅವಿವಾಹಿತರಿಗೆ ನಿರೀಕ್ಷಿತ ರೂಪದಲ್ಲಿ ಕಂಕಣಬಲವು ಒದಗಿತು.
ಮೀನ: ಧರ್ಮಕಾರ್ಯದಲ್ಲಿ ವಿಳಂಬ, ಹಿತಶತ್ರುಗಳ ಬಾಧೆ, ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು, ಭಯದ ಚಿಂತೆ ನಿಮ್ಮನ್ನು ಬಾಧಿಸಲಿದೆ. ಸ್ವತಂತ್ರ್ಯ ಉದ್ಯೋಗಿಗಳು ತುಸು ಚೇತರಿಕೆಯನ್ನ ಪಡೆದು ಸಂತಸ ಪಡೆಯಲಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.