ಮೇಷ: ದಂಪತಿಗಳಿಗೆ ಸಂತಾನ ಲಾಭವಿದೆ. ತಂದೆ ಮಕ್ಕಳೊಳಗೆ ವ್ಯವಹಾರ ಸಂಬಂಧ ಭಿನ್ನಾಭಿಪ್ರಾಯ ಮೂಡಬಹುದು. ದೂರ ಸಂಚಾರದಲ್ಲಿ ಅಪಘಾತ ಭೀತಿ ಇದೆ. ದೇವತಾ ಕಾರ್ಯಗಳಲ್ಲಿ ಸಂತಸ ಮತ್ತು ನೆಮ್ಮದಿ ಇದೆ.

ವೃಷಭ : ತಾಂತ್ರಿಕ ವೃತ್ತಿಯವರಿಗೆ ಮುನ್ನಡೆ ಇದೆ. ರೈತಾಪಿ ವರ್ಗಕ್ಕೆ ಋಣಭಾರ ಪರಿಹಾರವಾಗಲಿದೆ. ದಿನಸಿ ವರ್ತಕರಿಗೆ ಲಾಭವಿದೆ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋಗಲಿದೆ. ಧನ ವಿನಿಯೋಗದಿಂದ ಆದಾಯ ಉತ್ತಮ.
ಮಿಥುನ : ಪಿತ್ತದೋಷದಿಂದ ಆರೋಗ್ಯ ಕೆಡಲಿದೆ. ಮಕ್ಕಳಿಗೆ ಉದ್ಯೋಗ ಲಾಭದ ಯೋಗ ಸಂತಸ ತರಲಿದೆ. ವೃತ್ತಿರಂಗದಲ್ಲಿ ಕೈ ಕೆಳಗಿನವರ ಅಸಹಕಾರದಿಂದ ಬೇಸರ ತರಲಿದೆ. ನೌಕರ ವರ್ಗಕ್ಕೆ ನಿರಾಸೆ ಇದೆ.
ಕರ್ಕ : ಆರ್ಥಿಕವಾಗಿ ಎಷ್ಟಿದ್ದರೂ ಸಾಲದು ಎಂಬ ಅನುಭವ ಉಂಟಾದಿತು. ಕುಟುಂಬ ಕಲಹ ಮೂರನೇಯವರ ಮಧ್ಯಸ್ಥಿಕೆಯಿಂದ ಕಾರ್ಯಸಾಧನೆಯಾದೀತು. ಆರೋಗ್ಯದಲ್ಲಿ ಸುಧಾರಣೆ ಕಂಡರೂ ಪ್ರಯಾಣದಿಂದ ಆರೋಗ್ಯ ಕೆಡಲಿದೆ.
ಸಿಂಹ : ಚಾಡಿ ಮಾತಿಗೆ ಮನಕೊಟ್ಟು ಸಂಬಂಧಿಕರೊಳಗೆ ಕಲಹ ತಂದೀತು. ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ಪರಸ್ಥಳ ಯಾನವಿದೆ. ಕೋರ್ಟು ಕಚೇರಿಯ ಕಾರ್ಯದಲ್ಲಿ ಮುನ್ನಡೆ ಇದೆ. ದಿನಾಂತ್ಯದಲ್ಲಿ ಒಳ್ಳೆಯ ವಾತಾವರಣ.
ಕನ್ಯಾ : ಹಲವು ಕಾರ್ಯಗಳಲ್ಲಿ ತೊಡಗಿಸಿದ ಹಣ ಫಲಿತಕ್ಕೆ ಬಾರದೇ ಹಪಹಪಿಸುವಂತಾದೀತು. ವಿನಾಕಾರಣ ಖರ್ಚು ವೆಚ್ಚ ಹೆಚ್ಚಲಿದೆ. ಕಲಿತ ವಿದ್ಯೆ ಫಲ ನೀಡಲಿದೆ. ಸ್ಥಿರ ಸೊತ್ತುಗಳ ಖರೀದಿಗಾಗಿ ಧನವ್ಯಯವು ತೋರಿಬರಲಿದೆ.
ತುಲಾ: ಪುನಃ ನಿವೇಶನ ಖರೀದಿ ಯೋಗವಿದೆ. ಕೋಪ, ಉದ್ರೇಕದಿಂದ ರಕ್ತದೋಷದಿಂದ ಆರೋಗ್ಯ ಏರುಪೇರಾದೀತು.ಸಂಚಾರದಿಂದ ದೂರವಿದ್ದಷ್ಟು ಉತ್ತಮ. ಶತ್ರುಕಾಟ, ದಮನ ಕಾರ್ಯದಲ್ಲಿ ವಿಘ್ನ ಭಯವಿದೆ.
ವೃಶ್ಚಿಕ : ಪಾಲು ಬಂಡವಾಳದಲ್ಲಿ ಅಂತಃಕಲಹವಾದೀತು. ಬೀದಿ ಬದಿ ವ್ಯಾಪಾರಿ, ಹೊಟೇಲ್ ವ್ಯಾಪಾರಿಗಳಿಗೆ ಆತಂಕ ಕಡಿಮೆಯಾಗಲಿದೆ. ವಿಲಾಸಿ ಸಾಮಗ್ರಿಗಳ ವರ್ತಕರಿಗೆ ಲಾಭಾಂಶ ಹೆಚ್ಚರಲಿದೆ. ರಾಜಕೀಯದಲ್ಲಿ ಸ್ಥಾನಭ್ರಂಶ ಯೋಗವಿದೆ.
ಧನು :ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ನಿರತ್ಸಾಹ ತರಲಿದೆ. ಬಾಡಿಗೆದಾರರಿಗೆ ಗೃಹ ಬದಲಿ ಸಂಭವವಿದೆ. ಹೊಸ ಉದ್ಯೋಗವೊಂದು ಅಭಿವೃದ್ಧಿ ತೆಗೆದುಕೊಳ್ಳಲಿದೆ. ಹಿರಿಯರ ದುರಭಿಮಾನದ ವರ್ತನೆ ಬೇಸರ ತಂದೀತು.
ಮಕರ : ಕೆಲಸದಲ್ಲಿ ಮೇಲಾಧಿಕಾರಿಗಳ ಶ್ಲಾಘನೆಯಿಂದ ತುಸು ಸಂತಸವಾಗಲಿದೆ. ಯೋಗ್ಯ ವಯಸ್ಕರಿಗೆ ಮಂಗಲಕಾರ್ಯದ ಪ್ರಸಾಪ ಬಂದೀತು. ಕಾರ್ಯಕ್ಷೇತ್ರದಲ್ಲಿ ಕಾರ್ಯದೊತ್ತಡವಿದೆ. ಆರೋಗ್ಯದಲ್ಲಿ ಜಾಗೃತೆ.
ಕುಂಭ : ದುಡುಕು ಬುದ್ಧಿಯಿಂದ ಆಕಸ್ಮಿಕವಾಗಿ ಧನವ್ಯಯವಾದೀತು. ವಾತ ದೋಷಾದಿಗಳಿಂದ ಹಿರಿಯರಿಗೆ ಔಷಧಿ ಸೇವನೆ ಅನಿವಾರ್ಯವಾದೀತು. ಸಂಚಾರದಿಂದ ದೂರವಿರಿ. ಜಲವೃತ್ತಿಯವರಿಗೆ ಉನ್ನತಿ ಇದೆ.
ಮೀನ: ಸ್ವಾಭಿಮಾನಕ್ಕೆ ಧಕ್ಕೆಯಾಗಲಿದೆ. ಸ್ವಲ್ಪದರಲ್ಲಿ ಅಪಘಾತ ಭಯ ತಪ್ಪಲಿದೆ. ಉದ್ಯೋಗಿಗಳಿಗೆ ಮುಂಭಡ್ತಿ ಸಂಭವವಿದೆ. ಕ್ರೀಡಾಕಾರ್ಯಕ್ರಮಗಳಲ್ಲಿ ಯಶೋಲಾಭವಿದೆ. ದಿನಸಿ ವ್ಯಾಪಾರಿಗಳಿಗೆ ಒಳ್ಳೆ ಲಾಭ ಸಿಗಲಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.




